ಎಲೆನಾವದಗಿ ಗ್ರಾಮಕ್ಕೆ ಸಿದ್ದೇಶ್ವರ ಶಾಸ್ತ್ರಿಗಳಿಗೆ ಆಹ್ವಾನ
ಕಲಬುರಗಿ,ಏ.17-ನಾಡಿನ ಹೆಸರಾಂತ ಜ್ಯೋತಿಷ್ಯ ಹಾಗೂ ಪುರಾಣ ಪ್ರವಚನಕಾರಾದ ಸಿದ್ದೇಶ್ವರ ಶಾಸ್ತ್ರಿಗಳು ಸಂಸ್ಥಾನ ಹಿರೇಮಠ ಸುಂಟನೂರ್ ಗುರುಗಳಿಗೆ ಸುಕ್ಷೇತ್ರ ಎಲೆ ನಾವದಗೀ ಗ್ರಾಮಕ್ಕೆ ಆಹ್ವಾನ ನೀಡಲಾಯಿತು.
ಎಲೆನಾವದಗಿ ಗ್ರಾಮದ ಆರಾಧ್ಯ ದೈವವಾದ ನಾಗಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ, 29 ನೇ ತಾರೀಖಿನಂದು ಮಹಾರಥೋತ್ಸವ, 30ರಂದು ಕುಸ್ತಿಗಳು ಇದರ ಪೂರ್ವದಲ್ಲಿ ಜನರಲ್ಲಿ ಧಾರ್ಮಿಕ ವಿಚಾರಗಳು ತಿಳಿ ಹೇಳುವುದರ ಪ್ರಯುಕ್ತವಾಗಿ ಮಹಾದಾಸೋಹಿ ಶರಣಬಸವೇಶ್ವರರ ಪುರಾಣವು 9 ದಿವಸಗಳ ಪರಿಯಂತರವಾಗಿ ಸಾಗಿ ಬರುವುದು.
ಗುರುಜಿಯವರಿಗೆ ಆಮಂತ್ರಣ ಕೊಡಲು ಶರಣಬಸಪ್ಪ ಪವಾಡಶೆಟ್ಟಿ, ಸಿದ್ದರಾಮ್ ಕುಲಕರಣಿ,ಮಹಾಲಿಂಗಪ್ಪ ಕಾಂಟೆ, ದತ್ತು ಬಿರಾದಾರ್, ಮಲ್ಲಿನಾಥ್ ಹತ್ತರ್ಕಿ, ವಿನೋದ್ ಮಡಿವಾಳ, ಶಿವಾನಂದ ರೆಡ್ಡಿ, ಶರಣಬಸಪ್ಪ ಸೋಂತ, ರಮೇಶ್ ಬಿರಾದಾರ್ ಬೋಳಣಗಿ, ಮಲ್ಲಿಕಾರ್ಜುನ್ ತಡಕಲ್ ಕಡಗಂಚಿ, ದೇಸಾಯಿ ಕೀಣಗೀ, ಅಭಿಷೇಕ್ ಹಿರೇಮಠ, ಮಹಾಲಿಂಗಪ್ಪ ಕೌಂಟೆ ಅವರು ಆಗಮಿಸಿದ್ದರು.