ಸಂಸ್ಕೃತ ಭಾಷೆ ದೇವವಾಣಿ ,ಸರ್ವಶ್ರೇಷ್ಠ ಭಾಷೆ : ಶರಣಬಸಪ್ಪಾ.ಕಾಂಬಳೆ
ಇಂಡಿ:ಸೆ.೨೧: ಸಂಸ್ಕೃತ ಭಾಷೆಗೆ ತನ್ನದೆಯಾದ ಇತಿಹಾಸ ಹೊಂದಿದ್ದು ಮಾತೃ ಭಾಷೆ ಕನ್ನಡದಲ್ಲಿ ಶೆ. ೯೦ ರಷ್ಟು ಸಂಸ್ಕೃತ ಭಾಷೆ ಸಮ್ಮಿಲಿತವಾಗಿದೆ ಸಂಸ್ಕೃತ ಭಾಷೆ ದೈವವಾಣಿ, ಗಿರಿವಾಣಿ ಸರ್ವಶ್ರೇಷ್ಠ ವಾಣಿ ಎಂದು ವಿಶ್ವವಾಣಿ ಪತ್ರಕರ್ತ ಶರಣಬಸಪ್ಪಾ ಕಾಂಬಳೆ ಹೇಳಿದರು.
ಕರ್ನಾಟಕ ಸಂಸ್ಕೃತ ವಿಶ್ವವಿಧ್ಯಾಲಯ ಸಂಸ್ಕೃತ ಶಿಕ್ಷಣ ನಿರ್ದೇನಾಲಯ ಬೆಂಗಳೂರು. ಶ್ರೀವೃಷಭಲಿಂಗಾರ್ಯ ಕೃಪಾಘೋಷಿತ ಸಂಸ್ಕೃತ ಪಾಠ ಶಾಲೆ ಬೋಳೆಗಾಂವ್ ,ಕಿತ್ತೂರರಾಣಿ ಚೆನ್ನಮ್ಮಾ ಶಾಲೆ ಇಂಡಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಅಸ್ಮಾಕಂ ಸಂಸ್ಕೃತ ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಂಸ್ಕೃತ ಭಾಷೆ ಎಲ್ಲಾ ಭಾಷೇಗಳ ಮೂಲ ಬೇರು. ದೇವರನ್ನು ಒಲಿಸಿಕೊಳ್ಳಬೇಕಾದರೆ ಸಂಸ್ಕೃತ ಶ್ಲೋಕಗಳಿಂದ ಮಾತ್ರ ಸಾಧ್ಯೆ. ಆಂಗ್ಲ ಭಾಷೆ ಅಂತರಾಷ್ಟಿçÃಯ ಭಾಷೆಯಾದರೆ ಸಂಸ್ಕೃತ ಭಾಷೆ ಅಂತರಲೋಕೀಯಾ ಭಾಷೆ ಪರಲೋಕಿಯಪಿ ಸಂಸ್ಕೃತ ಭಾಷಾ ವರ್ತತಿ ,ಸಂಸ್ಕೃತಿಭಾಷೆ ಗೊತ್ತಿಲ್ಲದಿದ್ದರೆ ಸ್ವರ್ಗಕ್ಕೆ ಹೋಗುವುದು ಅಸಾಧ್ಯ ಆದ್ದರಿಂದ ಸಂಸ್ಕೃತ ಯಾರ ಸ್ವತ್ತು ಅಲ್ಲ ಇದು ಎಲ್ಲರೂ ಕಲಿಯುವ ಸರಳ ಸುಲಲೀತ ಭಾಷೆ. ಇಂದು ಸರಕಾರಗಳು ಕೂಡಾ ಉದ್ಯೋಗ, ಪ್ರವೇಶ ಇತರೆ ಕ್ಷೇತ್ರಗಳಲ್ಲಿ ಸಂಸ್ಕೃತ ಭಾಷೆ ಕಲಿತ ವಿಧ್ಯಾರ್ಥಿಗಳಿಗೆ ಮೀಸಲಾತಿ ಕಲ್ಪಿಸಬೇಕು ಎಂದಾಗ ಮಾತ್ರ ಸಂಸ್ಕೃತ ಭಾಷೆ ಉಳಿಯಲು ಸಾಧ್ಯ ಎಂದರು.
ಉದ್ಘಾಟಕರಾಗಿ ಅನೀಲ ಪತಂಗೆ , ಅಧ್ಯಕ್ಷತೆ ಆಕಾಶ ಇಂಡಿ ವಹಿಸಿದರು,
ಶ್ರೀಮತಿ ಸ್ವಪ್ನಾ ಎಸ್. ಇಂಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಇದೇ ಸಂಧರ್ಬದಲ್ಲಿ ತಾಲೂಕಿನ ವಿವಿಧ ಸಂಸ್ಕೃತ ಶಾಲೆಗಳ ವಿಧ್ಯಾರ್ಥಿ, ವಿಧ್ಯಾರ್ಥಿನಿಯವರು ಸಂಸ್ಕೃತ ಶ್ಲೋಕ ಹಾಗೂ ಸಂಸ್ಕೃತ ನಾಟಕ ,ಸಂಸ್ಕೃತ ಗೀತೆ ಹಾಡುವ ಮೂಲಕ ಇಡೀ ಪಾಲಕ ,ಪೋಷಕರ ಗಮನ ಸೆಳೆದರು.