ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮತದಾನದ ಜಾಗೃತಿ ಅಭಿಯಾನ.
ಸಂಜೆವಾಣಿ ವಾರ್ತೆ
ಹರಪನಹಳ್ಳಿ ಏ.18; ಹಿಂದುಳಿದ ಕಲ್ಯಾಣ ವರ್ಗಗಳ  ಇಲಾಖೆಯ ಅಡಿಯಲ್ಲಿರುವ ವಸತಿನಿಲಯಗಳ ವಿದ್ಯಾರ್ಥಿಗಳಿಂದ ಮನೆ ಮನೆಗೂ ತೆರಳಿ ಮತದಾನ ಮಾಡುವಂತೆ ಜಾಗೃತಿ ಅಭಿಯಾನ ನಡೆಸಿದರು.
ಪಟ್ಟಣದ ಶಿಕ್ಷಕರ ಬಡಾವಣೆ, ಹಳೇ ಬಸ್‍ನಿಲ್ದಾಣ, ಶೀಲಾರಗೇರಿ, ಹೊಸಪೇಟೆ ಹರಿಹರ ರಸ್ತೆ, ಹರಿಹರ ಕ್ಯಾಂಪ್ ಸೇರಿದಂತೆ ವಿವಿದ ಕಡೆಗಳಲ್ಲಿ ಮತದಾನ ಮಾಡುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಲ್ಯಾಣಾಧಿಕಾರಿ ವಿಜಯಲಕ್ಷ್ಮಿ ಹತ್ತಿಕಾಳ್, ನಿಲಯ ಮೇಲ್ವಿಚಾರಕರಾದ ಬಿ.ಎಚ್.ಚಂದ್ರಪ್ಪ, ಪ್ರೇಮಾವತಿ, ಎಚ್.ಶೃತಿ, ನಿರ್ಮಲ, ಸುನೀಲ್ ಕುಮಾರ, ಎಂ.ಸಿದ್ದೇಶರೆಡ್ಡಿ, ಸೇರಿದಂತೆ ವಿವಿಧ ವಸತಿ ನಿಲಯದ ವಿದ್ಯಾರ್ಥಿಗಳು ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದರು.