ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಶತಸಿದ್ದ  :  ಯಡಿಯೂರಪ್ಪ
(ಸಂಜೆವಾಣಿ ವಾರ್ತೆ)
ಕೊಪ್ಪಳ. ಏಪ್ರಿಲ್ 18:- ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯ ನೇತೃತ್ವದ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶದ ಜನತೆ ಅಭಿವೃದ್ದಿಗೆ ಈ ಬಾರಿ ಬಿಜೆಪಿ ಪಕ್ಷಕ್ಕೆ ಮತ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ ವಿನಃ ಹಣ, ಹೆಂಡ, ಜಾತಿ ಮತ್ತು ತೋಳ್ಬಲದಿಂದ ಕಾಂಗ್ರೇಸ್ ಗೆಲ್ಲುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಹೇಳಿದರು.
ಅವರು ನಿನ್ನೆ ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಬಿಜೆಪಿ ಪಕ್ಷದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ. ಕೆ ಶರಣಪ್ಪ ಅವರ ನಾಮಪತ್ರ ಸಲ್ಲಿಕೆ ಪ್ರಯುಕ್ತ ಆಯೋಜಿಸಿದ್ದ ವಿಜಯ ಸಂಕಲ್ಪ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಮನೆಗೆ ಕಳಿಸುವದರಲ್ಲಿ ದೇಶದ ಜನತೆ ತೀರ್ಮಾನಿಸಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಗ್ಯಾರಂಟಿ ಯೋಜನೆಗಳ ಜಾರಿಯಿಂದ ಸರ್ಕಾರದ ಬೊಕ್ಕಸೆ ಖಾಲಿಯಾಗಿದೆ. ಇವು ಕೇವಲ ತಾತ್ಕಾಲಿಕ ಗ್ಯಾರಂಟಿಗಳು ಮಾತ್ರ ಆದ್ರೆ ಮೋದಿ ಗ್ಯಾರಂಟಿಗಳು ಪರ್ಮನೆಂಟ್ ಎಂದು ಅವರು ಮಾತನಾಡಿದರು.
ಗಂಗಾವತಿ ಶಾಸಕ ಗಾಲಿ ಜನಾರ್ಧನ್ ರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ವಿವಿಧ ಕ್ಷೇತ್ರಗಳಲ್ಲಿ ಅಭೂತಪೂರ್ವ ಬದಲಾವಣೆಯನ್ನು ಕಾಣುತ್ತಿದೆ. ಈ ಸಂಧರ್ಭದಲ್ಲಿ ನಾವೆಲ್ಲರೂ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸೋ ನಿಟ್ಟಿನಲ್ಲಿ ಈ ಬಾರಿ ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕೆಂದು ವಿನಂತಿಸಿಕೊಂಡರು.
ಲೋಕಸಭಾ ಚುನಾವಣಾ ಫಲಿತಾಂಶದ ನಂತರ ರಾಜ್ಯದಲ್ಲಿ ಹಲವು ರೀತಿಯ ಬದಲಾವಣೆಯಾಗಲಿವೆ. ಈಗಾಗಲೇ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರನ್ನು ಮುಂದಿನ ಸಿಎಂ ಮಾಡಲು ಕಾಂಗ್ರೇಸ್ ಹೈಕಮಾಂಡ್ ತೀರ್ಮಾನಿಸಿದೆ. ಶಾಸಕ ಶಿವರಾಜ ತಂಗಡಗಿ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ಬಸವರಾಜ ರಾಯರೆಡ್ಡಿ ಕಾಯುತ್ತಿದ್ದಾರೆ. ಎಂದು ಜಿಲ್ಲಾ ಕಾಂಗ್ರೇಸ್ ರಾಜಕಾರಣದ ವಿರುದ್ದ ವಾಗ್ದಾಳಿ ನಡೆಸಿದರು.
ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಮಾತನಾಡಿದರು. ೫೦೦ ವರ್ಷಗಳ ಹಿಂದೂಗಳ ಕನಸು ಬಿಜೆಪಿ ಸರ್ಕಾರ ಸಾಕಾರಗೊಳಿಸಿದೆ. ಭವಿಷ್ಯದ ಭದ್ರತೆ ಮತ್ತು ಬದ್ದತೆಯ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ಹ್ಯಾಟ್ರಿಕ್ ಪ್ರಧಾನಿಯಾಗಿ ºಗೆಲ್ಲಿಸಬೇಕಿದೆ ಎಂದರು.
ಮಾಜಿ ಸಚಿವ ಸಿ.ಟಿ ರವಿ ಮಾತನಾಡಿ, ಭಾರತ್ ಮಾತಾ ಕೀ ಜೈ ಎಂದು ಘೋಷಣೇ ಕೂಗೋಕೆ ಕಾಂಗ್ರೇಸ್ ಪರ್ಮಿಶನ್ ಕೇಳದಬೇಕು ಆದ್ರೆ ಪಾಕಿಸ್ತಾನ್ ಜಿಂದಾಬಾದ್ ಕೂಗೋಕೆ ಯಾರ ಪರ್ಮಿಶನ್ ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ಗ್ಯಾರಂಟಿಗಳಿಂದ ಜನರನ್ನು ಹರಕೆಯ ಕುರಿ ರೀತಿ ಸರ್ಕಾರ ನಡೆಸಿಕೊಳ್ಳುತ್ತಿದೆ. ಪಹಣೆ, ಜನನ ಮತ್ತು ಮರಣ ಪ್ರಮಾಣ ಹೀಗೆ ಹಲವು ರೀತಿಯ ಸರ್ಕಾರ ಕೆಲಸಗಳಿಗೆ ದರ ದುಪ್ಪಟ್ಟಾಗಿದೆ ಹಗಲು ದರೋಡೆ, ಲಂಚ ತಾಂಡವಾಡುತ್ತಿದೆ ಎಂದು ಮಾತನಾಡಿದರು.
ಈ ಸಂಧರ್ಭದಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ಶಿವರಾಮೇಗೌಡ, ಮಾಜಿ ಶಾಸಕರುಗಳಾದ ಹಾಲಪ್ಪ ಆಚಾರ, ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ಪ್ರತಾಪಗೌಡ ಪಾಟೀಲ್, ವೆಂಕಟರಾವ್ ನಾಡಗೌಡ, ಸೋಮಲಿಂಗಪ್ಪ, ಯುವ ಮುಖಂಡ ಕೆ ಕರಿಯಪ್ಪ, ಜೆಡಿಎಸ್ ಹಿರಿಯ ಮುಖಂಡ ಸಿ. ವಿ ಚಂದ್ರಶೇಖರ್, ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಕುಮಾರ ಗುಳಗಣ್ಣನವರ್ ಸೇರಿದಂತೆ ಅನೇಕ ಹಿರಿಯ ನಾಯಕರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು