ಮತದಾನ ಜಾಗೃತಿ: 10 ಅಡಿ ಉದ್ದದ ಬಲೂನ್ ಅಳವಡಿಕೆ
ವಿಜಯಪುರ,ಏ.17 :ವಿಜಯಪುರ ಮಹಾನಗರ ಪಾಲಿಕೆಯ ಕಚೇರಿಯ ಮೇಲೆ ಲೋಕಸಭಾ ಚುನಾವಣೆ 2024ರ ಮತದಾನ ಜಾಗೃತಿ ಕುರಿತು 10 ಅಡಿ ಉದ್ದ 10 ಅಡಿ ಅಗಲದ ಬಲೂನ್‍ನ್ನು ಸ್ಥಾಪಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾ ಅಧಿಕಾರಿಗಳು ವಿಜಯಪುರ ನಗರ ಲೋಕಸಭಾ ಮತಕ್ಷೇತ್ರ ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಅಶಾದ ಉರ್ ರೆಹಮಾನ್ ಶರೀಫ್, ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ, ಸಹಾಯಕ ನಗರ ಯೋಜನಾಧಿಕಾರಿ ಲಕ್ಷ್ಮಣ ಮೋರೆ, ವಲಯ 3 ಕಂದಾಯ ಅಧಿಕಾರಿ ರವಿ ಶಿರಶ್ಯಾಡ, ಪರಿಷತ್ ಕಾರ್ಯದರ್ಶಿ ರವಿ ರಂಗಸುಬೆ ಸೇರಿದಂತೆ ಇತರರು ಉಪಸ್ಥಿತರಿದ್ದರು.