ರಾಮನವಮಿ ಕಾರ್ಯಕ್ರಮ
ಬಾದಾಮಿ,ಏ18: ಇಲ್ಲಿನ ಮ್ಯೂಜಿಯಂ ರಸ್ತೆಯಲ್ಲಿರುವ ಪ್ರಾಚೀನ ಕಾಲದ ಶ್ರೀ ರಾಮ ದೇವಸ್ಥಾನದಲ್ಲಿ ರಾಮನವಮಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅರ್ಚಕ ಶ್ರೀರಾಮ (ರಾಜು) ಬೋಪರ್ಡೆಕರ ಅವರ ನೇತ್ರತ್ವದಲ್ಲಿ ನಡೆದವು.
ಬೆಳಿಗ್ಗೆ ಶ್ರೀರಾಮ, ಸೀತಾ ಮಾತೆ ಲಕ್ಷ್ಮಣ ಹಾಗೂ ಶ್ರೀ ಹನಮಂತ ದೇವರ ವಿಗ್ರಹಗಳಿಗೆ ಅಭಿಷೇಕ, ಪಂಚಾಮೃತ, ಅಲಂಕಾರ ಸೇರಿದಂತೆ ಇನ್ನಿತರ ಸೇವೆಗಳು ನೆರವೇರಿದವು.
ಮಧ್ಯಾಹ್ನದ ಹೊತ್ತಿಗೆ ಶ್ರೀರಾಮನ ತೊಟ್ಟಿಲು ಸೇವೆಯನ್ನು ಸುಮಂಗಲೆಯರು ನೆರವೇರಿಸಿ ಗೀತ ಗಾಯನ ಹಾಗೂ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಣೆಯನ್ನು ಅಪ್ಪಣ್ಣ ಬೋಪರ್ಡೆಕರ ಮಾಡಿದರು. ನೂರಾರು ಭಕ್ತರು ಪಾಲ್ಗೊಂಡಿದ್ದರು.