ವಿಕಲಚೇತನರಿಂದ ಮತದಾನ ಜಾಗೃತಿ ಜಾಥ

ಸಂಜೆವಾಣಿವಾರ್ತೆ
ಹರಪನಹಳ್ಳಿ. ಏ.೧೭;ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆ, ತಾಲೂಕು ಆಡಳಿತ ಮತ್ತು ಸ್ವೀಪ್ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ  ಪಟ್ಟಣದಲ್ಲಿ ವಿಕಲಚೇತನರಿಂದ ಮತದಾನ ಜಾಗೃತಿ ಜಾಥಾ ನಡೆಯಿತು.ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ವಿಕಲಚೇತನರು ತ್ರಿಚಕ್ರ ವಾಹನದ ಮೂಲಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವರೆಗೂ ಸಾರ್ವಜನಿಕರಿಗೆ ಮತದಾನದ ಬಗ್ಗೆ ಅರಿವು ಮೂಡಿಸಿದರು.ಮತದಾನ ಜಾಗೃತಿ ಜಾಥಾಕ್ಕೆ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಚಾಲನೆ ನೀಡಿದರು.ತಾ.ಪಂ. ಇಒ ವೈ.ಎಚ್.ಚಂದ್ರಶೇಖರ್, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಜಿ.ಅವಿನಾಶ್ ಪುರಸಭೆ ಹಿರಿಯ ಆರೋಗ್ಯಾಧಿಕಾರಿ ಮಂಜುನಾಥ, ಉಚ್ಚಂಗೆಪ್ಪ, ಎಂಆರ್‌ಡಬ್ಲ್ಯೂಆರ್ ಧನರಾಜ್, ಡಿ.ನಾಗರಾಜ್ ಜಿಲ್ಲಾ ಸಂಯೋಜಕ ಬುಳ್ಳನಗೌಡ ಟಿ.ಜಿ.ಗಿರೀಶ್ ಎಂ.ಡಿ.ಮನ್ಸೂರ್ ಇತರರು ಇದ್ದರು.