ತಪ್ಪದೇ ಮತ ಚಲಾಯಿಸಿ
ಗುಳೇದಗುಡ್ಡ,ಏ18: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಮತದಾರರನೂ ಮತದಾನ ಮಾಡುವುದು ಅತ್ಯಂತ ಮಹತ್ವದ್ದಾಗಿದೆ. ಮತದಾನದಿಂದ ಯಾರೂ ದೂರ ಉಳಿಯದೇ ಯಾವುದೇ ಆಸೆ ಅಮೀಷಗಳಿಗೆ ಒಳಗಾಗದೆ ಪ್ರಜಾಪ್ರಭುತ್ವ ಸದೃಢಗೊಳ್ಳಲು ತಪ್ಪದೇ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ತಹಶೀಲ್ದಾರ ಮಂಗಳಾ ಎಂ ಹೇಳಿದರು.
ಅವರು ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮೀತಿ ಹಾಗೂ ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ದೇಶದ ಆಡಳಿತ ನಿರ್ಧರಿಸುತ್ತಾರೆ. ಹೀಗಾಗಿ ಪ್ರತಿಯೊಬ್ಬ ಮತದಾರರನೂ ತನ್ನ ಮತ ಚಲಾವಣೆ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು ಎಂದರು.
ಬಳಿಕ ಮತದಾನ ಜಾಗೃತಿ ಜಾಥಾ ಪುರಸಭೆಯಿಂದ ಪ್ರಾರಂಭಗೊಂಡು, ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಇದಕ್ಕೂ ಮೊದಲು ಮತದಾನ ಪ್ರತಿಜ್ಞಾವಿಧಿಯನ್ನು ಪುರಸಭೆ ಮುಖ್ಯಾಧಿಕಾರಿ ರಾಜೇಶ ಕೆ. ಬೋಧಿಸಿದರು.
ಈ ಸಂದರ್ಭದಲ್ಲಿ ಬಿಸಿಎಂ ತಾಲೂಕು ಕಲ್ಯಾಣಾಧಿಕಾರಿ ಶಿವಲೀಲಾ ಕೊಣ್ಣೂರ, ಬಿಸಿಎಂ ತಾಲೂಕು ವಿಸ್ತರಣಾಧಿಕಾರಿ ಅನಿಲಕುಮಾರ ಸಾತಲಗಾಂವ, ಕುಮಾರ ತಟ್ಟಿಮಠ, ವಿನಾಯಕ ಹೋಟಿ, ಹುಲಗಪ್ಪ ಚಲವಾದಿ, ವಿರೂಪಾಕ್ಷ ರಾಂಪೂರ ಹಾಗೂ ಬಿಸಿಎಂ ವಸತಿನಿಲಯದ ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.