ಕ್ರೀಡೆಯಿಂದ ದೈಹಿಕ ಬೆಳವಣಿಗೆ:ಪುಂಡಲೀಕ ಅರ್ಕಿ
ಚಿಟಗುಪ್ಪ:ಸೆ.೨೧:ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆಗೆ ಕ್ರೀಡೆ ಚಟುವಟಿಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಮಂಗಲಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಂಡಲೀಕ ಅರ್ಕಿ ತಿಳಿಸಿದರು.
ಮನ್ನಾಏಖೇಳ್ಳಿ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ತಾಲ್ಲೂಕಿನ ನಾಗನಕೇರಾ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಆಧುನಿಕ ಭರಾಟೆಯಲ್ಲಿ ಕ್ರೀಡೆಯ ಮಹತ್ವವನ್ನು ಕಳೆದುಕೊಳ್ಳುತ್ತಿದ್ದೇವೆ.ಹೀಗಾಗಿ ಶಿಕ್ಷಕರು ಮಕ್ಕಳಿಗೆ ವಿದ್ಯಾಭ್ಯಾಸ ಜೊತೆಗೆ ಕ್ರೀಡೆಯ ಬಗ್ಗೆಯೂ ತಿಳಿಸಬೇಕು ಎಂದರು.
ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಜಪ್ಪ ಜಮಾದಾರ ಮಾತನಾಡಿ, ಸದೃಢ ದೇಹಕ್ಕೆ ಕ್ರೀಡೆ ಅತ್ಯಂತ ಅವಶ್ಯಕವಾಗಿದೆ.ನಿರ್ಣಾಯಕರು ಸರಿಯಾದ ತೀರ್ಪು ಕೊಟ್ಟು ವಿದ್ಯಾರ್ಥಿಗಳ ಕ್ರೀಡಾ ಪಟುಗಳ ಮನೋಬಲ ಹೆಚ್ಚಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾರುತಿ,ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸಪ್ಪ ಮುರಾಳೆ,ಗ್ರಾಮ ಪಂಚಾಯತ ಸದಸ್ಯ ಶ್ರೀಮಂತ ಮೇಲಕೇರಿ,ಪ್ರಭು ಮಚ್ಕೋರಿ,ಮಂಜುನಾಥ್ ಕೃಷ್ಣಾರೆಡ್ಡಿ, ಸಂತೋಷ ರೆಡ್ಡಿ,ಪ್ರಶಾಂತ್,ಚAದ್ರಶಟ್ಟಿ ಭಾದಲಾಪೂರ, ರಮೇಶ್,ಕಸ್ತೂರಿ,ಪ್ರಭಾವತಿ ರಾಜಶೇಖರ್ ಉಪ್ಪಿನ್,ಮಹೇಶ್,ಶಿವಕುಮಾರ್ ರಾಥೋಡ್, ಪ್ರಭು,ರಾಜಕುಮಾರ್,ಭರತ್ ಸೇರಿದಂತೆ ಇತರರು ಇದ್ದರು.