ಮಂಜುನಾಥ ಆರ್ಟ್ ಗ್ಯಾಲರಿಗೆದೊಡ್ಡ ರಂಗೇಗೌಡ ಭೇಟಿ: ಶ್ಲಾಘನೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.17: ನಾಡಿನ ಖ್ಯಾತ ಕವಿ. ಪದ್ಮಶ್ರೀ ದೊಡ್ಡರಂಗೇಗೌಡ ಅವರು ನಗರದ ಸಾಂಸ್ಕೃತಿಕ ಸಮುಚ್ಚಯದ ಕನ್ನಡ ಭವನದಲ್ಲಿನ ಕಲಾವಿದ ಮಂಜುನಾಥ ಗೋವಿಂದವಾಡ ಅವರ ಕಲಾ ಗ್ಯಾಲರಿಗೆ ನಿನ್ನೆ ಸಂಜೆ ಭೇಟಿ ನೀಡಿ ಕಲಾ ಚಿತ್ರಗಳನ್ನು ವೀಕ್ಷಿಸಿ ಮಂಜುನಾಥರ ಚಿತ್ರಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸಂಗೀತ ನಿರ್ದೇಶಕ ಮೃತ್ಯುಂಜಯ ದೊಡ್ಡವಾಡ ಅವರೊಂದಿಗೆ ಬಂದ ರಂಗೇಗೌಡರು. ಮಜುನಾಥ ಅವರು ರಚಿಸಿರುವ ವಿವಿಧ ಬಗೆಯ ಚಿತ್ರಗಳನ್ನು ವೀಕ್ಷಿಸಿ ಮೂಕ ವಿಸ್ಮಿತರಾದರಯ.
ನೆರಳು ಬೆಳಕಿನ ಸ್ವರೂಪದಲ್ಲಿ  ಮರಳಿನಲ್ಲಿ ರಚಿಸಿದ ಐತಿಹಾಸಿಕ, ನಾನವ, ಪ್ರಾಕೃತಿಕ ಕಲಾಕೃತಿಗಳನ್ನು ಕಂಡು ನಿಬ್ಬೆರಗಾದರು.
ಇಂತಹ ಕಲೆಗೆ ಬೆಲೆ ಬರಬೇಕೆಂದರೆ. ರಾಜಧಾನಿ ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳಬೇಕು. ಆಗ ಇವುಗಳಿಗೆ ಸಾಕಷ್ಟು ಮೌಲ್ಯ ದೊರೆಯಲಿದೆ.  ಇಂತಹ ಅವಕಾಶವನ್ನು ತಾವು ಕಲ್ಪಿಸಿಕೊಡಲಿದೆಂದು ರಂಗೇಗೌಡರು ಮಂಜುನಾಥ ಅವರಿಗೆ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಸಾಹಿತಿ ರಂಗೇಗೌಡರ ಮೆಚ್ಚುಗೆ ತಮಗೆ ಶ್ರೀರಕ್ಷೆಯಾಗಲಿ ಎಂದು ಮಂಜುನಾಥ ಗೋವಿಂದವಾಡ ಆಶಿಸಿದರು.