ಸೈನಿಕ ಶಾಲೆಗೆ ಕುಶಲ್ ಬೇದರಕರ ಆಯ್ಕೆ
ತಾಳಿಕೋಟೆ:ಏ.18: ಸೈನಿಕ ಶಾಲೆಗೆ ಆಯ್ಕೆ ಕುರಿತು ನಡೆದ ಪರಿಕ್ಷೆಯಲ್ಲಿ ತಾಳಿಕೋಟೆಯ ಕುಮಾರೇಶ್ವರ ಪಬ್ಲಿಕ್ ಸ್ಕೂಲ್ ವಿಧ್ಯಾರ್ಥಿ ಕುಶಲ್ ಕಾಶಿನಾಥ ಬೇದರಕರ ಉತ್ತಮ ಅಂಕಗಳಿಸುವದರೊಂದಿಗೆ ಆಯ್ಕೆಗೊಂಡಿದ್ದಾನೆ.
ವಿಧ್ಯಾರ್ಥಿಯ ಸಾಧನೆಗೆ ಕುಮಾರೇಶ್ವರ ಪಬ್ಲಿಕ್ ಸ್ಕೂಲ್‍ನ ಆಡಳಿತ ಮಂಡಳಿ, ಶಿಕ್ಷಕ ವೃಂದ ಮತ್ತು ಸಿಬ್ಬಂದಿವರ್ಗ ಅಲ್ಲದೇ ಪೋಷಕರು ಸಂತಸ ವ್ಯಕ್ತಪಡಿಸುವದರೊಂದಿಗೆ ಅಭಿನಂದಿಸಿದ್ದಾರೆ.