ಮತದಾನ ಮಾಡಿ ದೇಶದ ಏಳಿಗೆಗೆ ಸಹಕರಿಸಿ: ಟಿ.ಭೂಬಾಲನ್
ವಿಜಯಪುರ, ಏ.17:ಮತದಾನ ಮಾಡುವ ಮೂಲಕ ದೇಶದ ಏಳಿಗೆಗೆ ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಮಹಾನಗರ ಪಾಲಿಕೆ ಹಾಗೂ ಇವರ ಸಹಯೋಗದಲ್ಲಿ ಲೋಕಸಭಾ ಚುನಾವಣೆ 2024ರ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಮೂಡಿಸಲು ಹಮ್ಮಿಕೊಂಡ ಕ್ಯಾಂಡಲ್ ಮಾರ್ಚ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲರೂ ತಪ್ಪದೇ ಮತದಾನ ಮಾಡುವುದರ ಜೊತೆಗೆ ನೆರೆಹೊರೆಯವರನ್ನು ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು. ಪ್ರಜ್ಞಾವಂತ ನಾಗರಿಕರಾಗಿ ದೇಶದ ಏಳಿಗೆಗ ಮತದಾನ ಮಾಡುವುದನ್ನು ಮರೆಯಬಾರದು ಎಂದು ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಮತ್ತು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಹಾಗೂ ವಿಜಯಪುರ ನಗರ ಲೋಕಸಭಾ ಮತಕ್ಷೇತ್ರ ಸಹಾಯಕ ಚುನಾವಣಾ ಅಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಅಶಾದ ಉರ್ ರೆಹಮಾನ್ ಶರೀಫ್ ಮಾತನಾಡಿದರು.
ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ನಗರದ ಹೃದಯ ಭಾಗವಾಗಿರುವ ಗಾಂಧಿ ವೃತ್ತದವರೆಗೆ ಮತದಾನ ಜಾಗೃತಿಗಾಗಿ ಮೇಣದ ಬತ್ತಿ ಬೆಳಗುವ ದೀಪ ಅಥವಾ ಕ್ಯಾಂಡಲ್ ಮಾರ್ಚ್ ಜಾಥಾ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ ಮತದಾರರಿಗೆ ಪ್ರತಿಜ್ಞಾವಿಧಿಯನ್ನು ಭೋಧಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಸಿ. ಆರ್ ಮುಂಡರಗಿ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿÀ ಎ. ಬಿ ಅಲ್ಲಾಪೂರ, ವಿಜಯಪುರ ತಾ.ಪಂ. ಇಒ ಕೆ. ಹೊಂಗಯ್ಯ, , ತಾಲೂಕ ವೈದ್ಯಾಧಿಕಾರಿ ಹಿಟ್ನಳ್ಳಿ ಬಸವರಾಜ ಜಗಳೂರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ, ಜಿಲ್ಲಾ ಘಟಕದ ನೋಡಲ್ ಅಧಿಕಾರಿ ಪ್ರಕಾಶ ರಾಠೋಡ, ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿ ಸಾಕ್ಷಿ ಹಿರೇಮಠ, ರಾಜೇಶ ಪವಾರ, ಸಹನಾ ಕುಡಿಗನೂರ, ಮಹಾನಗರ ಪಾಲಿಕೆಯ ಸಂಘಟನಾಧಿಕಾರಿ ಸಾವಿತ್ರಿ ತಿಪ್ಪಣ್ಣವರ, ಭಾರತಿ ಕೌಲ್ಗೆ, ಸಿಆರ್‍ಪಿಗಳಾದ ಪ್ರಗತಿ ಕುಲಕರ್ಣಿ, ಪ್ರಿಯಾಂಕ ಪಾಟೀಲ, ಶ್ವೇತಾ ತೇಲಸಂಗ, ಮಮತಾ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಯವರು, ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ, ಸ್ವ ಸಹಾಯ ಸಂಘಗಳ ಮಹಿಳೆಯರು, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.