ದಾವಣಗೆರೆ ಲೋಕಸಭಾ ಪಕ್ಷೇತರ ಅಭ್ಯರ್ಥಿ ಜಿ. ಬಿ ವಿನಯ್ ಕುಮಾರ್ ಪರ ಬಿರುಸಿನ ಪ್ರಚಾರ
ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೧೭: ನಗರದ ಕೆಬಿ ಬಡಾವಣೆಯಲ್ಲಿ ಅಹಿಂದ ಯುವ ನಾಯಕ, ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಪರ ಕಕ್ಕರಗೊಳ್ಳದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ, ತಾಲೂಕು ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶಕುಂತಲಾ ಅವರ ನೇತೃತ್ವದಲ್ಲಿ ಕೆ. ಬಿ. ಬಡಾವಣೆ ಸೇರಿದಂತೆ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು.ಉನ್ನತ ಅಧಿಕಾರಿಗಳನ್ನು ಈ ದೇಶದ ಆಡಳಿತ ವ್ಯವಸ್ಥೆಗೆ ಕೊಡುಗೆಯಾಗಿ ನೀಡಿದ ಬಡವರು, ಶೋಷಿತರು ಹಿಂದುಳಿದವರು ಹಾಗೂ ಎಲ್ಲಾ ಸಮುದಾಯಗಳ  ಶೈಕ್ಷಣಿಕ ಪ್ರಗತಿಗಾಗಿ ತನ್ನದೇ ಕೊಡಿಗೆ ನೀಡುತ್ತಿರುವ ಜಿ. ಬಿ. ವಿನಯ್ ಕುಮಾರ್ ಅವರು  ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತರಾಗಿ ಜನರ ಒತ್ತಾಯಕ್ಕೆ ಮಣಿದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಏಪ್ರಿಲ್ 17ರ ಬುಧವಾರದಂದು ಮತ್ತೊಂದು ಬಾರಿ ನಾಮಪತ್ರ ಸಲ್ಲಿಸಲಿದ್ದಾರೆ.
ನಗರದ ಮತದಾರರು, ಅವರ ಅಭಿಮಾನಿಗಳು , ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ಮನವಿ ಮಾಡಿದರು.ಕಕ್ಕರಗೊಳ್ಳ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ, ತಾಲೂಕು ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶಕುಂತಲಾ, ನಗರಸಭಾ ಮಾಜಿ ಸದಸ್ಯರಾದ ಗೀತಾ ಮುರುಗೇಶ್, ಶೈಲಜಾ ಜಗದೀಶ್ ಒಡೆಯರ್, ಗೀತಾ ಸೇರಿದಂತೆ ಹಲವು ಮಹಿಳಾ ನಾಯಕಿಯರು ಮನೆ ಮನೆಗೆ ತೆರಳಿ  ವಿನಯ್ ಕುಮಾರ್ ರವರನ್ನು ಈ ಬಾರಿ ಬೆಂಬಲಿಸುವಂತೆ ಕೋರಿದರು.