ಕರುಣೇಶ್ವರ ನಗರದಲ್ಲಿ ಹನುಮ ಜಯಂತಿ
ಕಲಬುರಗಿ,ಏ.17-ಕರುಣೇಶ್ವರ ನಗರದ ಜೈವೀರ ಹನುಮಾನ ಮಂದಿರದಲ್ಲಿ ಹನುಮ ಜಯಂತಿ ನಿಮಿತ್ತ 12 ರಿಂದ 23 ರವರೆಗೆ ಜೈವೀರ ಹನುಮಾನ ದೇವಸ್ಥಾನ ಅಭಿವೃದ್ಧಿ ಸಂಘದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಶೇಷಗಿರಿರಾವ ಕುಲಕರ್ಣಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 18 ರಿಂದ 23ರವರೆಗೆ ಪ್ರತಿದಿನ ಸಂಜೆ 6 ರಿಂದ 7.30ರವರೆಗೆ ಸುಂದರ ಕಾಂಡ ಕುರಿತು ಪಂ.ಹನುಮಂತಾಚಾರ್ಯ ಸರಡಗಿ ಅವರು ಪ್ರವಚನ ನೀಡುವರು. 18 ರಂದು ಅನಂತ ಚಿಂಚನಸೂರ ಮತ್ತು ತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
19 ರಂದು ರಾತ್ರಿ 7.30ಕ್ಕೆ ರಾಘವೇಂದ್ರ ಬಡಶೇಷಿ ಹಾಗೂ ರವೀಂದ್ರ ಕುಲಕರ್ಣಿ ಅವರಿಂದ ಸಂಗೀತ ಕಾರ್ಯಕ್ರಮ, 20 ರಂದು ಭಜನೆ, ಪಲ್ಲಕ್ಕಿ ಉತ್ಸವ ಹಾಗೂ 21 ರಂದು ರಮೇಶ ಕುಲಕರ್ಣಿ ಮತ್ತು ಸಂಗಡಿಗರಿಂದ ಹರಿದಾಸ ಮಂಜರಿ ಕಾರ್ಯಕ್ರಮ ನಡೆಯಲಿದೆ. 23 ರಂದು ಹನುಮ ಜಯಂತಿ ನಿಮಿತ್ತ ಬೆಳಿಗ್ಗೆ 5ಕ್ಕೆ ಪಂಚಾಮೃತ ಅಭಿಷೇಕ, 5.30ಕ್ಕೆ ಅಲಂಕಾರ, ಎಲೆಪೂಜೆ, 6ಕ್ಕೆ ಹನುಮಾನ ಜನನ ತೊಟ್ಟಿಲೋತ್ಸವ, 7.30ಕ್ಕೆ ಸತ್ಯನಾರಾಯಣ ಪೂಜೆ, 8ಕ್ಕೆ ಪಾರಾಯಣ, 9ಕ್ಕೆ ಪವಮಾನ ಹೋಮ, 10.30ಕ್ಕೆ ಪ್ರವಚನ ಮಂಗಳ, ಮಧ್ಯಾಹ್ನ 12ಕ್ಕೆ ಭಜನೆ, ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ಜರಗುವುದು. ನಂತರ ಸಾರ್ವಜನಿಕವಾಗಿ ತೀರ್ಥಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಪ್ರಮುಖರಾದ ಗಿರೀಶ ಕುಲಕರ್ಣಿ, ಹೃಷಿಕೇಶ ಚೌಡಾಪೂರಕರ್, ವಿಶ್ವಾಸ ಮೋಘರೆಕರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.