ದುಡಿಮೆಯಲ್ಲಿ ಅಪಾರ ಸಂಪತ್ತಿದೆ:ಶಾಸ್ತಿçÃ
ತಾಳಿಕೋಟೆ:ಸೆ.೨೧:ರಾಜ ವೈಭವದಲ್ಲಿದ್ದ ಮೊಳಿಗೆಯ ಮಾರಯ್ಯನವರು ಬಸವಣ್ಣನವರ ಕಡೆ ಭಕ್ತರು ದವಡಾಯಿಸುತ್ತಿರುವುದನ್ನು ಕಂಡು ತನ್ನ ರಾಜಸ್ಥಾನವನ್ನು ತೊರೆದು ಕಲ್ಯಣದಲ್ಲಿದ್ದ ಬಸವಣ್ಣನವರ ಆ ಸ್ಥಾನಕ್ಕೆ ಆಗಮಿಸಿದ್ದರೂ ಕಟ್ಟಿಗೆ ಮಾರುವ ಕಾಯಕದಲ್ಲಿ ತೊಡಗಿಕೊಂಡ ಮಾರಯ್ಯ ದೇವರ ಒಲುಮೆಯನ್ನು ಪಡೆದದ್ದನ್ನು ಅರಿತ ಬಸವಣ್ಣನವರು ಅವರನ್ನು ಬಹಳೇ ಗೌರವಿಸುತ್ತಿದ್ದರೆಂದು ಪುರಾಣ ಪ್ರವಚನಕಾರರಾದ ಪ್ರವಚನ ರತ್ನ ಕಲ್ಬುರ್ಗಿ ಜಿಲ್ಲೆಯ ಸುಂಟನೂರ ಸಂಸ್ಥಾನ ಹಿರೇಮಠದ ಶ್ರೀ ಬಂಡಯ್ಯ ಶಾಸ್ತಿçÃಗಳು ನುಡಿದರು.
ಶುಕ್ರವಾರರಂದು ಶ್ರೀ ಖಾಸ್ಗತೇಶ್ವರರ ೧೨೮ನೇ ಹಾಗೂ ಶ್ರೀ ವೀರಕ್ತ ಮಹಾಸ್ವಾಮಿಗಳವರ ೧೦ನೇ ಪುಣ್ಯಸ್ಮರಣೋತ್ಸವ ಕುರಿತು ಏರ್ಪಡಿಸಲಾದ ಆಧ್ಯಾತ್ಮೀಕ ಪ್ರವಚನದ ೪ನೇ ದಿನದಂದು ಮಾತನಾಡುತ್ತಿದ್ದ ಶಾಸ್ತಿçÃಗಳು ಮಾರಯ್ಯನವರು ಲಿಂಗವನ್ನೇ ಮಾತನಾಡಿಸಿ ತಮ್ಮ ಪ್ರಾಮಾಣಿಕತನದ ದುಡಿಮೆಯತ್ತ ಸಾಗಿ ದುಡಿಮೆಯಲ್ಲಿಯೇ ಅಪಾರ ಸಂಪತ್ತಿದೆ ಎಂದು ತೋರಿಸಿ ಕೊಟ್ಟಿದ್ದಾರೆಂದರು. ಸಣ್ಣ ದುಡಿಮೆಯಾಗಲೀ ಅಥವಾ ದೊಡ್ಡ ದುಡಿಮೆ ಯಾಗಲೀ ಯಾವುದಾದರೇನು ಅದು ಕಾಯಕವೇ ಕಾರಣ ಬಸವಣ್ಣನವರು ಕಾಯಕವೇ ಕೈಲಾಸವೆಂದಿದ್ದಾರೆ ಇದನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡ ಮೊಳಿಗೆಯ ಮಾರಯ್ಯನವರು ಸದಾ ಕಾಯಕದಲ್ಲಿ ತೊಡಗುತ್ತಿದ್ದರೆಂದರು.
ಶರಣರು ಪ್ರಾಬಲ್ಯತೆಯನ್ನು ಕೊಟ್ಟಿದ್ದು ಕಾಯಕಕ್ಕೆ ಮಾತ್ರ ಅವರಂತೆ ತೋಟದ ಸಿದ್ದಲಿಂಗ ಶ್ರೀಗಳು ಹಾಗೂ ಖಾಸ್ಗತರು, ವೀರಕ್ತ ಶ್ರೀಗಳು ಕಾಯಕಕ್ಕೆ ಮಹತ್ವ ಕೊಟ್ಟಿದ್ದಾರೆಂದರು. ಕಾಯಕ ಜೀವಿ ಆಗದಿದ್ದವರಿಗೆ ೧೨ನೇ ಶತಮಾನದಲಲ್ಲಿ ಕಲ್ಯಾಣ ಮಂಟಪದಲ್ಲಿ ಪ್ರವೇಶವಿದ್ದಿಲ್ಲ ಇಂತಹ ಪರಂಪರೆಯನ್ನು ಶರಣರು ಮುಂದುವರೆಸಿಕೊAಡು ಬಂದಿದ್ದಾರೆAದರು.ಸಮಾಜ ತೀದ್ದುವುದು ಸ್ವಾಮಿತ್ವದ ಕಾಯಕವೆಂಬುವುದನ್ನು ಶ್ರೀ ಖಾಸ್ಗತರು ಶ್ರೀ ವೀರಕ್ತ ಮಹಾಸ್ವಾಮಿಗಳು ಮಾಡಿತೋರಿಸಿದ್ದಾರೆ ಬಸವಣ್ಣನವರ ವ್ಯಕ್ತಿತ್ವ ಅವರ ಕಾಯಕ ನೀಷ್ಠೆಯನ್ನು ಅರಿತ ಭಕ್ತರು ೧೨ನೇ ಶತಮಾನದಲ್ಲಿ ಕಾಶ್ಮೀರದಿಂದ ಕಲ್ಯಾಣದವರೆಗೆ ಅಂದಿನ ಕಾಲದಲ್ಲಿ ಲಕ್ಷಗಟ್ಟಲೇ ಆಗಮಿಸುತ್ತಿದ್ದ ಭಕ್ತಸಮೂಹದಲ್ಲಿ ೬೦೦೦ಜನ ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದಿದ್ದರೆAಬುದು ಇತಿಹಾಸದಲ್ಲಿದೆ ಎಂದರು.
ಆಚಾರ ಅನಾಚಾರಗಳಲ್ಲಿಯೇ ಸ್ವರ್ಗ ನರಕಗಳನ್ನು ಕಾಣುವುದಿದೆ ಎಂದು ಶಿವಯೋಗಿಗಳು ಹಾಗೂ ಶರಣರು, ಸಂತರು ದಾರ್ಶನಿಕರು ಹೇಳಿದ್ದಾರೆಂದರು. ವಿಜಯಪುರದಲ್ಲಿ ಇತ್ತೀಚಿಗೆ ಸಿದ್ದೇಶ್ವರ ಶ್ರೀಗಳು ನಮ್ಮನ್ನು ಬಿಟ್ಟು ಅಗುಲಿದಾಗ ಸರ್ವ ಜನಾಂಗವೇ ಕಣ್ಣೀರಿಟ್ಟು ದುಃಖಿಸುತ್ತಿತ್ತು ಇಂತಹ ಶ್ರೀಗಳು ಇನ್ನು ಬದುಕಬೇಕಾಗಿತ್ತು ಎಂಬ ಮಾತುಗಳೇ ಕೇಳಿಬರುತ್ತಿದ್ದಂತಹ ಮಾತುಗಳನ್ನು ಆಡಿಸಿಕೊಳ್ಳುವವ ಸ್ವರ್ಗಕ್ಕೆ ಹೊಗುತ್ತಾನೆ ಎಂಬುದಾಗಿದೆ ಎಂದು ಹೇಳಿದ ಶಾಸ್ತಿçÃಗಳು ಹಿಂದಿನ ಹಾಗೂ ಇಂದಿನಕಾಲದ ಸ್ಥೀತಿಗತಿಗಳನ್ನು ವಿವರಿಸಿದ ಶಾಸ್ತಿçÃಗಳು ಜಾನಪದಗಳಲ್ಲಿಯೂ ಮಹತ್ವವಿತ್ತು ಜಾನಪದ ಸಾಹಿತ್ಯ ಎಂಬುದು ಉಗಮವಾಗಿದ್ದುದು ಜಾಣ ಜಾಣಿಯರು ಹಾಡಿ ಕುಳಿತಲ್ಲಿ ನಿಂತಲ್ಲಿ ಬರೆದವುಗಳೆಲ್ಲವು ವಚನಗಳಾಗಿವೆ ಎಂದರು.
ಇಂದಿನ ದಿನ ಮಾನಗಳಲ್ಲಿ ಸಾಹಿತ್ಯ ಅಭಿರುಚಿ ಎನ್ನುವುದು ಅನುಭವ ಎನ್ನುವುದು ಹೆಚ್ಚಿಗೆ ಕಂಡು ಬರುತ್ತಿಲಿಲ್ಲ ಹಿಂದಿನ ಕಾಲದಲ್ಲಿ ತೊಟ್ಟಿಲದಲ್ಲಿರುವ ಮಗುವನ್ನು ಆಡಿಸಲು ಆಡಿ ಬಾ ನನ್ನ ಕಂದ ಅಂಗಾಲ ತೋಳೆದೇನಾ, ಬಂಗಾರದ ಮುಖ ತೋಳೆದೇನಾ ತಾಯವ್ವ ಎಂಬ ಹಾಡನ್ನು ಹಾಡಿ ಅಳುವ ಮಗುವಿಗೆ ಸಂತೈಸುತ್ತಿದ್ದರೆAದು ಹೇಳಿದ ಶಾಸ್ತಿçÃಗಳು ಈ ಪದ್ಯದಲ್ಲಿ ತಾಯಿ ಹೇಳುವ ತೀರ್ಥವೆಂದರೇ ತೆಂಗಿನಕಾಯಿಯಲ್ಲಿನ ಎಳೆನೀರು ಹಾಗೂ ತಾಯಿಯ ಎದೆ ಹಾಲು ಪವಿತ್ರವಾದ ತೀರ್ಥವೆಂದು ನೆರೆದ ಭಕ್ತಸಮೂಕ್ಕೆ ತಿಳುವಳಿಕೆ ನೀಡಿದ ಶಾಸ್ತಿçÃಗಳು ಬಹು ಮಾರ್ಮಿಕವಾಗಿ ದುಡಿಮೆಯಲ್ಲಿ ಅಪಾರ ಸಂಪತ್ತು ಇದೆ ಎಂಬುದರ ಕುರಿತು ವಿವರಿಸಿದರು.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಶ್ರೀ ಚಂದ್ರಶೇಖರ ಶಾಸ್ತಿçÃಗಳು ಹಿರೇಮಠ(ಯಕ್ತಾಪೂರ), ವೇ.ವಿಶ್ವನಾಥ ವಿರಕ್ತಮಠ, ವೇ.ಮಹಾಂತಯ್ಯ ವಿರಕ್ತಮಠ, ಗವಾಯಿಗಳಾದ ರಾಜಶೇಖರ ಗುಬ್ಬೇವಾಡ, ಬಸನಗೌಡ ಬಿರಾದಾರ, ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.