ಮಹಿಳೆಯರಿಗೆ ಗೌರವ ಕೊಡದ ಕುಮಾರಸ್ವಾಮಿ ತಮ್ಮ ಪಕ್ಷದ ಮಹಿಳೆ ಚಿಹ್ನೆ ಬದಲಾಯಿಸಿಕೊಳ್ಳಲಿ: ಕೆಪಿಸಿಸಿ ಕಾರ್ಯದರ್ಶಿ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಏ.18 ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವ ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಮಹಿಳಾ ಚಿಹ್ನೆ ಬದಲಾಯಿಸಿಕೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಕೆ. ಜೆ. ಜಯಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದರು.
 ಪಟ್ಟಣದಲ್ಲಿ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ಮಂಗಳವಾರ  ಆಯೋಜಿಸಿದ್ದ ಪ್ರತಿಭಟನೆಯ ಸಭೆಯಲ್ಲಿ ಭಾಗವಹಿಸಿ ನಂತರ ಪತ್ರಿಕಾಗೋಷ್ಠಿ ಯಲ್ಲಿ   ಮಾತನಾಡಿದರು. ಬಡವರಿಗೆ ಅನುಕೂಲವಾಗಲಿ ಎಂದು ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಆದರೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದಿರುವುದು ಇಡೀ ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದಾರೆ. ಗೌರವಹಿತವಾಗಿ ಬದುಕುವ ಮಹಿಳೆಯರು ಉಚಿತವಾಗಿ ಬಸ್ಸಿನಲ್ಲಿ ಹೋಗಿ ದೇವಸ್ಥಾನದಲ್ಲಿ ಭಕ್ತಿ ಭಾವದಿಂದ ಕೈ ಮುಗಿಯುತಿದ್ದಾರೆ. ಆದರೆ ಕುಮಾರಸ್ವಾಮಿ ಉಚಿತ ಪ್ರಯಾಣದಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎನ್ನುವುದು ಎಷ್ಟು ಸರಿ ಮಹಿಳೆಯರನ್ನು ತಡವಿದ ಕುಮಾರಸ್ವಾಮಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಈ ಲೋಕಸಭಾ ಚುನಾವಣೆ ಸತ್ಯ ಮತ್ತು ಸುಳ್ಳಿನ ಮಧ್ಯೆ ನಡೆದಿರುವ ಚುನಾವಣೆ. ಸತ್ಯ ಪ್ರಮಾಣಿಕತೆಗೆ  ಹೆಸರಾಗಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಈ ಬಾರಿ ಸೋಲುವುದು ಗ್ಯಾರಂಟಿ. ಧರ್ಮದ ರಾಜಕೀಯದಿಂದ ಜನರ ಭಾವನೆಗಳಿಗೆ ದಕ್ಕೆ ತಂದಿದ್ದಾರೆ. ಸಾರ್ವಜನಿಕರು ಜನಸಾಮಾನ್ಯರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ದೇವರು ಮತ್ತು ದೇಶದ ಹೆಸರಿನಲ್ಲಿ ಭಾವನಾತ್ಮಕವಾಗಿ ಮತದಾರರನ್ನು ದಾರಿ ತಪ್ಪಿಸಲು ಹೊರಟಿದ್ದಾರೆ. ಸರ್ವ ಜನಾಂಗದ ಬಗ್ಗೆ ಕಾಳಜಿ ಹೊಂದಿರುವ ಕಾಂಗ್ರೆಸ್ ಪಕ್ಷ  ತಂದಿರುವ ಯೋಜನೆಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಶ್ರೀರಾಮುಲು ಮಂತ್ರಿ ಸಂಸದರಾಗಿ  ಜಿಲ್ಲೆಯನ್ನು ಉದ್ದಾರ ಮಾಡಿಲ್ಲ ಎಷ್ಟು ಬಾರಿ ಗೆದ್ದರು ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ ಎಂದರು.
 ವಿಜಯನಗರ ಮಹಿಳಾ  ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಶಾಹಿರಾಬಾನು, ಮಾತನಾಡಿ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ ಕುಮಾರಸ್ವಾಮಿ ತಮ್ಮ ಯೋಗ್ಯತೆಗೆ ತಕ್ಕದಾದಲ್ಲ ಈ ರೀತಿ ಮಾತನಾಡುವುದರಿಂದ ಅವರ ಯೋಗ್ಯತೆ ಕರ್ನಾಟಕದ ಜನತೆಗೆ ಗೊತ್ತಾಗುತ್ತದೆ. ಮಹಿಳೆಯರು ದಾರಿ ತಪ್ಪಿಲ್ಲ ಇವರೇ ದಾರಿ ತಪ್ಪಿದ್ದಾರೆ ಎಂದು ಗುಡುಗಿದರು.ಹೊಸಪೇಟೆ ಅಧ್ಯಕ್ಷೆ ಯೋಗಾಲಕ್ಶ್ಮಿ, ಮಾತನಾಡಿದರು.ಕುಮಾರಿ ಚೈತ್ಯಾನ್ಯ , ನಾಗಮ್ಮ ಇತರರಿದ್ದರು