19 ರಂದು ಶ್ರೀ ಭಾಗಮ್ಮದೇವಿ ಜಾತ್ರೋತ್ಸವ
ತಾಳಿಕೋಟೆ:ಏ.17: ಪಟ್ಟಣದ ಹಡಗಿನಾಳ ರಸ್ತೆಯಲ್ಲಿರುವ ಶ್ರೀ ಭಾಗಮ್ಮದೇವಿ ದೇವಸ್ಥಾನದ ಜಾತ್ರಾ ಮಹೋತ್ಸವವು ಇದೇ ದಿ.19 ಶುಕ್ರವಾರರಂದು ವಿಜೃಂಬಣೆಯಿಂದ ಜರುಗಲಿದೆ.
ಜಾತ್ರೋತ್ಸವ ಅಂಗವಾಗಿ ಬೆಳಿಗ್ಗೆ 9 ಗಂಟೆಗೆ ಸುಮಂಗಲೆಯರ ಕುಂಭಮೇಳದೊಂದಿಗೆ ಫಲ್ಲಕ್ಕಿ ಉತ್ಸವದೊಂದಿಗೆ ಪುರಾತನ ಭಾವಿಯಾದ ಭೀಮನಭಾವಿಯಲ್ಲಿ ಗಂಗಸ್ಥಳ ಕಾರ್ಯಕ್ರಮದೊಂದಿಗೆ ಶ್ರೀ ಭಾಗಮ್ಮದೇವಿ ಭಾವಚಿತ್ರದ ಭವ್ಯ ಮೆರವಣಿಗೆಯು ಪ್ರಾರಂಭಗೊಂಡು ರಾಜವಾಡೆ, ಕತ್ರಿಭಜಾರ, ಶಿವಾಜಿ ಮಹಾರಾಜ ವೃತ್ತ, ಮಹಾರಾಣಾಪ್ರತಾಪಸಿಂಹ್ ವೃತ್ತದ ಮೂಲಕ ದೇವಸ್ಥಾನ ತಲುಪುವದು ನಂತರ ಶ್ರೀ ಭಾಗಮ್ಮದೇವಿ ಮಹಾ ಮೂರ್ತಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗುವವು.
ನಂತರ ಸಮಸ್ತ ಭಕ್ತಾಧಿಗಳಿಗೆ ಮಹಾಪ್ರಸಾದ ಜರುಗಲಿದೆ. ಜಾತ್ರೋತ್ಸವ ನಿಮಿತ್ಯ ಗುರುವಾರರಂದು ಅಖಂಡ ರಾತ್ರಿ ಡೋಳ್ಳಿನ ಹಾಡಿಕೆ ಪದಗಳು ಜರುಗಲಿವೆ. ಕಾರಣ ಭಕ್ತಾಧಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ಭಾಗಮ್ಮದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಕಮಿಟಿಯ ಶಂಕರ ಖಂಡೋಬಾ ಸೋನೋನೆ ಅವರು ಪ್ರಕಟನೆ ಮೂಲಕ ತಿಳಿಸಿದ್ದಾರೆ.