ಹೊಸ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಮನವಿ
ಅಫಜಲಪುರ:ಏ.18: ಪಟ್ಟಣದಲ್ಲಿ ಹೊಸ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಕೀಲರ ಸಂಘದ ಎಲ್ಲ ಹಿರಿಯ ವಕೀಲರು ಶಾಸಕರಲ್ಲಿ ತೆರಳಿ ಮನವಿ ಮಾಡಿದರು.
ನಂತರ ಮನವಿಗೆ ಸ್ಪಂದಿಸಿದ ಶಾಸಕ ಎಂ.ವೈ ಪಾಟೀಲ್ ಅವರು ವಕೀಲರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಇದೇ ವೇಳೆ ವಕೀಲರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಎಸ್ ಪಾಟೀಲ್ ಅವರಿಗೆ ಶಾಸಕ ಎಂ.ವೈ ಪಾಟೀಲ್ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಎಂ.ಎಲ್ ಪಟೇಲ್ ಬಳೂಂಡಗಿ, ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ವೈ ಪಾಟೀಲ್, ಜಿ.ಪಂ ಮಾಜಿ ಸದಸ್ಯ ಸಿದ್ದಾರ್ಥ ಬಸರಿಗಿಡ, ಎಫ್.ಎಂ ಇನಾಮದಾರ್, ವಾಸಿಮ್ ಜಾಗೀರದಾರ್, ಡಿ.ಡಿ ದೇಶಪಾಂಡೆ, ಸಿ.ಎಸ್ ಹಿರೇಮಠ, ಸುಧೀರ ಹತ್ತಿ, ಪದ್ಮರಾಜ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.