ಪಂಚ ಭಾಷೆ ರಂಗಭೂಮಿ ನಟರು ಬಳ್ಳಾರಿ ರಾಘವ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.17: ನಿನ್ನೆ  ಸಂಜೆ ನಗರದ ರಾಘವ ಕಲಾಮಂದಿರದಲ್ಲಿ, ರಾಘವ ಮೆಮೋರಿಯಲ್ ಅಸೋಸಿಯೇಷನ್ ನಾಟ್ಯ ಕಲಾ ಪ್ರಪೂರ್ಣ  ಬಳ್ಳಾರಿ ರಾಘವರ 78ನೇ   ಪುಣ್ಯ ತಿಥಿ ಹಮ್ಮಿಕೊಂಡಿತ್ತು.
ರಾಘವರ ಬಗ್ಗೆ ನಿವೃತ್ತ ಉಪನ್ಯಾಸಕ ಎನ್.ಬಸವರಾಜು   ಮಾತನಾಡಿ, ನಾಟಕ ರಂಗದಲ್ಲಿ  ಅದ್ವಿತೀಯ ನಟನಾಗಿ ಬಳ್ಳಾರಿಯ ಕೀರ್ತಿಯನ್ನು ಜಗತ್ತಿಗೆ ಸಾರಿದವರು ರಾಘವರು.1880 ರಲ್ಲಿ ಜನಿಸಿದ ಅವರು 1946 ಎ.16 ರಂದು ಹಂಪಿ ಹುಣ್ಣಿಮೆಯಂದು ಸ್ವರ್ಗಸ್ಥರಾದರು. ಕನ್ನಡ, ತೆಲುಗು, ಇಂಗ್ಲೀಷ್ ಸೇರಿದಂತೆ  ಪಂಚಭಾಷೆಗಳಲ್ಲಿ ಅಭಿನಯಿಸಿದ್ದಲ್ಲದೆ.  ನಾಟಕರಂಗದಲ್ಲಿ ತರಬೇಕಾದ ಸುಧಾರಣೆಗಳ ಬಗ್ಗೆ ದೇಶ ವಿದೇಶಗಳಲ್ಲಿ ಸುತ್ತಿ ಅಧ್ಯಯನ ಮಾಡಿದರು.ಕೋಲಾಚಲಂ ಶ್ರೀನಿವಾಸರಾವ್ ಮತ್ತು ಸೋದರ ಮಾವರಾಗಿದ್ದ ಧರ್ಮಾವರಂ ಕೃಷ್ಣಮಾಚಾರ್ಯರ ನಾಟಕಗಳಲ್ಲಿ ಅಭಿನಯಿದರು.
ವೃತ್ತಿಯಲ್ಲಿ ಖ್ಯಾತ ವಕೀಲರಾಗಿ ಪ್ರವೃತ್ತಿಯಲ್ಲಿ ರಂಗ ನಟರಾಗಿ    ಚಿರಸ್ಮರಣೀಯರಾಗಿದ್ದಾರೆಂದರು.
ಕಾರ್ಯಕ್ರಮ ನಿರ್ವಹಣೆ ಯನ್ನು ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್.ಪ್ರಕಾಶ್  ನಿರ್ವಹಿಸಿದರು.  ಗೌರವಾಧ್ಯಕ್ಷ  ಕೆ ಚನ್ನಪ್ಪ,
ಅಧ್ಯಕ್ಷ  ಕೆ.  ಕೊಟೆಶ್ವರ ರಾವ್ ಮೊದಲಾದವರು   ಭಾಗವಹಿಸಿದ್ದರು.
ನಂತರ ಧಾತ್ರಿ ರಂಗ ಸಂಸ್ಥೆ ಸಿರಿಗೇರಿ ತಂಡದಿಂದ.  ಶ್ರೀ ಮಹಾಂತೇಶ್ ರಾಮದುರ್ಗ ರಚನೆ – ನಿರ್ದೇಶನದಲ್ಲಿ “ಸೋರುತಿಹುದು ಸಂಬಂಧ”  ನಾಟಕ ನೆರೆದ ಪ್ರೇಕ್ಷಕರ ಮನ ಸೂರೆ ಗೊಂಡಿತು.