ಜಾಗಿರದಾರ ಅನುಭವಿ ವ್ಯಕ್ತಿಗಳಾಗಿದ್ದರೂ:ದಂಡಿಗಿಮಠ
ಯಾದಗಿರಿ:ಸೆ.೨೧:ಶಿಕ್ಷಕರ ತರಬೇತಿ ಕೇಂದ್ರ ಸೇರಿದಂತೆ ಡಯಟದ ದೈಹಿಕ ಉಪನ್ಯಾಸಕರಾಗಿ ಸಾಕಷ್ಟು ವರ್ಷಗಳಿಂದ ಸೇವೆ ಸಲ್ಲಿಸಿದ ಜಾಗಿರದಾರ ಅವರು ಉತ್ತಮ ಅನುಭವಿ ವ್ಯಕ್ತಿಗಳಾಗಿದ್ದರೂ ಎಂದು ಸೈದಾಪುರ ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ ಅಭಿಪ್ರಾಯಪಟ್ಟರು.
ನಗರದ ಡಯಟದಲ್ಲಿ ಸೇವೆ ಸಲ್ಲಿಸಿ ಸರಕಾರಿ ಪ್ರೌಢ ಶಾಲೆಗೆ ವರ್ಗಾವಣೆಗೊಂಡ ರವಿ ಜಾಗಿರದಾರ ಅವರÀನ್ನು ಅವರ ಮನೆಯಲ್ಲಿ ಜಿಲ್ಲೆಯ ಖಾಸಗಿ ಡಿ.ಎಲ್.ಇಡಿ ಕಾಲೇಜುಗಳ ಪರವಾಗಿ ಸನ್ಮಾನಿಸಿ ಮಾತನಾಡಿದರು. ಸರಕಾರದಿಂದ ಬರುವ ಆದೇಶಗಳನ್ನು ಹಾಗೂ ತಮಗೆ ವಹಿಸಿದ ಜವಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಜಿಲ್ಲೆಯಲ್ಲಿ ಶಿಕ್ಷಕರ ತರಬೇತಿ ಕೇಂದ್ರಗಳು ಉತ್ತಮ ಸೇವೆ ಸಲ್ಲಿಸುವಂತಾಗಲೂ ರವಿಯವರು ನೆರವಾಗಿದ್ದರು. ಮೇಲಾಧಿಕಾರಿಗಳಿಂದ ಮಾಹಿತಿ ಪಡೆದು ನಮಗೆ ಸರಿಯಾದ ರೀತಿಯಲ್ಲಿ ತಿಳಿಸುತ್ತಿದ್ದರು. ಇವರ ಸೇವಾ ಮನೋಭಾವನೆಯ ವ್ಯಕ್ತಿತ್ವ ನಮಗೆ ಮಾದಿರಯಾಗಬೇಕು. ಇನ್ನೂ ಹೆಚ್ಚಿನ ಸೇವೆ ಇರವರಾಗಲಿ ಎಂದು ಹಾರೈಸಿದರು.
ಸನ್ಮಾನಿತರಾಗಿ ಹಿರಿಯ ದೈಹಿಕ ಶಿಕ್ಷಕ ರವಿ ಜಾಗಿರದಾರ ಮಾತನಾಡಿ, ಎಲ್ಲರ ಸಹಕಾರದಿಂದ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಯಿತು. ನನಗೆ ಕೊಟ್ಟಿರುವ ಕಾರ್ಯವನ್ನು ನಿರ್ವಹಿಸಿದ್ದೇನೆ. ಇದಕ್ಕೆ ನೀವುಗಳು ನನಗೆ ಗೌರವ ಸಲ್ಲಿಸಿದ್ದೀರಿ ಇದರಿಂದ ನನ್ನ ಜವಬ್ದಾರಿ ಇನ್ನು ಹೆಚ್ಚಾಗಿದೆ ಎಂದು ಹೇಳಿದರು.
ಖಾಸಗಿ ಡಿ.ಎಲ್.ಇಡಿ ಕಾಲೇಜುಗಳ ಪ್ರಾಂಶುಪಾಲರಾದ ವೆಂಕಪ್ಪ ಮನಗಾರ, ತಿಪ್ಪಣ್ಣ ಸುರಪುರ, ಶರಣು ಭಾವಿಕಟ್ಟಿ ಶಹಾಪುರ ಸೇರಿದಂತೆ ಇತರರಿದ್ದರು.