ಕಾಂಗ್ರೆಸ್ ಸೇರಿದ ಸಂಗಣ್ಣ ಕರಡಿ
(ಸಂಜೆವಾಣಿ ವಾರ್ತೆ)
ಕೊಪ್ಪಳ, ಏ.17: ಬೆಂಗಳೂರಿನಲ್ಲಿ ಇಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ  ಕೊಪ್ಪಳದ ಹಾಲಿ ಬಿಜೆಪಿ ಸಂಸದರಾಗಿದ್ದ   ಕರಡಿ ಸಂಗಣ್ಣ    ಹಾಗೂ ಅವರ ಪುತ್ರ   ಅಮರೇಶ ಕರಡಿ ಕಾಂಗ್ರೆಸ್‌ ಸೇರ್ಪಡೆಯಾದರು.
ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಚಿವ ಶಿವರಾಜ ತಂಗಡಗಿ, ಶಾಸಕರಾದ ಲಕ್ಷ್ಮಣ ಸವದಿ, ರಾಘವೇಂದ್ರ ಹಿಟ್ನಾಳ, ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಪಾಲ್ಗೊಂಡಿದ್ದರು.