ಚಿಟ್ ಫಂಡ್ ಕಂಪನಿಗಳಲ್ಲಿ ಹಣ ಹೂಡಿರುವ ಸಾರ್ವಜನಿಕರ ಹಣ ಮರಳಿಸುವಂತೆ ರೈತ ಸಂಘ ಆಗ್ರಹಿಸಿ ಡಿಸಿಗೆ ಮನವಿ ಸಲ್ಲಿಕೆ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೨೧: ಅಗ್ರಿಗೋಲ್ಡ್, ಪಿ.ಎ.ಸಿ.ಎಲ್, ಸಮೃದ್ಧ ಜೀವನ ಸೇರಿದಂತೆ ಇನ್ನಿತರ ಕಂಪನಿಗಳಲ್ಲಿ ಕಷ್ಟಪಟ್ಟು ದುಡಿದಿರುವ ಬಡವರು ಹಾಗೂ ರೈತರು ತೊಡಗಿಸಿರುವ ಹಣವನ್ನು ಕೂಡಲೇ ಹಿಂದಿರುಗಿಸಲು ಆದೇಶಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ ಅವರು ಕಳೆದ ೨೦ ದಿನಗಳಿಂದ ಧರಣಿ ನಿರತ ವಂಚಿತ ಠೇವಣಿದಾರರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.
೬ ವರ್ಷದಲ್ಲಿ ಹಣ ದ್ವಿಗುಣವಾಗುತ್ತದೆ ಎಂಬ ನಂಬಿಕೆಯೊAದಿಗೆ ಠೇವಣಿದಾರರು ಹೂಡಿಕೆ ಮಾಡಿದ್ದರು. ಆದರೆ ಕೇಂದ್ರ ಸರಕಾರ ಏಕಾಏಕಿ ೧೮೫ ಚಿಟ್ ಫಂಡ್ ಕಂಪನಿಗಳನ್ನು ಬಂದ್ ಮಾಡಿ ಆದೇಶ ಹೂರಡಿಸಿರುವ ಹಿನ್ನಲೆಯಲ್ಲಿ ಎಲ್ಲಾ ಹೂಡಿಕೆದಾರರು ಚಿಂತೆಗೀಡಾಗುವAತೆ ಮಾಡಿದೆ. ಈ ಕುರಿತು ಸರಕಾರ ಮಧ್ಯಸ್ತಿಕೆ ವಹಿಸಿ ಹಣ ಹಿಂತುರಿಗಿಸಲು ಆದೇಶ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ನಮ್ಮ ಜಿಲ್ಲೆಯಲ್ಲಿ ಅಂದಾಜು ೨ ಲಕ್ಷ ಗ್ರಾಹಕರು ಸುಮಾರು ೩೫೦ ಕೋಟಿ ರೂ ಗಳ ಹಣವನ್ನು ಹೂಡಿಕೆ ಮಾಡಿದ್ದು, ಹಣ ಹೂಡಿಕೆ ಮಾಡಿರುವ ಸಾರ್ವಜನಿಕರು, ರೈತರು, ಮಧ್ಯಮ ವರ್ಗದ ಜನರು ಎಲ್ಲಿ ಹೋಗಬೇಕು, ಈ ಚಿಟ್ ಫಂಡ್ ಕಂಪನಿಗಳಿಗೆ ಅನುಮತಿ ನೀಡಿ ಅವುಗಳಿಂದ ಹಣ ಠೇವಣಿ ಮಾಡಿಸಿಕೊಂಡಿರುವ ಸರಕಾರ ಈಗ ಕಂಪನಿಯ ಆಸ್ತಿಯನ್ನು ಹರಾಜು ಮಾಡಿ ಹೂಡಿಕೆದಾರರಿಗೆ ಹಣ ನೀಡಬೇಕು ಎಂದು ಆಗ್ರಹಿಸಿದರು.
ಇದೇ ತರಹನಾಗಿ ರಾಜ್ಯವ್ಯಾಪಿ ಅಂದಾಜು ೪೦ ಸಾವಿರ ಕೋಟಿ ಹಣ ಹೂಡಿಕೆ ಮಾಡಿದ್ದಾರೆ, ದೇಶವ್ಯಾಪಿ ಅಂದಾಜು ೪ ಲಕ್ಷ ೨೦ ಸಾವಿರ ಕೋಟಿ ಹಣ ಹೂಡಿಕೆ ಮಾಡಿದ್ದಾರೆ, ಈಗ ಕೇಂದ್ರ ಸರಕಾರ ದೇಶವ್ಯಾಪಿ ೩ ಲಕ್ಷ ಖಾಸಗಿ ಕಂಪನಿಗಳನ್ನು ಏಕಾಏಕಿ ಬಂದ್ ಮಾಡಿದ್ದಾರೆ, ವÀಂಚನೆಗೊಳಗಾದ ಸಂತ್ರಸ್ತರು ಕಳೆದ ೧೦ ವರ್ಷಗಳಿಂದ ನ್ಯಾಯಕ್ಕಾಗಿ ಸರಕಾರಕ್ಕೆ ಮನವಿ ಮಾಡುತ್ತಾ ಬಂದಿರುತ್ತಾರೆ, ಆದರೆ ಇಲ್ಲಿಯವರೆಗೆ ಸರಕಾರದ ಯಾವುದೇ ಅಧಿಕಾರಿಗಳು ಕಿಂಚಿತ್ತೂ ಕಾಳಜಿ ಮಾಡದೇ ಇರುವುದು ಹೂಡಿಕೆದಾರರಿಗೆ ಆತಂಕ ಮೂಡಿಸಿದೆ. ಹೂಡಿಕೆದಾರರು ಏಜೆಂಟ್‌ರುಗಳಿಗೆ ಹಣ ಕೊಡಿಸಿ ಎಂದು ನಿತ್ಯ ಕಿರಿ ಕಿರಿ ಮಾಡುವುದರಿಂದ ಮನನೊಂದ ಎಷ್ಟೋ ಜನರು ಆತ್ಮಹತ್ಯೆ ಮಾಡಿಕೊಡಿರುವ ಘಟನೆಗಳು ನಡೆದಿವೆ.
೬ ವರ್ಷಗಳಲ್ಲಿ ಹಣ ದ್ವೀಗುಣ ಮಾಡಿಕೊಡುವುದಾಗಿ ಹೇಳಿರುವ ಚಿಟ್ ಫಂಡ್ ಕಂಪನಿಗಳು ಸಾವಿರಾರು ಕೋಟಿ ಹಣ ಮಾಡಿಕೊಂಡು ಸಾರ್ವಜನಿಕರಿಗೆ ಮೋಸ ಮಾಡಿರುವುದು ಮೇಲ್ನೊಟಕ್ಕೆ ಕಂಡು ಬರುತ್ತದೆ, ಬಡ್ಸ್ ಕಾಯಿದೆ ಪ್ರಕಾರ ೬ ತಿಂಗಳಲ್ಲಿ ಹಣ ಮರಳಿ ನೀಡಬೇಕು, ಕಂಪನಿಗಳು ಹಣ ಕೊಡದಿದ್ದರೆ ಸರಕಾರವೇ ಮಧ್ಯ ಪ್ರವೇಶಿಸಿ ಹಣ ಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಆದರೆ ಸರಕಾರ ಈ ಹೋರಾಟವನ್ನು ಬಗ್ಗು ಬಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ರಾಜ್ಯದ ಎಲ್ಲಾ ೧೮೫ ಚಿಟ್ ಫಂಡ್ ಕಂಪನಿಗಳ ಸ್ತಿರಾಸ್ತಿ ಹಾಗೂ ಜಮಾವಾಣೆಯ ಹಣವನ್ನು ಕಾನೂನು ಬದ್ದವಾಗಿ ಹರಾಜು ಪ್ರಕ್ರಿಯೆ ಕೈಕೊಂಡು ಹೂಡಿಕೆದಾರರಿಗೆ ಹಣವನ್ನು ಮರಳಿ ಕೊಡಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಈ ವೇಳೆ ವಿಜಯಪುರ ಜಿಲ್ಲಾ ಸಂಚಾಲಕÀ ರಾಮನಗೌಡ ಪಾಟೀಲ, ನಗರ ಘಟಕದ ಅಧ್ಯಕ್ಷÀ ಸಂಗಪ್ಪ ಚಲವಾದಿ (ಟಕ್ಕೆ), ವಿಜಯಪುರ ತಾಲೂಕಾ ಅಧ್ಯಕ್ಷÀ ಮಹಾದೇವಪ್ಪ ತೇಲಿ, ವಿಜಯಪುರ ತಾಲೂಕಾ ಉಪಾಧ್ಯಕ್ಷÀ ಪ್ರಕಾಶ ತೇಲಿ, ಆಹೇರಿ(ಜ) ಅಧ್ಯಕ್ಷ ಆತ್ಮಾನಂದ ಭೈರೋಡಗಿ, ತಿಪ್ಪರಾಯ ಭೈರೋಡಗಿ, ತುಕಾರಾಮ ಡೋಲಸೆ, ರಾಮಣ್ಣ ಹೊಸಮನಿ, ಅಮೋಘಿ ವಾಡೇದ, ಚಂದ್ರಾಮ ಬಿಸನಾಳ , ಜಯಸಿಂಗ್ ರಜಪೂತ, ರಾಮಣ್ಣ ದೇವೂರ, ಮಹಾದೇವ ದೇವೂರ, ಚನ್ನಪ್ಪ ವಾಡೇದ, ಮಹಾದೇವ ವಾಲಿ, ಸಂಗನಗೌಡ ಬಿರಾದಾರ, ಬಸನಗೌಡ ಬಿರಾದಾರ, ಮಲ್ಲನಗೌಡ ಬಿರಾದಾರ, ಸಂಗನ ಬಸಪ್ಪಗೌಡ ಪಾಟೀಲ, ಬಸನಗೌಡ ಬಿರಾದಾರ, ಮಲ್ಲು ಬಾಗೇವಾಡಿ, ಪರಶುರಾಮ ದೇವೂರ, ಆತ್ಮಾನಂದ ದೇವೂರ, ಚನ್ನು ವಾಲಿ, ಲಾಯಪ್ಪ ವಾಘೆ, ಶಂಕರ ವಾಘೆ ಮುಂತಾದ ಪ್ರಮುಖರು ಸೇರಿದಂತೆ ಅನೇಕರು ಇದ್ದರು.