ಕುಡಿಯುವ ನೀರಿಗಾಗಿ ಖಾಲಿಕೊಡಗಳೊಂದಿಗೆ ಪ್ರತಿಭಟನೆ
ಕಲಬುರಗಿ,ಏ.17-ಜಿಲ್ಲೆಯ ಕಾಳಗಿ ತಾಲ್ಲೂಕಿನ ರುಮ್ಮುನುಗುಡ ಗ್ರಾಮ ಪಂಚಾಯತಿಯ ರುಮ್ಮುನುಗುಡ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ತಕ್ಷಣವೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯತಿ ಮುಂದೆ ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಬೆಸಿಗೆ ಕಾಲದ ಈ ಉರಿ ಬಿಸಿಲಲ್ಲಿ ಗ್ರಾಮಸ್ಥರು ಕೊಡ ನೀರಿಗಾಗಿ ಪರದಾಡುವಂತಾಗಿದೆ. ಕುಡಿಯುವ ನಿರಿಲ್ಲದೆ ಜನ-ಜಾನುವಾರು ಪರಿತಪಿಸುವಂತಾಗಿದೆ. ಈ ಸಮಸ್ಯೆಯನ್ನು ಸಂಭಂದಪಟ್ಟ ಅಧಿಕಾರಿಗಳು ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಚೆನ್ನೂರು ಕೆರೆಯಿಂದ ನೀರು ತರಲು ಪೈಪಲೈನ್ ಮಾಡಿದರು ಪೈಪ್‍ಲೈನ್ ಎಲ್ಲೆಂದರಲ್ಲಿ ಒಡೆದು ಹೋಗಿ ಜನರಿಗೆ ನೀರು ಸಿಗುತ್ತಿಲ್ಲ ಅರ್ಧ ಉರಿಗೆ ಮಾತ್ರ ನೀರು ಸಿಗುತ್ತಿದೆ. ಇನ್ನೂಳಿದ ಅರ್ಧ ಊರಿಗೆ ಚನ್ನೂರು ಕೆರೆಯಿಂದ ನೀರು ಸಿಗುತ್ತಿಲ್ಲ. ಪೈಪ್ ಲೈನ್ ಹದಗೆಟ್ಟಿದ್ದು ವಾಲ್ ದುರಸ್ತಿ ಮಾಡಿಲ್ಲ. ಊರ ಒಳಗಿನ ಮಸೀದಿಯಲ್ಲಿ ಕೊಳವೆ ಬಾವಿ ಕೆಟ್ಟು 6 ತಿಂಗಳ ಗತಿಸಿದರು ರಿಪೇರಿ ಮಾಡಿಲ್ಲ.
ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಹತ್ತಿರ ಸಾರ್ವಜನಿಕರ ಹಿತದೃಷ್ಟಿಯಿಂದ ಹೊಸ ನಳ ಕೂಡಿಸಬೆಕು, ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿವೆ. ಕೂಡಲೇ ಶುದ್ದ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಬೆಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪಾ ಮಮಶೆಟಿ,್ಟ ತುಳಜಪ್ಪಾ ಹಲಿಗಿ, ರಸೂಲ್ ಪಟೇಲ್, ಡೆವಿಡ್ ರಾಂಪೂರಕರ, ಬಲವಂತ ಬಡಿಗೆರ, ಮಶಾಖ ಪಟೇಲ್, ಮೋಶಿನ, ಶಿರಾಜ ಪಟೇಲ್ ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.