ಎತ್ತಿನ ಬಂಡಿಯ ಮೆರವಣಿಗೆ ಮೂಲಕ‌ ಮತದಾನ ಜಾಗೃತಿ

ಸಂಜೆವಾಣಿ ವಾರ್ತೆ
ಜಗಳೂರು.ಏ.೧೭; :ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಎತ್ತಿನ ಬಂಡಿಯ ಮೆರವಣಿಗೆ ಮೂಲಕ ತಾಲೂಕು ಮಟ್ಟದ ಅಧಿಕಾರಿಗಳು ಮತದಾನ ಜಾಗೃತಿ ಮೂಡಿಸಿದರು.ನಂತರ ತಾ.ಪಂ.ಇಓ ಶ್ರೀಕಂಠ ರಾಜ ಅರಸ್ ಮಾತ ನಾಡಿ,ಸಂವಿಧಾನಬದ್ದ ಮತದಾನದ ಹಕ್ಕನ್ನು ಪ್ರತಿಯೊ ಬ್ಬರೂ ಚಲಾಯಿಸಬೇಕು.ಉದ್ಯೋಗ ಹರಸಿ ನಗರ ಪ್ರದೇಶಗಳಿಗೆ ವಲಸೆ ಹೋದವರು ತಪ್ಪದೇ ಮೇ.7 ರಂದು ನಡೆಯಲಿರುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಹಾಕುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಹಕ್ಕನ್ನು ಗೌರವಿಸಬೇಕು ಎಂದು ಕರೆ ನೀಡಿದರು.ಸಿಡಿಪಿಓ ಬೀರೇಂದ್ರಕುಮಾರ್ ಮಾತನಾಡಿ,ಗ್ರಾಮೀಣ ಭಾಗದಲ್ಲಿ ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ನನ್ನ ನಡೆ ಮತಗಟ್ಟೆ ಕಡೆ ಅಭಿಯಾನದ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ವಯೋವೃದ್ದರಿಗೆ,ವಿಕಲಚೇತನರಿಗೆ ವಿಶೇಷವಾಗಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.ಯುವಕರು ಜಾಗೃತರಾಗಿ ಗ್ರಾಮದಲ್ಲಿನ ಮತದಾರರಿಗೆ ಕಡ್ಡಾಯ ಮತದಾನಕ್ಕೆ ಸಹಕರಿಸಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಪಿಡಿಓ ತಿಮ್ಮೇಶ್,ಬಿಲ್ ಕಲೆಕ್ಟರ್ ಕರಿ ಬಸಪ್ಪ,ಸಿಬ್ಬಂದಿಗಳು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.