ದೇವಸ್ಥಾನಗಳಲ್ಲಿ ರಾಮನ ಫೋಟೊ ಹಚ್ಚುವ ಕಾರ್ಯಕ್ರಮ
ಬೀದರ:ಏ.18: ಭಾರತೀಯ ಜನತಾ ಪಕ್ಷ ದೇಶಾದ್ಯಂತ ರಾಮನವಮಿಯ ನಿಮಿತ್ಯ ಎಲ್ಲಾ ದೇವಸ್ಥಾನಗಳಲ್ಲಿ ಮಾಡಿದ ಪೂಜಾ ಕಬೀರ ದಾಸರ ದೋಹ ಸಹಿತ ಫೋಟೋ ಹಚ್ಚುವ ಕಾರ್ಯಕ್ರಮವನ್ನು ಆಯೋಜಿಸಿದ್ದು ಇಂದು ಬೀದರ ಜಿಲ್ಲೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸೋಮನಾಥ ಪಾಟೀಲ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಐತಿಹಾಸಿಕ ರಾಮಮಂದಿರ ಮತ್ತು ವನವಾಸಿ ರಾಮಮಂದಿರದಲ್ಲಿ ಸೂಸೂತ್ರವಾಗಿ ಪೂಜೆ ಸಲ್ಲಿಸಿ ದೇವಸ್ಥಾನಗಳಲ್ಲಿ ರಾಮನ ಫೋಟೋ ಹಾಕುವ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಸಂಧರ್ಭದಲ್ಲಿ ಮಾಜಿ ಬಿಡಿಎ ಅಧ್ಯಕ್ಷ ಬಾಬು ವಾಲಿ, ಪ್ರಶಿಕ್ಷಣ ಪ್ರಕೋಷ್ಠದ ರಾಜ್ಯ ಸಂಚಾಲಕರಾದ ರಾಜಶೇಖರ್ ನಾಗಮೂರ್ತಿ, ನರೇಶ ಗೌಳಿ, ಸಂಜು ಘನತೆ, ಪ್ರಕಾಶ ಗೌಳಿ, ಸತೀಶ ಮೊಟ್ಟಿ, ಮನೋಹರ ದಂಡೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.