ಗುಣಮಟ್ಟ ರಸ್ತೆ ಪ್ರಾರಂಭಿಸುವಂತೆ : ಗುತ್ತೇದಾರ ಆಗ್ರಹ
ಕಾಳಗಿ.ಎ.18: ತಾಲೂಕಿನ ಕೋಡ್ಲಿ ಗ್ರಾಮದ ಮುಖ್ಯ ರಸ್ತೆ ಕಾಮಗಾರಿಯ ಬಹುದಿನಗಳಿಂದ ನೆನೆಗುದಿಗೆ ಹಾಕಿ ಪ್ರಸ್ತುತ ಈಗ ಡ್ರೈನೇಜ್ ಕಾಮಗಾರಿಯನ್ನು ಸಂಪೂರ್ಣವಾಗಿ ಕಳಪೆ ಮಟ್ಟದಿಂದ ಕೂಡಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಸೇವೆಯಿಂದ ವಜಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗುತ್ತಿಗೆದಾರರ ಪರವಾನಿಗೆ ಕಪ್ಪು ಪಟ್ಟಿಗೆ ಸೇರಿಸಿ ಕಾಮಗಾರಿ ಗುಣಮಟ್ಟ ಪರಿಶೀಲಿಸಬೇಕೆಂದು ಪ್ರಾ. ಕೃ. ಪ. ಸ. ಸ. ( ನಿ ) ಉಪಾಧ್ಯಕ್ಷ ನಾಗೇಶ್.ಎ. ಗುತ್ತೇದಾರ ಕೋಡ್ಲಿ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘ ಅಧ್ಯಕ್ಷ ಗುರುನಂದೇಶ ಕೋಣಿನ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುಮಾರು ಎರಡು ವರ್ಷಗಳಿಂದ ಕಾಮಗಾರಿ ಗುಣಮಟ್ಟದಿಂದ ಪ್ರಾರಂಭಿಸುವಂತೆ ಅನೇಕ ಬಾರಿ ಪ್ರತಿಭಟನೆ ರಸ್ತೆ ರೋಖೊ ಚಳುವಳಿಯಂತಹ ಹೋರಾಟಗಳು ಮಾಡಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ. ಈಗ ಒಂದು ವಾರದಿಂದ ರಸ್ತೆಯ ಪಕ್ಕ ಡ್ರಾನೇಜ್ ಕಾಮಗಾರಿ ಪ್ರಾರಂಭೀಸಿದ್ದಾರೆ. ಈ ಕಾಮಗಾರಿಯಲ್ಲಿ ಡಸ್ಟ್ ಹಾಗೂ ಗುಣಮಟ್ಟ ರಹೀತ ಸಿಮೆಂಟ್ ಸಣ್ಣ – ಪುಟ್ಟ 6 – 8 ಎಮ್ ಎಮ್ ರಾಡುಗಳು ಬಳಸಿ ಬೇಕಾಬಿಟ್ಟಿಯಾಗಿ ಡ್ರಾನೇಜ್ ಕಾಮಗಾರಿಯನ್ನು ಕಳಪೆ ಮಟ್ಟದಿಂದ ಮಾಡುತಿದ್ದಾರೆ. 2021- 2022 ನೇ ಸಾಲಿನಲ್ಲಿ ಪ್ರಾರಂಭಮಾಡಿ ಮುಗಿಸಬೇಕಾದ ಕಾಮಗಾರಿಯನ್ನು 2024 ನೇ ಸಾಲಿನಲ್ಲಿ ಯವರೆ ಮುಂದೂಡಿ ಪ್ರಸುಕ್ತ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಬೇಕೆಂದು ಹೇಳಿದರು.