ಅಗ್ರಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸನ್ಮಾನ
ಬೀದರ:ಏ.18:ಹುಮನಾಬಾದ ತಾಲೂಕಿನ ಹಳ್ಳಿಖೇಡ(ಬಿ) ಗ್ರಾಮದ ಬಸವತೀರ್ಥ ವಿದ್ಯಾಪೀಠ ಪದವಿ ಪೂರ್ವ ಕಾಲೇಜು ಹಳ್ಳಿಖೇಡ(ಬಿ) ನಲ್ಲಿ 2024 ನೇ ಸಾಲಿನ ಮಾರ್ಚ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಪರೀಕ್ಷೆಗೆ ಹಾಜರಾದ ಒಟ್ಟು 233 ವಿದ್ಯಾರ್ಥಿಗಳಲ್ಲಿ 232 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಅಗ್ರಶ್ರೇಣಿಯಲ್ಲಿ 56, ಪ್ರಥಮ ದರ್ಜೆಯಲ್ಲಿ 167, ದ್ವಿತೀಯ ದರ್ಜೆಯಲ್ಲಿ 08 ಮತ್ತು ತೃತೀಯ ದರ್ಜೆಯಲ್ಲಿ 01 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದು ಒಟ್ಟು ಕಾಲೇಜಿ ಫಲಿತಾಂಶ 99.57% ಪ್ರತಿಶತ ಬಂದಿರುತ್ತದೆ.
ಕಲಾ ವಿಭಾಗದಲ್ಲಿ ಕಾವೇರಿ ತಂದೆ ಬಸಪ್ಪÀ 600/574 ಅಂಗಳನ್ನು ಪಡೆದು ಕಲಾ ವಿಭಾಗಕ್ಕೆ ಪ್ರಥಮಸ್ಥಾನ ಪಡೆದಿರುತ್ತಾಳೆ. ಕುಮಾರ ಪರಶುರಾಮ ತಂದೆ ಕುಪೇಂದ್ರ 600/573 ಮತ್ತು ಕುಮಾರಿ ಮಾಲಾಶ್ರೀ ತಂದೆ ದತ್ತಪ್ಪ 600/560 ಅಂಕಗಳನ್ನು ಪಡೆದು ಕಾಲೇಜಿಗೆ ದ್ವಿತೀಯ ಹಾಗೂ ತ್ರತೀಯ ಸ್ಥಾನ ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಕುಮಾರಿ ಶಿವಾನಿ ತಂದೆ ಬಂಡೆಪ್ಪ 600/555 ಅಂಕಗಳನ್ನು ಪಡೆದು ವಾಣಿಜ್ಯ ವಿಭಾಗಕ್ಕೆ ಪ್ರಥಮಸ್ಥಾನ ಪಡೆದಿರುತ್ತಾಳೆ. ಅದರಂತೆ ಕುಮಾರಿ ಪಿಂಕು ತಂದೆ ಸಿದ್ಧಾರೂಢ 600/552 ಮತ್ತು ಕುಮಾರಿ ತನವೀರ ತಂದೆ ನೂರಅಲಿ ಇವಳು 600/544 ಅಂಕಗಳನ್ನು ಪಡೆದು ದ್ವಿತೀಯ ಹಾಗೂ ತ್ರತೀಯ ಸ್ಥಾನ ಪಡೆದಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಕುಮಾರ ಪ್ರವೀಣಕುಮಾರ ತಂದೆ ತುಕರಾಮ 600/ 554 ಅಂಕಗಳನ್ನು ಪಡೆದು ವಿಜ್ಞಾನ ವಿಭಾಗಕ್ಕೆ ಪ್ರಥಮಸ್ಥಾನ ಪಡೆದಿರುತ್ತಾನೆ ಅದರಂತೆ ಕುಮಾರಿ ರಕ್ಷೀತಾ ತಂದೆ ರಾಜಶೇಖರ 600/548 ಮತ್ತು ಕುಮಾರ ಪ್ರವೀಣಕುಮಾರ ತಂದೆ ಕುಪೇಂದ್ರ ಇವನು 600/543 ಅಂಕಗಳನ್ನು ಪಡೆದು ದ್ವಿತೀಯ ಹಾಗೂ ತ್ರತೀಯ ಸ್ಥಾನ ಪಡೆದಿರುತ್ತಾರೆ.
ವಿಷಯವಾರು 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ : ಇತಿಹಾಸ ವಿಷಯದಲ್ಲಿ 02 ವಿದ್ಯಾರ್ಥಿಗಳು ಮತ್ತು ಸಮಾಜಶಾಸ್ತ್ರ ವಿಷಯದಲ್ಲಿ 01 ವಿದ್ಯಾರ್ಥಿ ಉತ್ತೀರ್ಣರಾಗಿರುತ್ತಾನೆ.
ಈ ಕಾರ್ಯಕ್ರಮದ ಘನಾಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಕೇಂದ್ರ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ ಕೇಶವರಾವ ತಳಘಟಕರ್ ಅವರು ಮಾತನಾಡಿ ಮಕ್ಕಳು ಒಳ್ಳೆಯ ರೀತಿಯಲ್ಲಿ ಅಭ್ಯಾಸ ಮಾಡಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು ಎಂಬುದಕ್ಕೆ ನಮ್ಮ ಕಾಲೇಜಿನ ಮಕ್ಕಳೇ ಸಾಕ್ಷಿ. ಇನ್ನು ಹೆಚ್ಚಿನ ರೀತಿಯಲ್ಲಿ ಅಭ್ಯಾಸಮಾಡಿ ಇನ್ನು ಒಳ್ಳೆ ಫಲಿತಾಂಶವನ್ನು ಪಡೆಯಬಹುದು ಎಂದು ಮಕ್ಕಳಿಗೆ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸ್ಥಳಿಯ ಸಮಿತಿಯ ಅಧ್ಯಕ್ಷರಾದ ಶ್ರೀ ಸೋಮಯ್ಯಾ ಹಿರೇಮಠ, ಅತಿಥಿಗಳಾಗಿ ಸ್ಥಳಿಯ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ರಮೇಶ ಮಹೇಂದ್ರಕರ್, ಶಾಲಾ ಆಡಳಿತಾಧಿಕಾರಿಗಳಾದ ಶ್ರೀ ಗುಂಡಯ್ಯಾ ತೀರ್ಥಾ, ಕಾಲೇಜಿನ ಪ್ರಾಚಾರ್ಯರಾದ ಶ್ರೀ ಮಸ್ತಾನ್ ಪಟೆಲ್, ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀ ಬಸವರಾಜ ದುಬಲಗುಂಡಿಕರ್, ಪ್ರೌಢ ಶಾಲಾ ಮುಖ್ಯಗುರುಗಳಾದ ಶ್ರೀ ಚಂದ್ರಕಾಂತ ಬಿರಾದರ, ಹಾಗೂ ಶಾಲಾ/ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.