ಕೇಂದ್ರದಿಂದ ಇಡಿ ಸಿಬಿಐ ದುರ್ಬಳಕೆ; ಮಯೂರ ಜಯಕುಮಾರ್

ಸಂಜೆವಾಣಿ ವಾರ್ತೆ
ಚಿತ್ರದುರ್ಗ,ಏ.17: ಬಿಜೆಪಿ ಸರ್ಕಾರ ತನ್ನ ಆಧಿಕಾರವನ್ನು ಬಳಸಿಕೊಂಡು ಇಡಿ, ಸಿಬಿಐ ಅವರ ಮೇಲೆ ಒತ್ತಡ ಹಾಕಿ ವಿರೋಧ ಪಕ್ಷದವರನ್ನು ಬೆದರಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಮಯೂರ ಜಯಕುಮಾರ್ ಆರೋಪಿಸಿದರು.ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರವನ್ನು ಸಂಪೂರ್ಣವಾಗಿ ತಮ್ಮ ಸ್ವಾರ್ಥಕ್ಕಾಗಿ‌ ಬಳಸಿಕೊಳ್ಳುತ್ತಿದ್ದು, ಚುನಾವಣೆಯಲ್ಲಿ ಬೆದರಿಸಿ ಮತಗಳಿಸುವ ತಂತ್ರಗಾರಿಕೆಯನ್ನು ಬಳಸುತ್ತಿದ್ದಾರೆ. ಆದರೆ ಇದ್ಯಾವುದು ಫಲಪ್ರದ ಆಗುವುದಿಲ್ಲ. ರಾಜ್ಯದಲ್ಲಿ 5 ಗ್ಯಾರೆಂಟಿಗಳ ಯೋಜನೆಗಳ ಮೂಲಕ ರಾಜ್ಯದ ಜನತೆಯನ್ನು ಕಾಂಗ್ರೇಸ್ ಸರ್ಕಾರ ತಲುಪಿದೆ. ಇದೇ ರೀತಿಯಲ್ಲಿ ದೇಶದೆಲ್ಲೆಡೆ ಕಾಂಗ್ರೇಸ್ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ನುಡಿದಂತೆ ನಡೆಯಲಿದ್ದೆವೆ‌ ಎಂದು ಹೇಳಿದರು.ಬಿ.ಎನ್.ಚಂದ್ರಪ್ಪ ಒಳ್ಳೆಯ ವ್ಯಕ್ತಿ. ಇಲ್ಲಿನ ಜನತೆಗೆ ಇದೊಂದು ಒಳ್ಳೆಯ ಅವಕಾಶವಾಗಿದೆ ಸಜ್ಜನ‌ ವ್ಯಕ್ತಿಯನ್ಮು ಗೆಲ್ಲಿಸಲು. ಇಂಡಿಯಾ ಒಕ್ಕೂಟದ ವ್ಯಕ್ತಿಯನ್ನು ಗೆಲ್ಲಿಸಿ ದೇಶಕ್ಕೆ ಒಳ್ಳೆಯ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ, ಸರ್ವಾಧಿಕಾರ ಮತ್ತು ಸಂವಿಧಾನದ ರಕ್ಷಣೆ ಮಧ್ಯೆ ನಡೆಯುತ್ತಿರುವ ಚುನಾವಣೆ ಇದಾಗಿದೆ. ಸಂವಿಧಾನ ಇದ್ದರೆ ಮಾತ್ರ ನಾವು ಬದುಕುತ್ತೇವೆ ಎಂಬ ಸ್ವಷ್ಟ ನಿಲುವಿನೊಂದಿಗೆ ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳು ಒಗ್ಗೂಡಿವೆ. ಮಂತ್ರಿಯಾದವರು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳುತ್ತಾರೆ ಎಂದರೆ ಹೇಗೆ ? ಇದಕ್ಕೆ ಮೋದಿ ಅವರು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಬೆಂಬಲ ಸೂಚಿಸಿದಂತಾಗಿದ್ದು, ಇದಕ್ಕೆಲ್ಲ ತಕ್ಕ ಪ್ರತ್ಯುತ್ತರ ಚುನಾವಣೆಯಲ್ಲಿ ಜನತೆ ಕೊಡಲಿದ್ದಾರೆ ಎಂದು ಹೇಳಿದರು.