ಗ್ರಾಮೀಣ ಆರೋಗ್ಯ ಕೇಂದ್ರಗಳನ್ನು ಸುಧಾರಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
ಸಂಜೆವಾಣಿ ವಾರ್ತೆ,
ವಿಜಯಪುರ,ಏ.18:ಸರಕಾರ ಸುಸಜ್ಜಿತ ಆರೋಗ್ಯ ಉಪಕೇಂದ್ರಗಳನ್ನು ನಿರ್ಮಿಸಿದ್ದರೂ, ವೈದ್ಯರು ಲಭ್ಯವಿಲ್ಲದ್ದಕ್ಕೆ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಆದ್ದರಿಂದ ಗ್ರಾಮೀಣ ಆರೋಗ್ಯ ಕೇಂದ್ರಗಳನ್ನು ಸುಧಾರಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಹುಣಶ್ಯಾಳ ಗ್ರಾಪಂ ಮಾಜಿ ಅಧ್ಯಕ್ಷೆ ಬಂಗಾರೆಮ್ಮ ಮಾನಪ್ಪ ದೊಡಮನಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸರಕಾರ ಸುಸಜ್ಜಿತವಾದ ಆಸ್ಪತ್ರೆ ಕಟ್ಟಡಗಳನ್ನು ನಿರ್ಮಿಸಿದೆ. ದೇವರ ಹಿಪ್ಪರಗಿ ಭಾಗದ ಆಲಗೂರು, ಬಿ.ಬಿ ಇಂಗಳಗಿ, ಅಸಂತಾಪುರ, ಕೆರೂಟಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಾಗಿಲು ಹಾಕಿದ ಸ್ಥಿತಿಯಲ್ಲಿವೆ. ಗ್ರಾಮೀಣ ಪ್ರದೇಶ ಎಂದರೆ ಕರ್ತವ್ಯ ನಿರ್ವಹಿಸಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದು ಆರೋಗ್ಯ ಇಲಾಖೆ ಅಧಿಕಾರಿಗಳ ಸಬೂಬು ಆಗಿದೆ. ಇದರಿಂದ ಆಸ್ಪತ್ರೆಗೆ ಬಂದವರು ವಾಪಸ್ ಹೋಗುವಂತಾಗುತ್ತಿದೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರಿಗೆ ಈ ಬೇಸಿಗೆಯಲ್ಲಿ ಆರೋಗ್ಯ ಸಮಸ್ಯೆಗಳಿಂದ ತೀವ್ರ ತೊಂದರೆಯಾಗುತ್ತಿದೆ. ದೈನಂದಿನ ದುಡಿಮೆ ಹಣವನ್ನು ಖಾಸಗಿ ಆಸ್ಪತ್ರೆಗಳಲ್ಲಿ ವ್ಯಯಿಸುತ್ತಿದ್ದಾರೆ ಎಂದರು.
ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರμÉ್ಟೀ ಅಲ್ಲ, ಕೆಲವೊಂದು ಕಡೆ ನರ್ಸ್‍ಗಳು ಕೂಡ ಇಲ್ಲ. ಇದರಿಂದ ಸೂಕ್ತ ಚಿಕಿತ್ಸೆ ದೊರೆಯದೆ ನೂರಾರು ರೂಪಾಯಿಗಳು ಖರ್ಚು ಮಾಡಿಕೊಂಡು ಜಿಲ್ಲಾಸ್ಪತ್ರೆಗೆ ಹೋಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ತುರ್ತು ಕ್ರಮ ಜರುಗಿಸಿ ವೈದ್ಯರ ಬೇಕು ಬೇಡಗಳನ್ನು ಪೂರೈಸಿ ಗ್ರಾಮೀಣ ಜನರ ಆರೋಗ್ಯ ಕಾಪಾಡಲು ಕ್ರಮ ಕೈಗೊಳ್ಳುವ ಅಗತ್ಯವಿದೆ. ಉತ್ತಮವಾದ ಆಸ್ಪತ್ರೆ, ಸಮರ್ಪಕ ಸೌಲಭ್ಯಗಳನ್ನು ಒದಗಿಸುತ್ತಿದೆಯಾದರೂ, ಗ್ರಾಮೀಣ ಆರೋಗ್ಯ ಉಪಕೇಂದ್ರಗಳು ಕೆಲವು ಕಡೆ ವೈದ್ಯರ ಕೊರತೆಯೂ, ಇನ್ನೂ ಕೆಲವೊಂದು ಕಡೆ ಶುಚಿತ್ವದ ಕೊರತೆಯೂ ಎದುರಿಸುತ್ತಿವೆ. ಗುತ್ತಿಗೆಯಾಧಾರ ವೈದ್ಯರನ್ನು ನೇಮಕ ಮಾಡಿಕೊಂಡಿದ್ದರೂ ಅವರು ಗ್ರಾಮೀಣ ಪ್ರದೇಶಗಳಿಗೆ ಬರುತ್ತಿಲ್ಲ. ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು.
ಪ್ರಾಥಮಿಕ ಕೇಂದ್ರಗಳಲ್ಲಿ ಆರೈಕೆ, ಕುಟುಂಬ ಯೋಜನೆ, ತಾಯಿ-ಮಗುವಿನ ಆರೋಗ್ಯ, ಸುರಕ್ಷಿತ ನೀರು ಸರಬರಾಜು ಮತ್ತು ನೈರ್ಮಲ್ಯ, ಸ್ಥಳೀಯ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ, ಜಾಗೃತಿ ಕೆಲಸ ಮಾಡಲು ವೈದ್ಯರ ಕೊರತೆ ಕಾಡುತ್ತಿದೆ. ಈ ಕೊರತೆಯು ಸಮುದಾಯದಲ್ಲಿ ಆರೋಗ್ಯ ಕಾಪಾಡಲು ಸವಾಲಾಗಿದೆ ಎಂದರು.
ರಾಷ್ಟ್ರೀಯ ಆರೋಗ್ಯ ಮಿಷನ್‍ನಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬರು ವೈದ್ಯರು, ಮಹಿಳಾ ವೈದ್ಯರು, ಆಯುರ್ವೇದ, ಯೋಗ, ಹೋಮಿಯೋಪತಿ ವೈದ್ಯರು, ಒಬ್ಬರು ಔಷಧ ವಿತರಕರು, ನರ್ಸಗಳು, ಹಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆಯರು, ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರು, ಆರೋಗ್ಯ ಶಿಕ್ಷಕರು, ಪ್ರಯೋಗಾಲಯ ಸಿಬ್ಬಂದಿ, ಲೆಕ್ಕ ಪತ್ರ ನಿರ್ವಾಹಕರು, ಗುಮಾಸ್ತರು, ವಾಹನ ಚಾಲಕರು ಹಾಗೂ ಆಶಾ ಕಾರ್ಯಕರ್ತೆಯರು ಇರಬೇಕು ಎಂದಿದೆ. ಆದರೆ, ಈ ಕೊರತೆ ಗ್ರಾಮೀಣ ಆರೋಗ್ಯ ಕೇಂದ್ರಗಳು, ಉಪಕೇಂದ್ರಗಳಲ್ಲಿ ಜಾಸ್ತಿಯಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಜನರ ಆರೋಗ್ಯ ಕಾಪಾಡುವುದು ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಡಬೇಕಿದೆ. ಸೂಕ್ಷ್ಮ ಮತ್ತು ಅಪರೂಪದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಹಾಗೂ ಈಗ ಬೇಸಿಗೆಯಲ್ಲಿ ಗ್ರಾಮೀಣ ಭಾಗದಲಿ ್ಲಇನ್ನಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುವಲ್ಲಿ ಮುಂಚಿತವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು, ಉಪ ಆರೋಗ್ಯ ಕೇಂದ್ರಗಳನ್ನು ಸುಧಾರಿಸುವುದು ಅಗತ್ಯವಿದೆ ಎಂದರು.
ಇನ್ನು ಗ್ರಾಮೀಣ ಆಸ್ಪತ್ರೆಗಳಲ್ಲಿ ಅಸಹಾಯಕ ಮಹಿಳೆಯರು, ವಿಧವೆಯರು, ವಿಚ್ಛೇದಿತರನ್ನು ‘ಆಶಾ’ಗಳಾಗಿ ನೇಮಿಸಿ ಸ್ವಾಸ್ಥ್ಯ ಸಮಾಜದ ಜೊತೆಗೆ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತದೆ ಎಂದು ಸರ್ಕಾರ ಹೇಳುತ್ತದೆಯಾದರೂ, ಆಶಾಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕುತ್ತಿಲ್ಲ ಎನ್ನುವುದು ವಾಸ್ತವವಾಗಿದೆ. ಇವರಿಗೆ ನಿಗದಿತ ವೇತ£ ಇಲ್ಲ. ತಿಂಗಳಿಡೀ ದುಡಿದರೂ ನಿಗದಿತ ವೇತನ ಬರುತ್ತದೆ ಎನ್ನುವ ವಿಶ್ವಾಸವು ಇರಲಾರದ ಪರಿಸ್ಥಿತಿ ಆಶಾಗಳದ್ದಾಗಿದೆ ಎಂದೂ ಅವರು ಹೇಳಿದರು.
ಆಸ್ಪತ್ರೆಗಳಲ್ಲಿ ಆಶಾ ಕಾರ್ಯಕರ್ತೆಯರಿU Éಕುಡಿಯುವ ನೀರು, ಶೌಚಾಲಯ ಇರುವ ವಿಶ್ರಾಂತಿ ಕೊಠಡಿ ಒದಗಿಸಬೇಕು. ಈ ಬಗ್ಗೆ ಆದೇಶ ಇದ್ದರೂ ಪಾಲನೆ ಆಗುತ್ತಿಲ್ಲ. ಮಾಸಿಕ ಪೆÇ್ರೀತ್ಸಾಹಧನವನ್ನು ನಿಗದಿತ ದಿನದಂದು ನೀಡದೆ ಉಳಿಸಿಕೊಂಡರೆ ಆ ಜಿಲ್ಲೆಯ ಅಧಿಕಾರಿಗಳು, ವೈದ್ಯಾಧಿಕಾರಿಗಳು ಜವಾಬ್ದಾರರಾಗುತ್ತಾರೆ. ಗೌರವಧನಕ್ಕಾಗಿ ಪರದಾಡುತ್ತ ದುಡಿಯುವ ಶ್ರಮ ಜೀವಿಗಳಾಗಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶರಣಮ್ಮ, ವಿನಾಯಕ, ಗಿರಿಜಾ, ಯಾಸಿನ್, ಮೊಮ್ಮದ್‍ರಫೀಕ್, ಚನ್ನು, ಮೋಹನ, ಕಿರಣ ಇನ್ನಿತರರು ಉಪಸ್ಥಿತರಿದ್ದರು.