ಕಲ್ಮಠ ಶ್ರೀ ಸಾಧನ ಪ್ರಶಸ್ತಿ ಸ್ವೀಕರಿಸಿದ ಮಾರುತಿ ಬಡಿಗೇರ
ರಾಯಚೂರು.ಏ.೧೭- ಪತ್ರಿಕೋದ್ಯಮ ಸಾಮಾಜಿಕ ಕ್ಷೇತ್ರ ಹಾಗೂ ಸಾಂಸ್ಕೃತಿಕ ಸಂಘಟನಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಾಗೂ ಇನ್ನು ಮಾಡುತ್ತಿರುವ ಕಲಾ ಸಂಕುಲ ಸಂಸ್ಥೆಯ ಸಂಸ್ಥಾಪಕರಾದ ಮಾರುತಿ ಬಡಿಗೇರ್ ಕಲ್ಮಠ ಶ್ರೀ ಸಾಧನ ಪ್ರಶಸ್ತಿಯನ್ನು ಸ್ವೀಕರಿಸಿದರು.
ಮಾರುತಿ ಬಡಿಗೇರ್ ಅವರು ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಕಲೆ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಯಲ್ಲಿ ಹೆಸರು ಮಾಡಿರುವ ರಾಯಚೂರು ಇವರಿಗೆ ಸಂಘಟನಾ ಕ್ಷೇತ್ರದಲ್ಲಿ ಕಲ್ಮಠ ಶ್ರೀ ಸಾಧನಾ ಪ್ರಶಸ್ತಿಗೆ ಆಯ್ಕೆಯಾಗಿದ್ದರು, ಮಾರುತಿ ಬಡಿಗೇರವರ ಸಾಂಸ್ಕೃತಿಕ ಸಂಘಟನೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಕವಿತಾಳ ಪಟ್ಟಣದ ಸುಕ್ಷೇತ್ರ ಶ್ರೀ ಕಲ್ಮಠದಲ್ಲಿ ಮಂಗಳವಾರ ಜರುಗಿದ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಶ್ರೀ ಕಲ್ಮಠದ ಪೀಠಾದ್ಯಕ್ಷರಾದ ಮ.ನಿ.ಪ್ರ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು ಕಲ್ಮಠ ಶ್ರೀ ಸಾಧನ ಪ್ರಶಸ್ತಿ ನೀಡಿ ಗೌರವಿಸಿದರು.