ತೃತೀಯ ಲಿಂಗದವರು ಸಮಾಜದ ಮುಖ್ಯವಾಹಿನಿಗೆ ಬರಲು ಕೌಶಲ್ಯಾಧಾರಿತ ತರಬೇತಿ ಅಗತ್ಯ: ಪ್ರೊ. ಚಂದ್ರಶೇಖರ
ಸAಜೆವಾಣಿ ವಾರ್ತೆ,
ವಿಜಯಪುರ,ಸೆ.೨೧: ತೃತೀಯ ಲಿಂಗದವರು ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣ ಮತ್ತು ಕೌಶಲ್ಯ ಆಧಾರಿತ ತರಬೇತಿಯನ್ನು ಪಡೆದುಕೊಳ್ಳಬೇಕೆಂದು ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ಡಾ. ರೂಪಾ ನಾಯ್ಕೋಡಿ ಅವರ ಐಸಿಎಸ್‌ಎಸ್‌ಆರ್ ಪಿ.ಡಿ.ಎಫ್ ಸಂಶೋಧನೆ ಅಂಗವಾಗಿ ನವಸ್ಪೂರ್ತಿ ಸರಕಾರೇತರ ಸಂಘದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ೧೦೦ ಜನ ತೃತಿಯ ಲಿಂಗದವರ “ಒಂದು ದಿನದ ಕೌಶಲ್ಯ ಆಧಾರಿತ ತರಬೇತಿಯನ್ನು” ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ನಿಪ್ಪಾಣಿಯ ಕೆ.ಎಲ್.ಇ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಬಿ. ಪೋಲಿಸಪಾಟೀಲ ಅವರು, ಮೂಢನಂಬಿಕೆಗಳಿAದ ಹೊರ ಬಂದು ಶಿಕ್ಷಣ ಮತ್ತು ಕೌಶಲ್ಯ ಆಧಾರಿತ ತರಬೇತಿಯನ್ನು ಪಡೆದುಕೊಂಡಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ನವಸ್ಪೂರ್ತಿ ಸರಕಾರೇತರ ಸಂಸ್ಥೆಯ ನಿರ್ದೇಶಕ ಶಬ್ಬೀರ ಕಾಗಜಕೊಟಿ, ರುಡ್‌ಸೆಟ್ ಸಂಸ್ಥೆ ನಿರ್ದೇಶಕ ಮುತ್ತಣ್ಣ ಧನಗಾರ, ಪ್ರೊ. ಬಿ.ಎಲ್. ಲಕ್ಕಣ್ಣನವರ, ಪ್ರೊ. ವೆಂಕೋಬಾ ನಾರಾಯಣಪ್ಪ, ಪ್ರೊ. ವಿಷ್ಣು ಶಿಂಧೆ, ಪ್ರೊ. ಅಶೋಕ ಸುರಪುರ ಉಪಸ್ಥಿತರಿದ್ದರು.
ಡಾ. ರೂಪಾ ನಾಯ್ಕೋಡಿ ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿನಿ ಪದ್ಮಾವತಿ ಯತಗಲ್ ನಿರೂಪಿಸಿದರು. ನಿಫೀಸಾ ಸಾಂಗಲಿಕರ ವಂದಿಸಿದರು.