ದ್ವಾರಬಾಗಿಲು ನಿರ್ಮಾಣ:ಎರಡು ಗುಂಪುಗಳ ಕಾದಾಟ
ಅಳಂದ:ಏ.17: ತಾಲೂಕಿನ ಕಡಗಂಚಿ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ದ್ವಾರಬಾಗಿಲು ನಿರ್ಮಾಣ ವಿಷಯಕ್ಕೆ ಸಂಬಂಧಿಸಿದಂತೆ ಕೈಕೈ ಮಿಲಾಯಿಸುವ ಹಂತಕ್ಕೆ ವಾತಾವರಣ ನಿರ್ಮಾಣವಾಯಿತು ಸೋಮವಾರ ರಾತ್ರಿ ಈ ಘಟನೆ ಸಂಭವಿಸಿದೆ.
ಮುಖ್ಯ ರಸ್ತೆಯ ಶಾಂತಲಿಂಗೇಶ್ವರ ದ್ವಾರಬಾಗಿಲು ಎದುರಿನ ನರೋಣಾ ರಸ್ತೆಗೆ ದಲಿತ ಸಮುದಾಯದವರು ಡಾ.ಬಿ.ಆರ್.ಅಂಬೇಡ್ಕರ ದ್ವಾರಬಾಗಿಲು ನಿರ್ಮಿಸಲು ಮುಂದಾದರು. ಇದಕ್ಕೆ ಸವರ್ಣಿಯರು ಅಡ್ಡಿಪಡಿಸಿದ್ದರಿಂದ ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆ ನಡೆದಿದೆ. ಎಸ್ಪಿ ಅಕ್ಷಯಕುಮಾರ ಹಾಕೆ ಹೆಚ್ಚುವರಿ ಎಸ್ಪಿ ಎನ್ ಶ್ರೀನಿಧಿ ಡಿ. ವೈಎಸ್ಪಿ ಮಹಮ್ಮದ್ ಶರೀಫ ಸಿ ಪಿ ಐ ಸಿದ್ರಾಮಯ್ಯ ಮಠಪತಿ ನರೋಣಾ ಪೆÇಲೀಸ್ ಠಾಣೆಯ ಪಿ. ಎಸ್.ಐ ಭೀಮರಾವ ಬಂಕ್ಲಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ವಾತಾವರಣ ತಿಳಿಗೊಳಿಸಿದರು.ಎರಡು ಸಮುದಾಯದವರು ಪ್ರಕರಣ ದಾಖಲಿಸುವಂತೆ ಪೆÇಲೀಸರಿಗೆ ಒತ್ತಾಯಿಸಿದರು. ಸವರ್ಣಿಯರು ಮಂಗಳವಾರ ಮಧ್ಯಾಹ್ನ ದಿಢೀರನೆ ಮುಖ್ಯರಸ್ತೆ ತಡೆಮಾಡಿ ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ಅಡೆ ತಡೆ ಉಂಟಾಯಿತು.