ಮಾನುಕುಲಕ್ಕೆ ವೈದ್ಯಕೀಯ ಸೇವೆ ಅವಶ್ಯ: ಡಾ.ಟೆಸ್ಸಿ
ಬೆಂಗಳೂರು.ಏ.೧೭-ಗ್ರಾಮೀಣ ಮತ್ತು ದುರ್ಬಲ ಜನರಿಗೆ ವೈದ್ಯಕೀಯ ಸೇವೆ ಮಾನವಕುಲವನ್ನು ರಕ್ಷಿಸುವಲ್ಲಿ ಅವಶ್ಯಕವಾಗಿದೆ ಎಂದು ಏರೋನಾಟಿಕಲ್ ಸಿಸ್ಟಮ್ಸ್‌ನ ಮಾಜಿ
ಮಹಾನಿರ್ದೇಶಕಿ ಡಾ.ಟೆಸ್ಸಿ ಥಾಮಸ್ ಅಭಿಪ್ರಾಯಪಟ್ಟರು.
ನಗರದ ಸಂತ ಜಾನರ ವೈದ್ಯಕೀಯ ಮಹಾವಿದ್ಯಾಲಯದ ೫೭ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭ ಮತ್ತು ಕಾಲೇಜು ದಿನವನ್ನು ಆಚರಿಸಲಾಯಿತು.
ಮುಖ್ಯ ಅತಿಥಿ ಡಾ.ಟೆಸ್ಸಿ ಥಾಮಸ್ ಮಾತನಾಡಿ, ಟೆಲಿಮೆಡಿಸಿನ್, ಇ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಂತಹ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಸಾಮಾನ್ಯ ಜನರ ಕಲ್ಯಾಣಕ್ಕಾಗಿ ತಮ್ಮ ವೈದ್ಯಕೀಯ ವೃತ್ತಿಯ ಮೂಲಕ ಸೇವೆ ನೀಡಬೇಕೆಂದು ಪದವಿಧರರನ್ನು ಮತ್ತು ಸ್ನಾತಕೋತ್ತರ ಪದವಿಧರರಿಗೆ ಕಿವಿಮಾತು ಹೇಳಿದರು. ನಿಸ್ವಾರ್ಥ ಮತ್ತು ಸಮರ್ಪಿತ ಸೇವೆಗಳಿಂದ ದೇಶವನ್ನು ಹೆಮ್ಮೆಪಡಿಸಬೇಕೆಂದು ಹೇಳಿದರು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ರಾಯಪುರದ ಆರ್ಚ್‌ಬಿಷಪ್ ಮತ್ತು ಸಿಬಿಸಿಐನ ಅಧ್ಯಕ್ಷ ವಿಕ್ಟರ್ ಠಾಕೂರ್, ಹಣವನ್ನು ಮಾತ್ರ ಗಳಿಸುವುದಲ್ಲದೇ ಜನರ ಆರ್ಶೀವಾದ ಪಡೆಯಬೇಕು ಎಂದರು.
ಗ್ರಾಮೀಣ ಸೇವೆಯ ಪ್ರಾಮುಖ್ಯತೆಯನ್ನು ವಿವರಿಸಿದರು. ಈ ಮೂಲಕ ಆರೋಗ್ಯಕರ ರಾಷ್ಟ್ರನಿರ್ಮಾಣಕ್ಕೆ ಕೊಡುಗೆ ನೀಡಬೇಕೆಂದರು. ಸಮಾರಂಭದಲ್ಲಿ ೨೮೩ ಆರೋಗ್ಯ ವೃತ್ತಪರರಿಗೆ ಪದವಿ ಪ್ರದಾನ ಮಾಡಲಾಯಿತು. ಇದರಲ್ಲಿ ೧೦೯ ಸ್ನತಕೋತ್ತರ ಪದವಿಧರರು, ೨೪ ಸೂಪರ್ ಸ್ಪೆಷಾಲಿಟಿ ಸ್ನಾತಕ್ಕೋತ್ತರ ಪದವಿಧರರು ಮತ್ತು ೦೨ ಪಿಎಚ್‌ಡಿ ವಿದ್ವಾಂಸರು ಸೇರಿದ್ದಾರೆ.
ನಗರದ ಸಂತ ಜಾನರ ವೈದ್ಯಕೀಯ ಮಹಾವಿದ್ಯಾಲಯದ ೫೭ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭ ಮತ್ತು ಕಾಲೇಜು ದಿನವನ್ನು ಆಚರಿಸಲಾಯಿತು.