ಕುಡುತಿನಿಯಲ್ಲಿ ಚೈತನ್ಯ ಮತಯಾಚನೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಎ,17- ಕಾಂಗ್ರೆಸ್ ಅಭ್ಯರ್ಥಿ ಈ ತುಕಾರಾಮ್  ಪರವಾಗಿ ಅವರ ಪುತ್ರಿ  ಚೈತನ್ಯ  ಇಂದು ತಾಲೂಕಿನ ಕುಡಿತಿನಿ ಕೆಪಿಟಿಸಿಎಲ್ ಕಾರ್ಖಾನೆ ಹತ್ತಿರ ವಿರುವ  ರಾಮ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಕುಡುತಿನಿ ಪಟ್ಟಣದಲ್ಲಿ ಸಾರ್ವಜನಿಕರ ಸಭೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಿದರು.
ಈ ಹಿಂದೆ ಕೇಂದ್ರದಲ್ಲಿದ್ದ ಕಾಂಗ್ರೆಸ್  ಸರ್ಕಾರ ದೇಶಕ್ಕೆನೀಡಿದ್ದ ಕೊಡುಗೆಯನ್ನು ಜನರಲ್ಲಿ ಜಾಗೃತಿ ಮೂಡಿಸಿದರು. ಇದರೊಂದಿಗೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ಹಾಗೂ ಬಿಜೆಪಿ ಸರ್ಕಾರದಿಂದ ದೇಶದ ಆರ್ಥಿಕ ಸ್ಥಿತಿಯ ಆದೋಗತಿಯ ಬಗ್ಗೆ ಜನರಿಗೆ ತಿಳಿಸಿ‌  ಪ್ರಸ್ತುತ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳಿಂದ ಆಗುವ ಪ್ರಯೋಜನಗಳನ್ನು ವಿವರಿಸಿ ಇದರಿಂದ ಪ್ರತಿಯೊಬ್ಬರಲ್ಲಿ ಆರ್ಥಿಕ ಪ್ರಗತಿ ಉಂಟಾಗಿ ಜನರು ಸ್ವಾವಲಂಬಿ ಬದುಕು ನಡೆಸಲು ಸಹಾಯಕವಾಗಿದೆಂದರು.
ಸಾಮರಸ್ಯದಿಂದ,ಶಾಂತಿ ಸಹಬಾಳ್ವೆಯಿಂದ ಜೀವನ ನೆಡೆಸಲು ಕಾಂಗ್ರೆಸ್ ಪಕ್ಷವನ್ನು ಕೇಂದ್ರದಲ್ಲಿ ತರಬೇಕಾಗಿದೆ ಆದ್ದರಿಂದಹಸ್ತದ ಗುರ್ತಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಕುಡತನಿ ಪಟ್ಟಣದ ಕಾಂಗ್ರೆಸ್ ಮುಖಂಡರು, ಪಟ್ಟಣ ಪಂಚಾಯತಿಯ  ಸದಸ್ಯರುಗಳು ಉಪಸ್ಥಿತರಿದ್ದರು.