ಮೋಹನ್ ಕೃಷ್ಣಗೆ ಹೂಡಿವಿಜಿಕುಮಾರ ಸಾಥ್
ಕೆಜಿಎಫ್:ಏ:೧೮: ಈದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರಮೋಧಿ ರವರನ್ನು ಮತ್ತೋಮ್ಮೆ ಪ್ರಧಾನ ಮಂತ್ರಿಯಾಗಿ ಮಾಡಬೇಕು ಎಂಬ ದೃಷ್ಠಿಯಿಂದ ಮಾಲೂರು ಹೂಡಿವಿಜಿಕುಮಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷ ವಿಜೇಯೆಂದ್ರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಜಿ ಸಚಿವ ಬೈರತಿ ಬಸವರಾಜು ನನಗೆ ಪೋನ್ ಕರೆ ಮಾಡಿ ಎನ್.ಡಿ.ಎ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ನಾನು ಎನ್.ಡಿ.ಎ ಅಭ್ಯರ್ಥಿಯಾಗಿರುವ ಮಲ್ಲೇಶಬಾಬು ರವರಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ಘೋಷಿಸಿದರು.
ಕಳೆದ ೧ ವಾರದಿಂದ ಆರ್.ಕೆ.ಪೌಂಡೇಷನ್ ಅಧ್ಯಕ್ಷ ಸಮಾಜ ಸೇವಕ ಮೋಹನಕೃಷ್ಣ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಲಿದ್ದಾರೆ ಎಂಬ ಚರ್ಚೆಗಳು ಕ್ಷೇತ್ರಧ್ಯಾಂತ ಬಾರಿ ಸದ್ದು ಮಾಡಿತ್ತು.
ಆರ್.ಕೆ.ಪೌಂಡೇಷನ್ ಅಧ್ಯಕ್ಷ ಸಮಾಜ ಸೇವಕ ಮೋಹನ್‌ಕೃಷ್ಣ ಮಾತನಾಡಿ,ನಾನು ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತನಗಿ ಸೇವೆ ಮಾಡುತ್ತಿದ್ದೇನೆ ಕಳೆದ ೬ ವರ್ಷಗಳಿಂದ ಸತತವಾಗಿ ಕ್ಷೇತ್ರದಲ್ಲಿ ಬಡವರ ಪರವಾಗಿ ದುಡಿಯುತ್ತಿದ್ದೇನೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿತನಾಗಿದ್ದೇ ಆದರೆ ನನಗೆ ಟೀಕೆಟ್ ನೀಡುವುದಾಗಿ ಭರವಸೆ ನೀಡಿದ ಮುಖಂಡರು ನನ್ನ ಕೈಬಿಟ್ಟರು ಆದ್ದರಿಂದ ವಿಧಾನಸಭೆ ಚುನಾವಣೆ ಪ್ರಕ್ರಿಯೆಯಿಂದಲ್ಲೇ ದೂರ ಉಳಿದಿದ್ದೇ ಚುನಾವಣೆ ನಂತರ ಎಂದಿನಂತೆ ಸಮಾಜ ಸೇವೆಯನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಟಿಕೇಟ್ ನೀಡಿದರೆ ಓಕೆ ಇಲ್ಲದಿದ್ದ ಪಕ್ಷ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು ಕಾಂಗ್ರೆಸ್ ಅಭ್ಯರ್ಥಿ ಹೋರಗಿನ ವ್ಯಕ್ತಿಯಾಗಿದ್ದು ನಮ್ಮ ಕೈಗೆ ದೊರಕುವ ಮತ್ತು ಬಂಗಾರಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಸೋಲು ಕಂಡಿರುವ ಮಲ್ಲೇಶಬಾಬು ಉತ್ತಮ ವ್ಯಕ್ತಿಯಾಗಿದ್ದು ಅವರ ಕುಟುಂಭವು ಸಮಾಜ ಸೇವೆಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ೪೦ ವರ್ಷಗಳಿಂದ ತೊಡಗಿಸಿಕೊಂಡಿರುವುದರಿಂದ ಅವರ ಕೈಹಿಡಿಯುವುದು ನಮ್ಮಲೆರ ಧರ್ಮವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮೋಹನ್ ಕೃಷ್ಣ ಬೆಂಬಲಿಗರಾದ ರವಿರೆಡ್ಡಿ ,ಜಕ್ಕರಸಕುಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪೆದ್ದನ್ನ, ಮಾರಿಕುಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಂಕರರೆಡ್ಡಿ ,ಜೆಡಿಎಸ್ ಮುಖಂಡರಾದ ಕೆ.ರಾಜೇಂದ್ರನ್,ದಯಾನಂದ,ಚಂಗೇಗೌಡ,ವಿಆರ್.ಎಲ್.ಲಕ್ಷ್ಮಿನಾರಾಯಣ ,ಮಹೇಶ್‌ಗೌಡ ಹಾಗೂ ನಗರಸಭೆ ಸದಸ್ಯ ಶಕ್ತಿ ವೇಲು ಹಾಜರಿದ್ದರು.