ಕಾಂಗ್ರೆಸ್ ನವರು ಪ್ರಧಾನಿ ಅಭ್ಯರ್ಥಿಯನ್ನೇ ಘೋಷಿಸಿಲ್ಲ ಗೆಲ್ಲೋದು ಭ್ರಮೆ . ಯಡಿಯೂರಪ್ಪ   ಟೀಕೆ
ಸಂಜೆವಾಣಿ ವಾರ್ತೆ
ಕೊಪ್ಪಳ:ಎ,18- ಲೋಕಸಭಾ  ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್   ಗೆಲ್ಲುವ ಭ್ರಮೆಯಲ್ಲಿದೆ ಆದರೆ ಪ್ರಧಾನಿ ಅಭ್ಯರ್ಥಿ ಘೋಷಿಸಿಲ್ಲ ಇನ್ನು ಗೆಲ್ಲೋದು ದೂರದ ಮಾತು ಎಂದು ಮಾಜಿ ಸಿ.ಎಂ. ಯಡಿಯೂರಪ್ಪ ಟೀಕಿಸಿದರು.
 ಬುಧವಾರ ಕೊಪ್ಪಳದ ಕ್ರೀಡಾಂಗಣದಲ್ಲಿ ಜಿಲ್ಲಾ ಬೀ ಜೇ ಪೀ ಆಯೋಜಿಸಿದ್ದ ವಿಜಯ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದರು .ಈಗ ಎಲ್ಲೆಡೆ ಬಿಜೆಪಿ ಅಲೆ ಇದೆ ಕಾಯ೯ಕತ೯ರ ಉತ್ಸಾಹ ನೋಡಿದರೆ ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನೆಡೆ ಯಾಗುವುದರಲ್ಲಿ ಸಂದೇಹವಿಲ್ಲ.  ಕಾಯ೯ಕತ೯ರು   ಹೆಚ್ಚಿನ ಸಂಖ್ಯೆಯಲ್ಲಿ ಮನೆಗೆ ಮನೆಗೆ ತೆರಳಿ   ಪ್ರಧಾನಿ ಅಭ್ಯರ್ಥಿ ಮೋದಿಯವರ ಕೈ ಬಲ ಪಡಿಸಲು    ಬಿಜೆಪಿ ಅಭ್ಯರ್ಥಿ ಬಸವರಾಜ್ ಕ್ಯಾವಟರ್ ಪರ ಮತಯಾಚಿಸಿ ಹೆಚ್ಚಿನ ಸಂಖ್ಯೆಯಲ್ಲಿ  ಆಯ್ಕೆ ಮಾಡುವಂತೆ ಕೋರಿದರು. ದೇಶದಲ್ಲಿ ಪ್ರಧಾನಿ ಮೋದಿಯವರು ಇಂದು ಜಗತ್ತು ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ೫೦೦ ವರುಷಗಳಿಂದ ನೆನೆಗುದಿಯಲ್ಲಿದ್ದ . ಶ್ರೀರಾಮ ಮಂದಿರವನ್ನು ನಿಮಾ೯ಣ  ಯಶಸ್ವಿ ಯಾಗಿ ನೆರವೇರಿತು. ಇಂಥ ಅಭಿವೃದ್ದಿ ಕಾಳಜಿ ಹೊಂದಿದ ಬಿಜೆಪಿ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ , ಕಾಯ೯ ಕತ೯ರೂ  ಮನೆ ಮನೆಗೆ ತೆರಳಿ ಬಿಜೆಪಿ ಸಾಧನೆ ಹೇಳಿ ಬಿಜೆಪಿಗೆ ಗೆಲುವು ಸಾಧಿಸುವಂತೆ ಶ್ರಮಿಸಬೇಕೆಂದು ತಿಳಿಸಿದರು. ಮಾಜಿ ಸಚಿವರಾದ ಹಾಲಪ್ಪ ಆಚಾರ, ಬೀ.ಶ್ರೀರಾಮುಲು, ಶಾಸಕ ಜನಾದ೯ನ ರೆಡ್ಡಿ,  ಕೆ. ವಿರೂಪಾಕ್ಷಪ್ಪ, ದೊಡ್ಡನಗೌಡ ಪಾಟೀಲ್,ವೆಂಕಟರಾವ್ ನಾಡಗೌಡ,  ಪರಣ್ಣ ಮುನವಳ್ಳಿ, ಸಿ.ವಿ.ಚಂದ್ರಶೇಖರ್, ಪ್ರತಾಪಗೌಡ ಪಾಟೀಲ್, ಬಸವರಾಜ್ ಕ್ಯಾವಟರ, ನವೀನ್ ಕುಮಾರ್. ಗುಳ ಗನ್ನವರ್, ಸಿ.ಟೀ.ರವಿ, ಮುರುಗೇಶ್ ನಿರಾಣಿ , ಬಸವರಾಜ್ ದಡೆಸುಗುರು, ಬಸವಲಿಂಗಪ್ಪ ಭುತೆ, ಎಂ.ಬೀ.ಅಳವಂಡಿ, ಮಲ್ಲನಗೌಡ ಕೋನ್ಸನ ಗೌಡ ಮೂದಲಾದವರು ಉಪಸ್ಥಿತರಿದ್ದರು.