ಅಂಬೇಡ್ಕರ್ ಗೆ ಅಪಮಾನ ಗುರುಸಿದ್ದಯ್ಯ ಸ್ವಾಮಿ ಅಮಾನತಿಗೆ ಆಗ್ರಹ
ರಾಯಚೂರು,ಏ.೧೮- ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯ ಆಚರಣೆ ಬಾರದೆ ನಿರ್ಲಕ್ಷ ತನ ತೋರಿ ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿದ ರಿಮ್ಸ್ ಆಡಳಿತ ಮಂಡಳಿ ಅಧಿಕಾರಿ ಗುರುಸಿದ್ದಯ್ಯ ಸ್ವಾಮಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಸಮಾಜದ ಮುಖಂಡ ಮತ್ತು ಸಮಾಜಿಕ ಕಾರ್ಯಕರ್ತರ ಆನಂದ ಏಗನೂರು ಅವರು
ರಿಮ್ಸ್ ನಿರ್ದೇಶಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಗುರುಸಿದ್ದಯ್ಯ ಸ್ವಾಮಿ ಅವರು ಅಂಬೇಡ್ಕರ್ ಜಯಂತಿ ದಿನದಂದು ಕರ್ತವ್ಯದಲ್ಲಿ ಇದ್ದರು ಉದ್ದೇಶಪೂರ್ವಕವಾಗಿ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಭಾಗವಹಿಸಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್ ಬರೆದಿರುವ ಸಂವಿಧಾನದಿಂದ ಗುರುಸಿದ್ದಯ್ಯ ಸ್ವಾಮಿ ಅವರು ಅಧಿಕಾರಿಯಾಗಿದ್ದಾರೆ. ಅಂಬೇಡ್ಕರ್ ಅವರನ್ನು ಜಾತಿ ದೃಷ್ಟಿಯಿಂದ ನೋಡಿದ ಅವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿಯನ್ನು ದೇಶಾದ್ಯಂತ ಆಚರಣೆ ಮಾಡುವ ಕಾರ್ಯಕ್ರಮವಾಗಿದ್ದು, ರಿಮ್ಸ್ ಆಸ್ಪತ್ರೆ ಮತ್ತು ಕಾಲೇಜು ಅವರಣದಲ್ಲಿ ಅಂಬೇಡ್ಕರ್ ಅವರ ೧೩೩ನೇ ಜಯಂತಿ ಆಚರಣೆ ಮಾಡಲಾಗಿತ್ತು.ಆದರೆ ಜಯಂತಿ ದಿನದಂದು ಗುರುಸಿದ್ದಸ್ವಾಮಿ ಅವರು ಉದ್ದೇಶಪೂರ್ವಕವಾಗಿ ಗೈರಾಗಿದ್ದಾರೆ. ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿದ ಅವರನ್ನು ಕೂಡಲೇ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.