ಏ.29ಕ್ಕೆ ಕೂಡ್ಲಿಗಿಗೆ ಸಿಎಂ, ಡಿಸಿಎಂ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಏ.18 :- ಬಳ್ಳಾರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪರ ಬಿರುಸಿನ ಪ್ರಚಾರಕ್ಕೆ ಇದೇ ತಿಂಗಳ 29ರಂದು ಕೂಡ್ಲಿಗಿಗೆ ರಾಜ್ಯಸರ್ಕಾರದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ ಕೂಡ್ಲಿಗಿಗೆ ಆಗಮಿಸಲಿದ್ದಾರೆ ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ತಿಳಿಸಿದರು.
ಅವರು ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ ಪರ ಬಿರುಸಿನ ಪ್ರಚಾರ ಸಾಗಿದ್ದು ಈಗಾಗಲೇ ಕೂಡ್ಲಿಗಿ ಕ್ಷೇತ್ರದಲ್ಲಿ ಅಭ್ಯರ್ಥಿ ಪರ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರಚಾರ ಮಾಡಿದ್ದು ಸರ್ಕಾರದ ಜನಪರ ಯೋಜನೆಯನ್ನು ಮೆಚ್ಚಿ ಜನತೆ ಕಾಂಗ್ರೆಸ್ ಗೆ ಅತೀವ ಬೆಂಬಲ ವ್ಯಕ್ತಪಡಿಸಿ ಸಚಿವ  ಜಾರಕಿಹೊಳಿ ರೋಡ್ ಶೋ ನಲ್ಲಿ ಜನಸಾಗರವೇ ಹರಿದುಬಂದಿತ್ತು. ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಬಹು ಉಪಯೋಗವಾಗಿದೆ ಅದರಲ್ಲಿ ನಮ್ಮ ಕ್ಷೇತ್ರದ ಬಡಜನತೆಗಂತೂ ಹೆಚ್ಚಿನ ಉಪಯೋಗವಾಗಿದೆ ಎಂದರು.
ಗ್ಯಾರಂಟಿಯಿಂದ ಅಭಿವೃದ್ಧಿಗೆ ಹಣವಿಲ್ಲವೆಂದು ವಿರೋಧ ಪಕ್ಷವು ಹೇಳುತ್ತಿದ್ದು ಹಾಗಾದರೆ ನಮ್ಮ ಕೂಡ್ಲಿಗಿ ಕ್ಷೇತ್ರಕ್ಕೆ ಆರೋಗ್ಯ, ಶಾಲಾ ಕಟ್ಟಡ, ರಸ್ತೆ, ನೂತನ ಪೊಲೀಸ್ ಠಾಣೆ ನಿರ್ಮಾಣ ಮಾಡಲು ಸೇರಿದಂತೆ ಇತರೆ ಅಭಿವೃದ್ಧಿಗೆ 550ಕೋಟಿ ರೂ ಅನುದಾನ ಕೊಟ್ಟಿಲ್ಲವೇ ಇದಕ್ಕಿಂತ ಸಾಕ್ಷಿ ಬೇಕೇ ಎಂದು ಶಾಸಕ ಶ್ರೀನಿವಾಸ ತಿಳಿಸಿದರು.
ಬಿಜೆಪಿ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿಯನ್ನು ಪ್ರಣಾಳಿಕೆ ಇಟ್ಟುಕೊಂಡು ಅನೇಕ ಭರವಸೆ ಜನತೆಗೆ ನೀಡುತ್ತಿದ್ದು ಕಾಂಗ್ರೆಸ್ ಗ್ಯಾರಂಟಿ ಮತ್ತು ಬಿಜೆಪಿ ಗ್ಯಾರಂಟಿ ಜನರಲ್ಲಿ ಗೊಂದಲ ಮೂಡಿಸುವುದಿಲ್ಲವೇ ಎಂಬ ಪ್ರಶ್ನೆಗೆ ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿ ನಿಮಗೆ ತಿಳಿದಿರುವ ಜೊತೆಗೆ ಐದು ಗ್ಯಾರಂಟಿ ರಾಜ್ಯದ ಜನರಿಗೆ ತಿಳಿದಿದ್ದು ಅವರೇ ಉತ್ತರ ನೀಡುತ್ತಿದ್ದಾರೆ ಕಾಂಗ್ರೆಸ್ಸಿನ ಗ್ಯಾರಂಟಿಯನ್ನು ಕಾಪಿ ಮಾಡುತ್ತಿರುವ ಬಿಜೆಪಿ ಇನ್ನೂ ಯಾವಾಗ ನೀಡುತ್ತಾದೋ ಎಂದು ಜನರು ಅರಿತು ಬಿಜೆಪಿಯ ಮೈಂಡ್ ಗೇಮ್ ಗೆ ಕಿವಿಗೊಡದೆ ಕಾಂಗ್ರೆಸ್ ಗೆ ಬೆಂಬಲ ನೀಡುವ ಜೊತೆಗೆ ಬಳ್ಳಾರಿ ಕಾಂಗ್ರೆಸ್ ನ ಭದ್ರಕೋಟೆ ಮತ್ತೊಮ್ಮೆ ಉಳಿಸಿಕೊಳ್ಳಲಿದೆ ಎಂದರು.
ಬಿಜೆಪಿ ಮೈಂಡ್ ಗೇಮ್ ಗೆ ಬಲಿಯಾಗಬೇಡಿ : ಕೂಡ್ಲಿಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಂದಿದ್ದು ಕೆಲವು ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಸಹ ಮುಗಿದಿದೆ ಚುನಾವಣೆ ನಂತರ ಕಾಮಗಾರಿ ಪ್ರಾರಂಭವಾಗಲಿದೆ ಕ್ಷೇತ್ರದಲ್ಲಿ ಬಿಜೆಪಿ ಯಾವುದೇ ಆಸೆ ಆಮಿಷಕ್ಕೊಳಪಡಿಸಿದರೆ ಅದಕ್ಕೆ ಬಲಿಯಾಗದಿರಿ ಎಂದು ಮುಖಂಡರು ಹಾಗೂ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಕೂಡ್ಲಿಗಿ ಪ ಪಂ ಸದಸ್ಯ ಕಾವಲ್ಲಿ ಶಿವಪ್ಪನಾಯಕ ಮಾತನಾಡಿ ತಿಂಗಳಿಂದ ಕೂಡ್ಲಿಗಿ ಪಟ್ಟಣದಲ್ಲಿ ಕುಡಿಯಲು ನೀರಿಲ್ಲದೆ ಜನರು ಪರಿತಪಿಸುತ್ತಿದ್ದ ಬಗ್ಗೆ ಅರಿತ ಶಾಸಕರು ಸಿಎಂ ಡಿಸಿಎಂ ಸೇರಿದಂತೆ ಮಂತ್ರಿ ಮಹೋದಯರಿಗೆ ಪತ್ರ ವ್ಯವಹಾರ ನಡೆಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಭದ್ರಾ ನೀರು ತರಿಸಿದ್ದರಿಂದ ಕೂಡ್ಲಿಗಿ, ಕೊಟ್ಟೂರು ಹಾಗೂ ಹಗರಿಬೊಮ್ಮನಹಳ್ಳಿ ಪಟ್ಟಣಕ್ಕೆ ಮರುಜೀವ ಬಂದಂತ್ತಾಗಿದ್ದು ನೀರು ತರಲು ಕಾರಣಿಭೂತರದ ಕೂಡ್ಲಿಗಿ ಶಾಸಕರಿಗೆ ಕೂಡ್ಲಿಗಿ ಪಟ್ಟಣದ ಜನತೆ ಪರವಾಗಿ ಪ ಪಂ ಸದಸ್ಯರು ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ಪಟ್ಟಣ ಪಂಚಾಯತಿ ಸದಸ್ಯರು, ಮುಖಂಡರು, ಬಡೇಲಡಕು ಸೇರಿದಂತೆ ಇತರೆ ಗ್ರಾಮದ ಮುಖಂಡರು ಇದ್ದರು.