ಗರ್ಭಿಣಿಯರು ಸೊಪ್ಪು,ತರಕಾರಿ ಸೇವಿಸಿ:ಕಲಾವತಿ ರೆಡ್ಡಿ
ಚಿಟಗುಪ್ಪ:ಸೆ.೨೧:ಗರ್ಭಿಣಿಯರು ದಿನನಿತ್ಯ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅಂಗನವಾಡಿ ವಲಯ ಮೇಲ್ವಿಚಾರಕಿ ಶ್ರೀಮತಿ ಕಲಾವತಿ ರೆಡ್ಡಿ ಅವರು ಸಲಹೆ ನೀಡಿದರು.
ತಾಲೂಕಿನ ಉಡಬಾಳ ಗ್ರಾಮದಲ್ಲಿ
ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪೋಷಣೆ ಅಭಿಯಾನವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.ಮಕ್ಕಳು ಹಾಗೂ ಮಹಿಳೆಯರಲ್ಲಿನ ರಕ್ತಹಿನತೆ ಸೇರಿದಂತೆ ಇನ್ನಿತರ ಸಮಸ್ಯಗಳಿಗೆ ಸರಿಯಾದ ಆಹಾರ ಸೇವನೆ ಮಾಡದಿರುವುದೇ ಮುಖ್ಯ ಕಾರಣವಾಗಿದೆ.
ಗರ್ಭಿಣಿಯರು,ಬಾಣಂತಿಯರು ಹಸಿ ತರಕಾರಿ,ಸೋಪ್ಪು,ಹಣ್ಣು ಹಂಪಲಗಳು,ಮೋಳಕೆ ಕಾಳುಗಳು,ಹಾಲು ಮತ್ತು ಹಾಲಿನ ಉತ್ಪನ್ನಗಳು,ಮೋಟ್ಟೆ,ಮಿನು,ಮೌಂಸ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು.ಒಬ್ಬ ಆರೋಗ್ಯವಂತ ತಾಯಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು.ಪ್ರತಿಯೊಬ್ಬ ತಾಯಿಂದಿರು ಒಂದು ಗಿಡ ನೆಟ್ಟು ಮಗುವಿನಂತೆ ಅದನ್ನು ಕೂಡ ಹೆಮ್ಮರವಾಗಿ ಬೆಳೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸಂಧ್ಯಾರಾಣಿ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾದ ವಿಠಲರಾವ,ನೀತಿ ಆಯೋಗದ ಸಂಯೋಜಕರಾದ ಸಂತೋಷ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಶಂಕರ, ಆರೋಗ್ಯ ಕೇಂದ್ರ ವೈದ್ಯೆ ಆಶಾ,ಅಂಗನವಾಡಿ ಕಾರ್ಯಕರ್ತೆಯರಾದ ರೇಣುಕಾ ದೇವಿ,ಸಿದ್ದಮ್ಮ, ಪ್ರಭಾವತಿ,ವಿಜಯಲಕ್ಷ್ಮಿ,ಅನಿತಾ ಸೇರಿ ಅಂಗನವಾಡಿ ಸಹಾಯಕಿಯರು,ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸಿಮಂತ,ಆರು ತಿಂಗಳ ಮಕ್ಕಳಿಗೆ ಅನ್ನ ಪ್ರಾಶನ,ಅಕ್ಷರ ಅಭ್ಯಾಸ ಮಾಡಲಾಯಿತು.
