ನಾಲ್ಕೈದು ದಿನದಿಂದ  ಜಂಗಮಸೋವೇನಹಳ್ಳಿಯಲ್ಲಿ ವಾಂತಿಬೇಧಿ,ಇಂದು ನಿಯಂತ್ರಣ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಏ.18 :-   ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನ ಜಂಗಮಸೊವೇನಹಳ್ಳಿ ಗ್ರಾಮದಲ್ಲಿ  ವಾಂತಿ ಬೇಧಿ ಪ್ರಕರಣ ಕಾಣಿಸಿಕೊಳ್ಳುತ್ತಿದ್ದು ಆರೋಗ್ಯ ಇಲಾಖೆ ಮೊಕ್ಕಾo ಹೂಡಿ ಚಿಕಿತ್ಸೆ ನೀಡಿದ ಪರಿಣಾಮ ಇಂದು ನಿಯಂತ್ರಣವಾಗಿರುವ ಬಗ್ಗೆ ತಿಳಿದಿದೆ. ಗ್ರಾಮಕ್ಕೆ ವಿಜಯನಗರ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಮುಂಜಾಗ್ರತಾ ಕ್ರಮದ ಬಗ್ಗೆ ಜನತೆಗೆ ತಿಳಿಸಿ ಅರಿವು ಮೂಡಿಸಿದ್ದಾರೆಂದು ತಿಳಿದಿದೆ.
ಮೂರು ದಿನದ ಹಿಂದೆ ಗ್ರಾಮದಲ್ಲಿ  ಐದರಿಂದ ಹತ್ತು ವಾಂತಿ ಬೇಧಿ ಪ್ರಕರಣಗಳು ಕಾಣಿಸಿಕೊಂಡು  ಕೂಡ್ಲಿಗಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು ನಂತರ  ಗ್ರಾಮದಲ್ಲಿ ವಾಂತಿ ಬೇದಿಯ ಆತಂಕ ಹೆಚ್ಚಾಗಿತ್ತು ಇದರಿಂದ ಹೆಚ್ಚೇತ್ತ ಆರೋಗ್ಯ ಇಲಾಖೆ ತಕ್ಷಣ ಪ್ರಾಥಮಿಕ ಆರೋಗ್ಯ ಉಪ ಕೇಂದ್ರ ಸಿಬ್ಬಂದಿ ಆಶಾ ಕಾರ್ಯಕರ್ತರ, ಅಂಗನವಾಡಿ ಕಾರ್ಯಕರ್ತರ ಸಮಯಪ್ರಜ್ಞೆಯಿಂದ ಹೆಚ್ಚಾಗುತ್ತಿರುವ ಸಮಸ್ಯೆಗಳಿಗೆ ನಿಯಂತ್ರಣ ಮಾಡಲು ಕ್ರಮ ತೆಗೆದುಕೊಂಡರು.
ಮಾಹಿತಿ  ಅರಿತ ಜಿಲ್ಲಾ ಆಡಳಿತದ ಪರವಾಗಿ   ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಮತ್ತು ಜಿಲ್ಲಾ ಅರೋಗ್ಯ  ವೈದ್ಯಾಧಿಕಾರಿ ಶಂಕರ್ ನಾಯ್ಕ ಹಾಗೂ ತಾಲೂಕು ವೈದ್ಯಾಧಿಕಾರಿ ಪ್ರದೀಪಕುಮಾರ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ
ಗ್ರಾಮಕ್ಕೆ ಭೇಟಿ ನೀಡಿ ವಿಚಾರಿಸಲಾಗಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕವಿದ್ದು ಇದರಿಂದ ಬರುವ ನೀರು ಬತ್ತಿ ಹೋಗಿದ್ದು ಗ್ರಾಮದ ಜನತೆಗೆ ಸಾಕಾಗುತ್ತಿಲ್ಲ ಅಲ್ಲದೆ ಬೇರೆ ನೀರು ಸೇವನೆಯಿಂದ ಈ ಪ್ರಕರಣ ಕಾಣಿಸಿಕೊಂಡಿರಬಹುದು ಎಂದು ತಿಳಿಸಿದ್ದರಿಂದ ಅಧಿಕಾರಿಗಳು ಖಾಸಗಿ ಬೋರ್ವೆಲ್ ಸಹಾಯ ಪಡೆದು ಶುದ್ಧ ಕುಡಿಯುವ ನೀರಿಗೆ ಬಳಸುವಂತೆ ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಸಂಬಂದಿಸಿದ ಪಿಡಿಓ ಗೆ ತಿಳಿಸಿದ್ದಾರೆ.
ತಾಲೂಕು ಆರೋಗ್ಯ ಅಧಿಕಾರಿಗಳು ಕುಡಿಯುವ ನೀರಿನ ಶಾoಪಲ್ ನ್ನು ಪ್ರಯೋಗಲಯಕ್ಕೆ ಕಳುಹಿಸಲಾಗಿದೆ ಅಲ್ಲದೆ ಮುಂಜಾಗ್ರತಾ ಕ್ರಮ ಕೈಗೊಂಡು ಕಾದರಿದ ನೀರನ್ನು ಕುಡಿಯಲು ಬಳಸುವಂತೆ  ತಿಳಿಸಿದ್ದಾರೆ.  ತಾಲೂಕು ಆಸ್ಪತ್ರೆ ಕೂಡ್ಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರ ತಿಮ್ಮಲಾಪುರ ಆರೋಗ್ಯ ಉಪ ಕೇಂದ್ರ ಶಿವಪುರ ಇವರುಗಳು ಗ್ರಾಮದಲ್ಲಿ ಬೀಡು ಬಿಟ್ಟು ಆರೋಗ್ಯ ತಪಾಸಣೆ ಮಾಡುತ್ತಿದ್ದು  ಜನರಲ್ಲಿ ಕಲುಷಿತ ನೀರು ಸ್ವಚ್ಛತೆಯ ಅರಿವು ಮೂಡಿಸುವಂತಹ ಹತ್ತು ಹಲವಾರು ಜಾಗೃತ ಕಾರ್ಯಕ್ರಮಗಳನ್ನು ಮಾಡುವುದರ ಮುಖಾಂತರ ನೈತಿಕ ಸ್ಥೈರ್ಯ ತುಂಬಿ ಜನರಲ್ಲಿ ಇದ್ದ ಆತಂಕವನ್ನು ದೂರ ಮಾಡಿದ್ದಾರೆ ಇದರಿಂದ ಇಂದು ಯಾವುದೇ ಪ್ರಕರಣ ಕಾಣಿಸಿಕೊಂಡಿಲ್ಲವಾಗಿದ್ದು ನಿಯಂತ್ರಣ ಬಂದಿರುವ ಬಗ್ಗೆ ಹೇಳಲಾಗುತ್ತಿದೆ.
ಈ ಸಂದರ್ಭದಲ್ಲಿ ತಾಲುಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೈ. ರವಿಕುಮಾರ್ ತಾಲುಕು ವೈದಾಧಿಕಾರಿಗಳಾದ ಎಸ್‌ ಪಿ ಪ್ರದೀಪ ಕುಮಾರ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪವನ್ ಗ್ರಾಮಪಂಚಾಯತ್ ಆರೋಗ್ಯ ಸಿಬ್ಬಂದಿಗಳಾದ ಸಮುದಾಯ ಆರೋಗ್ಯ ಅಧಿಕಾರಿ  ಅಂಜಲಿ, ಆರೋಗ್ಯ ಸುರಕ್ಷಣಾಧಿಕಾರಿ ಶೈಲಾಕ್ಷಿ, ಆಶಾ ಕಾರ್ಯಕರ್ತೆ ಹನುಮಕ್ಕ ಅಂಗನವಾಡಿ ಕಾರ್ಯಕರ್ತೆ ಮೂಗಮ್ಮ ಸೇರಿದಂತೆ  ಗ್ರಾಮಪಂಚಾಯಿತಿ  ಸಿಬ್ಬಂದಿ ವರ್ಗದವರು ಮತ್ತು ಜಂಗಮಸೊವೇನಹಳ್ಳಿ  ಗ್ರಾಮಸ್ಥರಿದ್ದರು.