ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನಕ್ಕೆ ಕಲಾವಿದರ ಬಳಗದಿಂದ ಸಂತಾಪ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.18- ಕನ್ನಡ ಚಿತ್ರರಂಗ ಹಿರಿಯ ನಟ, ನಿರ್ಮಾಪಕÀ, ನಿರ್ದೇಶಕರು ಆಗಿದ್ದ ದ್ವಾರಕೀಶ್‍ರವರ ನಿಧನಕ್ಕೆ ಕಲಾವಿದರ ಬಳಗದ ವತಿಯಿಂದ ಸಂತಾಪ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿಕೋರಲಾಯಿತು.
ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದ ಉದ್ಯಾನವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಋಗ್ಬೇದಿ ಮಾತನಾಡಿ, ದ್ವಾರಕೀಶ್ ರವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಅಪಾರ ಕೊಡುಗೆ ಬಗ್ಗೆ ಸ್ಮರಿಸಿದರು.
ಕನ್ನಡ ಚಿತ್ರರಂಗಕ್ಕೆ 80 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ ಕನ್ನಡ ಚಿತ್ರರಂಗದ ಕ್ಷೇತ್ರವನ್ನು ವಿಶ್ವವಿ ಖ್ಯಾತಿಗೊಳಿಸಿ ಕನ್ನಡಿಗರ ಪ್ರತಿಭೆಯನ್ನು ಅನಾವರಣಗೊಳಿಸಿದ ಹಾಗೂ ನೂರಾರು ಕಲಾವಿದರ ಪ್ರತಿಭಾವಿಕಾಸಕ್ಕೆ ಅವಕಾಶ ಕಲ್ಪಿಸಿಕೊಟ್ಟ ದ್ವಾರಕೀಶ್‍ರವರು ಕನ್ನಡ ಚಿತ್ರರಂಗದ ಧ್ರುವತಾರೆಯಾಗಿ ಸದಾ ಕಾಲ ಅಮರರಾಗಿ ಉಳಿಯಲಿದ್ದಾರೆ ಎಂದರು.
ಕನ್ನಡ ಚಿತ್ರರಂಗ ಅವರ ನಿಧನಕ್ಕೆ ಅಪಾರವಾದ ಗೌರವ ಸಲ್ಲಿಸುತ್ತಿರುವುದು ಅವರ ಸೇವೆಯನ್ನು ತಿಳಿಸುತ್ತದೆ ಎಂದರು. ಚಾಮರಾಜನಗರ ಜಿಲ್ಲೆಯ ಜನತೆಯ ಪರವಾಗಿ ಅವರಿಗೆ ಶ್ರದ್ದಾಪೂರ್ವಕವಾದ ಶಾಂತಿಯನ್ನು ಕೋರುವ ಮೂಲಕ ಕಲಾವಿದರನ್ನು ಗೌರವಿಸುವ ಪರಂಪರೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.
ಎಸ್.ಪಿ. ಬಾಲಸುಬ್ರಮಣ್ಯಂ ಗಾನಗಂಧರ್ವ ವೇದಿಕೆ ಅಧ್ಯಕ್ಷ ಶಿವಣ್ಣ, ಗಡಿನಾಡು ಕೋಗಿಲೆಗಳ ಕಲಾವಿದ ಸಂಘದ ಅಧ್ಯಕ್ಷ ಸುರೇಶ್‍ನಾಗ್, ಹರದನಹಳ್ಳಿ ಡಾ. ಸುಗಂಧರಾಜು,ಶಿವು, ಪ್ರಕಾಶ್, ಮಹೇಶ್, ಹರಿ ಪ್ರಸಾದ್ ಇದ್ದರು.