ಸಂಭ್ರಮದ ವೀರಭದ್ರ ಸ್ವಾಮಿಯ ಮಹಾ ರಥೋತ್ಸವ
ಆನೇಕಲ್.ಏ.೧೮:ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಸ್ತೇನಹಳ್ಳಿ ಗ್ರಾಮದಲ್ಲಿರುವ ಇತಹಾಸ ಪ್ರಸಿದ್ದ ದೇವಾಲಯವಾದ ಶ್ರೀ ವೀರಭದ್ರ ಸ್ವಾಮಿಯ ಮಹಾ ರಥೋತ್ಸವ ಗ್ರಾಮಸ್ಥರ ಮತ್ತು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು.
ಇನ್ನು ಶ್ರೀ ವೀರಭದ್ರ ಸ್ವಾಮಿಯ ಮಹಾ ರಥೋತ್ಸವ ಅಂಗವಾಗಿ ಸ್ವಾಮಿಗೆ ವಿಶೇಷ ಅಲಂಕಾರ, ವಿಶೇಷ ಅಭಿಷೇಕ. ವಿವಿಧ ಹೋಮಗಳು, ವೀರಗಾಸೆ ಕುಣಿತ, ಡೊಳ್ಳು ಕುಣಿತ, ನಂದಿ ದ್ವಜಾ ಕುಣಿತ, ಅರವಂಟಿಕೆ ಮತ್ತು ಅನ್ನದಾಸೋಹ ಸೇರಿದಂತೆ ಹಲವು ವಿಶೇಷ ಪೂಜಾ ಕಾರ್ಯಕ್ರಮಗಳು ಗ್ರಾಮಸ್ಥರ ಮತ್ತು ಭಕ್ತರ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು. ಹಾಗೆಯೇ ರಥವು ಹಲವು ಕಲಾತಂಡಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗುತ್ತಿದ್ದಂತೆ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು.
ರಾಜಾಪುರ ಮಠದ ಡಾ.ರಾಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು. ಮರಳೇಗವಿ ಮಠದ ಮುಮ್ಮುಡಿ ಶಿವರುದ್ರ ಸ್ವಾಮಿಗಳು, ಗುಮ್ಮಳಾಪುರ ಮಠದ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು, ಬೆಳ್ಳಾವಿ ಸಂಸ್ಥಾನ ಮಠದ ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು, ನಾಗಲಾಪುರ ಮಠದ ತೇಜೇಶ್ವರಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ವೀರಭದ್ರಸ್ವಾಮಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಡಿ.ಆರ್. ಜಯರಾಜ್, ಉಪಾಧ್ಯಕ್ಷ ವೆಂಕಟಸ್ವಾಮಿ, ನಂಜಪ್ಪರವರು, ರುದ್ರಾ ಆರಾಧ್ಯ, ವೇದಮೂರ್ತಿ, ಪ್ರಕಾಶ್, ಈಶ್ವರಯ್ಯ, ನಾಗಮ್ಮ, ಚೆನ್ನಪ್ಪ, ಪರಮಶಿವಯ್ಯ, ನಿರಂಜನಮೂರ್ತಿ, ರೇಣುಕಾಸ್ವಾಮಿ, ಮರಿರಾಜು, ರಾಜಶೇಖರಯ್ಯ, ಕೇಶವರಾಜು ಮತ್ತು ಭಕ್ತರು ಹಾಗೂ ಗ್ರಾಮಸ್ಥರು ಬಾಗವಹಿಸಿದ್ದರು.