ಕುಮಾರ ನಾಯಕ ನಾಮಪತ್ರ ಸಲ್ಲಿಕೆ, ಕಾಂಗ್ರೆಸ್ ಶಕ್ತಿ ಪ್ರದರ್ಶನ
ರಾಯಚೂರು, ಏ.೧೭- ಕಾಂಗ್ರೆಸ್ ಅಭ್ಯರ್ಥಿ ಮಾಜಿ ಐಎಎಸ್ ಅಧಿಕಾರಿ ಜಿ. ಕುಮಾರ ನಾಯಕ ಅವರು ಬೃಹತ್ ಮೆರವಣಿಗೆ ಮೂಲಕ ಅಪಾರ ಕಾರ್ಯಕರ್ತರು, ಬೆಂಬಲಿಗರು ಹಾಗೂ ಪಕ್ಷದ ನಾಯಕರೊಟ್ಟಿಗೆ ಜನಬಲ, ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಸುಮಾರು ೧೫ ಸಾವಿರಕ್ಕೂ ಹೆಚ್ಚು ಜನಸಾಗರವೇ ಹರಿದು ಬಂದಿತ್ತು. ಜಿಲ್ಲೆಯ ವಿವಿಧ ಕಡೆಯಿಂದ ಬೆಳಗ್ಗೆಯಿಂದಲೇ ಆಗಮಿಸಿದ್ದ ಕಾರ್ಯಕರ್ತರು ಬಿರು ಬಿಸಿಲನ್ನೂ ಲೆಕ್ಕಿಸದೆ ಮೆರವಣಿಗೆಯಲ್ಲಿ ಪಾಲ್ಗೊಂಡು ಪಕ್ಷದ ಅಭ್ಯರ್ಥಿ ಜಿ. ಕುಮಾರ ನಾಯಕ ಅವರ ಕೈ ಬಲಪಡಿಸಿದರು.
ಸಚಿವರಾದ ಎನ್ ಎಸ್ ಬೋಸರಾಜು, ಶಾಸಕ ಬಸನಗೌಡ ದದ್ದಲ್, ಸೇರಿದಂತೆ ಪಕ್ಷದ ಶಾಸಕರು, ಯಾದಗಿರಿ ಶಾಸಕ ಚನ್ನರೆಡ್ಡಿ, ಮತ್ತು ಎ.ವಸಂತ ಕುಮಾರ ಜಿಲ್ಲೆಯ ಕಾಂಗ್ರೆಸ್ ಮುಖಂಡರು
ಅನೇಕ ಸಾಥ್ ನೀಡಿದರು. ಒಗ್ಗಟ್ಟನಿಂದ ಜಿ.ಕುಮಾರ ನಾಯಕ ಗೆಲವಿಗೆ ಶ್ರಮಿಸುವುದಾಗಿ ಪಣತೊಟ್ಟರು. ನೆರೆದ ಸಾವಿರರು ಕೈ ಕಾರ್ಯಕರ್ತರು ಘೋಷಣೆ ಮೊಳಗಿಸಿದರು. ನಾಮಪತ್ರ ಸಲ್ಲಿಕೆ ಪೂರ್ವ ಜನಸಾಗರದ ಮೂಲಕ ತನ್ನ ಬಲವನ್ನು ತೋರ್ಪಡಿಸುವಲ್ಲಿ ಯಶಸ್ವಿಯಾದ ಕಾಂಗ್ರೆಸ್, ಎದುರಾಳಿಗಳಿಗೆ ಎಚ್ಚರಿಕೆ ಗಂಟೆಯನ್ನು ರವಾನಿಸಿತು. ಪಕ್ಷದ ದ್ವಜಗಳು ರಸ್ತೆ ಯುದ್ದಕ್ಕೂ ರಾರಾಜಿಸಿದವು. ದದ್ದಲ್ ಅವರ ಗ್ರಾಮಾಂತರ ಪ್ರದೇಶದಿಂದ ಸಾವಿರರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿರುವುದು ವಿಶೇಷವಾಗಿತ್ತು. ಕುಣಿತ, ಡೊಳ್ಳು ಮತ್ತು ಇತರೆ ಮೇಳ ಗಳು ರಂಗು ನೀಡಿದವು. ಮಹಿಳೆಯರು ಅಧಿಕ ಸಂಖ್ಯೆಯಲ್ಲಿದ್ದರು. ಬಿಸಿಲಿನಿಂದ ರಕ್ಷಣೆಗೆ ಪಡೆಯಲು ಟೋಪಿಗಳನ್ನು ವಿತರಿಸಲಾಗುತ್ತಲ್ಲದೇ
ಮಜ್ಜಿಗೆ, ನೀರಿನ ಪ್ಯಾಕೆಟ್ ವಿತರಿಸಲಾಯಿತು. ರಸ್ತೆಯ ಮೆರವಣಿಗೆಯಲ್ಲಿ ಕುಮಾರ ನಾಯಕರಿಗೆ ಜೈಕಾರ ಕೂಗಿದರು.ಅಪಾರ ಸಂಖ್ಯೆಯ ಕಾರ್ಯಕರ್ತರು ಬೆಂಬಲರೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ತಲುಪಿತು. ಅಪಾರ ಸಂಖ್ಯೆಯ ಜನರು ಸೇರಿರುವದರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು. ವಾಹನ ಸಂಚಾರಕ್ಕೆ ತೀವ್ರ ಉಂಟಾಯಿತು.
ನಾಮಪತ್ರ ಸಲ್ಲಿಸಿದ ನಂತರ ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರ ನಾಯಕ ಅವರು ಮಾತನಾಡಿ, ಸಚಿವರು ಶಾಸಕರು ಪಕ್ಷದ ಮುಖಂಡರು ಜೊತೆ ನಾಮಪತ್ರ ಸಲ್ಲಿಸಲಾಗಿದೆ. ನಾಮಪತ್ರ ಸಲ್ಲಿಕೆಯ ಬೃಹತ್ ಮೆರವಣಿಗೆಯಲ್ಲಿ ನಿರೀಕ್ಷೆ ಮೀರಿ ಜನಸಾಗರವೇ ಹರಿದು ಬಂದಿದೆ. ಪಕ್ಷದ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರು ನನಗೆ ಬೆಂಬಲ ಸೂಚಿಸಿದ್ದಾರೆ. ಕ್ಷೇತ್ರದ ಎಲ್ಲ ಭಾಗಗಳಲ್ಲಿ ಭೇಟಿ ನೀಡಿ ಜನರ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಲಿದ್ದಾರೆ.
ನಾಮಪತ್ರ ಪಡೆದ ಕೈಯಿಂದ, ನಾಮಪತ್ರ ಸಲ್ಲಿಕೆ:
ಜಿ ಕುಮಾರ ನಾಯಕ ಅವರು ೧೯೯೯ ರಲ್ಲಿ ರಾಯಚೂರು ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದರು. ಇದೇ ಅವಧಿಯಲ್ಲಿ ನಡೆದ ರಾಯಚೂರು ಲೋಕಸಭಾ ಕ್ಷೇತ್ರ ಚುನಾವಣಾ ಅಧಿಕಾರಿಯಾಗಿದ್ದ ಜಿ. ಕುಮಾರ ನಾಯಕ ಅಂದು ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕರಿಸಿದ್ದರು. ಆದರೆ, ಇಂದು ಅದೇ ಕೈಯಿಂದ ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಘಟನೆ ನಡೆಯಿತು. ೨೫ ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಯಾಗಿ ಅಭ್ಯರ್ಥಿಗಳಿಂದ ನಾಮಪತ್ರ ಜಿ ಕುಮಾರ ನಾಯಕ ಎರಡುವರೆ ದಶಕಗಳ ನಂತರ ಈ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಅಪರೂಪದ ಘಟನೆಗೆ ಜಿಲ್ಲಾಧಿಕಾರಿಗಳ ಸಭಾಂಗಣ ಸಾಕ್ಷಿಯಾಗಿತ್ತು.