ಜಗಳೂರು ಬಂದ್ ಗೆ ಬಿಜೆಪಿ ಪಕ್ಷ ಬೆಂಬಲ :- ಕಾಂಗ್ರೆಸ್ ಪಕ್ಷದ ಮೇಲೆ ಮಾಜಿ ಶಾಸಕರ ಆರೋಪ

ಸಂಜೆವಾಣಿ ವಾರ್ತೆ
ಜಗಳೂರು.ಏ.17:- ಬಿಜೆಪಿ ಪಕ್ಷದಿಂದ ಹೊರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ನಂತರ,ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ’ನಾನು ಭದ್ರಾಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಅನುಮೋದನೆಗೊಂಡು ಶಂಕುಸ್ಥಾಪನೆ ನೆರವೇರಿಸಲಾಗಿತ್ತು.ಅಂತೆಯೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆ 413 ಕೋಟಿ ಟೆಂಡರ್ ಪ್ರಕ್ರಿ ಯೆಯಾಗಿತ್ತು.ಅದನ್ನು ಕಾಂಗ್ರೆಸ್ ಆಡಳಿತ ಪಕ್ಷ ರದ್ದುಪಡಿಸಿದೆ. 57 ಕೆರೆ ಯೋಜನೆಯಡಿ 11 ಕೆರೆಗಳಿಗೆ ನೀರು ಹರಿಸಲು ಕ್ರಮಕೈಗೊಳ್ಳಲಾಗಿತ್ತು.ಮುಖ್ಯಮಂತ್ರಿ ಸಿದ್ದರಾಮಯ್ಯನವರು 19000 ಕೋಟಿ ಅನುದಾನ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಆದರೆ ಭದ್ರಾಮೇಲ್ದಂಡೆ ಯೋಜನೆಗೆ ನಯ ಪೈಸೆಯನ್ನೂ ಮೀಸಲಿಟ್ಟಿಲ್ಲ’ಎಂದು ಆರೋಪಿಸಿದರು.ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,’ನನ್ನ ಆಡಳಿತಾ ವಧಿಯಲ್ಲಿ 57 ಕೆರೆ ತುಂಬಿಸುವ, ಭದ್ರಾಮೇಲ್ದಂಡೆ ಹಾಗೂ 157 ಬಹುಗ್ರಾಮ ಕುಡಿಯುವ ನೀರಿನ ಶಾಶ್ವತ ಯೋಜನೆಗಳಿ ಗೆ ಚಾಲನೆ ನೀಡಲಾಗಿತ್ತು.ನಾನು ಮತ್ತು ಎಸ್.ವಿ.ರಾಮಚಂದ್ರ ಇಬ್ಬರೂ ಯೋಜನೆಗಳ‌ಸಾಕಾರಕ್ಕೆ ಕಾಳಜಿವಹಿಸಿದ್ದೇವೆ.ಆದರೆ ತಾಂತ್ರಿಕ ದೋಷದಿಂದ ಇದುವರೆಗೂ ಕಾಮಗಾರಿ ಪೂರ್ಣ ಗೊಂಡಿಲ್ಲ.ವಿವಿಧ ಸಂಘಟನೆಗಳ ಸಹಕಾರದಿಂದ ಭದ್ರಾ ಮೇಲ್ದಂಡೆ ಹೊರಾಟ ಸಮಿತಿಯ ಜಗಳೂರು ಬಂದ್ ಗೆ ನಮ್ಮ ಬೆಂಬಲಿದೆ.ಹಾಲಿ ಶಾಸಕರು ರಾಜ್ಯದಲ್ಲಿ ತಮ್ಮದೇ ಆಡಳಿತ ಸರಕಾರವಿದ್ದು.ಸರ್ವಪಕ್ಷಗಳ ನಿಯೋಗದೊಂದಿಗೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.ತಮ್ಮ ಆಡಳಿತವಾಧಿಯಲ್ಲಿನ‌ ಕಾಮಗಾರಿ ಪ್ರಗತಿಯ ಬಗ್ಗೆ ನಿಖರ ಮಾಹಿತಿ ನೀಡದೆ ಇಬ್ಬರೂ ಮಾಜಿ ಶಾಸಕರು ಕಾಂಗ್ರೆಸ್ ಆಡಳಿತ ಸರಕಾರ ಮೇಲೆ ಸಬೂಬು ಹೇಳಿ ಹೊರಾಟ ಸ್ಥಳ ದಿಂದ ನಿರ್ಗಮಿಸಿದ್ದು.ಹೊರಾಟಗಾರರಿಗೆ ಹಾಗೂ ರೈತರಿಗೆ ನೀರಾವರಿ ಯೋಜನೆಗಳ ಸಮಗ್ರ ವರದಿ ತಲುಪಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ ಪತ್ರಕರ್ತರು ಡಬಲ್ ಇಂಜಿನ್ ಸರಕಾರದಲ್ಲಿ ಭದ್ರಾಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಹಣ ಬಿಡುಗಡೆ ಯಾಗಿಲ್ಲ,ನೀರಾವರಿ ಯೋಜನೆ ನಂಬಿಕೊಂಡು ಅಡಿಕೆ ಸಸಿ ಹಾಕಿದ ರೈತರು ನೀರಿಲ್ಲದೆ ಕಂಗಾಲಾಗಿ ಒಣಗುತ್ತಿರುವ ಅಡಿಕೆಗೆ ಖಾಸಗಿ ಬೋರ್ ವೆಲ್ ನಿಂದ ನೀರು ಹಾಯಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಸ್ಪಷ್ಟನೆ ನೀಡಿದರು .ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಹೇಶ್ ಎಚ್. ಸಿ. ಮುಖಂಡರಾದ ಬಿಸ್ತುವಳ್ಳಿ ಬಾಬು,ಪೂಜಾರಿ ಸಿದ್ದಪ್ಪ, ಗಡಿ ಮಾಕುಂಟೆ ಸಿದ್ದೇಶ್,ಬಾಲರಾಜ್,ಎ.ಎಂ.ಮರುಳಾರಾಧ್ಯ, ಕೃಷ್ಣಮೂರ್ತಿ,ಪಾಟೀಲ್,ಜೆ.ವಿ.ನಾಗರಾಜ್, ತೋರಣಗಟ್ಟೆ ಬಾಲಕೃಷ್ಣ ತಾಯಿಟೋಣಿ ಅರವಿಂದ್ ಪಾಟೀಲ್. ವಕೀಲ ಹನುಮಂತಪ್ಪ. ಜೆ ಸಿ ಓಬಳೇಶ್.ಸೇರಿದಂತೆ ಅನೇಕರು ಭಾಗವಹಿಸಿದ್ದರು.