ಶಿಕ್ಷಕರ ಆಶೀರ್ವಾದವಿಲ್ಲದೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ವಿದ್ಯಾರ್ಥಿಗಳಿಗೆ ನ್ಯಾಯಮೂರ್ತಿ ಹುದ್ದಾರ್ ಸಲಹೆ
ಕಲಬುರಗಿ:ಸೆ.20: ಶಿಕ್ಷಕರ ಸಾಮಥ್ರ್ಯದ ಬಗ್ಗೆ ಟೀಕೆ ಮಾಡಬೇಡಿ, ಶಿಕ್ಷಕರ ಆಶೀರ್ವಾದವಿಲ್ಲದೆ ನೀವು ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರು ಹೇಳಿದರು.
ಜಿಲ್ಲೆಯ ಅಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹೊಸದಾಗಿ ಪ್ರವೇಶ ಪಡೆದ ಪಿಜಿ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮದ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಅವರು, ಶಿಕ್ಷಕರು ತರಗತಿಯಲ್ಲಿ ಕಲಿಸಲು ತುಂಬಾ ಶ್ರಮಿಸುತ್ತಾರೆ. ಅವರು ತರಗತಿಯ ತಯ್ಯಾರಿಗಾಗಿ ಸಾಕಷ್ಟು ಸಮಯವನ್ನು ಕಳೆಯುತ್ತಾರೆ. ಶಿಕ್ಷಕರನ್ನು ಗೌರವಿಸಿ, ಸಮಯಪಾಲನೆ ಮಾಡಿ ಮತ್ತು ತರಗತಿಯಲ್ಲಿ ಗಮನ ಕೊಟ್ಟು ಪಾಠ ಕೇಳಿ ಎಂದರು.
ವಿಶ್ವವಿದ್ಯಾಲಯ ಕ್ಯಾಂಪಸ್‍ನಲ್ಲಿ ನಿಮ್ಮ ವಾಸ್ತವ್ಯವನ್ನು ಸರಿಯಾಗಿ ಬಳಸಿಕೊಳ್ಳಿ ಮತ್ತು ಇನ್ನಷ್ಟು ತಿಳಿದುಕೊಳ್ಳಿ. ಮೊಬೈಲ್ ಫೆÇೀನ್ ವ್ಯಸನಿಯಾಗಬೇಡಿ, ಯಾವಾಗಲೂ ಕಷ್ಟಪಟ್ಟು ಕೆಲಸ ಮಾಡಿ. ವಿದ್ಯಾರ್ಥಿಗಳು ಯಾವಾಗಲು ಜ್ಞಾನವನ್ನು ಅರಸಿಕೊಂಡು ಹೋಗಬೇಕು ಮತ್ತು ಉತ್ತಮ ಅಂಕ ಗಳಿಸಬೇಕು. ಅಂಕಗಳು ನಿಮ್ಮ ಜ್ಞಾನದ ಸೂಚ್ಯಂಕವಾಗಿವೆ. ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ಇಂದಿನ ಜ್ಞಾನ ಆಧಾರಿತ ಆರ್ಥಿಕತೆಯಲ್ಲಿ ರಾಷ್ಟ್ರಕ್ಕೆ ಆಸ್ತಿಯಾಗಿ. ಕಾನೂನು ವಿಷಯ ಸೇರಿದಂತೆ ಎಲ್ಲಾ ವಿಭಾಗಗಳಿಗೆ ವಿಫುಲ ಅವಕಾಶಗಳಿವೆ, ಅವುಗಳನ್ನು ಪಡೆದುಕೊಳ್ಳಲು ನೀವು ಸಮರ್ಥರಾಗಿರಬೇಕು. ಅದಕ್ಕಾಗಿ ನೀವು ಕಷ್ಟಪಟ್ಟು ಬಹಳಷ್ಟು ಓದಬೇಕು ಎಂದು ಅವರು ಹೇಳಿದರು.
ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದ ಎಲ್ಲ ಯಶಸ್ಸಿಗೆ ಶಿಕ್ಷಣವೇ ಆಧಾರ. ಜೀವನದಲ್ಲಿ ಮೇಲಕ್ಕೆ ಬರಲು ವಿಶ್ವವಿದ್ಯಾಲಯದ ಸಂಪನ್ಮೂಲ ಮತ್ತು ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಿ. ಭೌತಿಕ ಸಂಪತ್ತು ಶಾಶ್ವತವಲ್ಲ, ಜ್ಞಾನವೇ ನಿಜವಾದ ಸಂಪತ್ತು. ಜ್ಞಾನ ಮತ್ತು ಸುಸಂಸ್ಕøತ ವ್ಯಕ್ತಿತ್ವದೊಂದಿಗೆ ನಿಮ್ಮ ಜೀವನನ್ನು ನಿರ್ಮಿಸಿ. ಸಮಾಜದಲ್ಲಿ ಒಳ್ಳೆಯವರ ಕೊರತೆಯಿದೆ, ರಾಷ್ಟ್ರದ ಉತ್ತಮ ಪ್ರಜೆಯಾಗಿರಿ ಎಂದರು.
ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ್ ಅವರು ಮಾತನಾಡಿ, ಕಠಿಣ ಪರಿಶ್ರಮ, ಆತ್ಮವಿಶ್ವಾಸ, ಪ್ರಾಮಾಣಿಕತೆ, ಸಕಾರಾತ್ಮಕ ಚಿಂತನೆ, ಇತರರೊಂದಿಗೆ ಹೋಲಿಕೆ ಮಾಡದಿರುವುದು, ಭಾವನಾತ್ಮಕ ಸ್ಥಿರತೆ, ಸ್ವಯಂ ನಿಯಂತ್ರಣ ಮತ್ತು ಸ್ವಯಂ ಶಿಸ್ತು ವಿದ್ಯಾರ್ಥಿಗಳ ಜೀವನದ ಸುವರ್ಣ ನಿಯಮಗಳು, ಅವುಗಳನ್ನು ಅನುಸರಿಸಿ ಎನ್‍ಎಸ್‍ಎಸ್ ಮತ್ತು ಯೋಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಪೆÇ್ರಕ್ಟರ್ ಡಾ. ವೆಂಕಟರಮಣ ದೊಡ್ಡಿ, ಪರೀಕ್ಷಾ ನಿಯಂತ್ರಕ ಕೋಟ ಸಾಯಿಕೃಷ್ಣ, ಗ್ರಂಥಪಾಲಕ ಡಾ. ಪಿ.ಎಸ್. ಕಟ್ಟಿಮನಿ, ಆಂತರಿಕ ದೂರು ಸಮಿತಿ ಅಧ್ಯಕ್ಷೆ ಪೆÇ್ರ. ಸುನೀತಾ ಮಂಜನಬೈಲ್, ಸಂಶೋಧನಾ ಮತ್ತು ಅಭಿವೃದ್ಧಿ ಕೋಶ ಹಾಗೂ ನೋಡಲ್ ಅಧಿಕಾರಿ ಕುಂದುಕೊರತೆ ಕೋಶ ಪೆÇ್ರ. ಸತ್ಯನಾರಾಯಣ, ಮುಖ್ಯ ವಾರ್ಡನ್ ಡಾ.ಬಸವರಾಜ್ ಎಂ.ಎಸ್. ಸಾಂಸ್ಕೃತಿಕ ಸಂಯೋಜಕ ಡಾ. ಮಲ್ಲಿಕಾರ್ಜುನ್ ಎಸ್. ಹೂಗಾರ್ ಅವರು ತಮ್ಮ ಇಲಾಖೆಗಳು ಮತ್ತು ಕೋಶಗಳು ಒದಗಿಸುವ ಸೌಲಭ್ಯಗಳು ಮತ್ತು ಸೇವೆಗಳ ಕುರಿತು ಮಾತನಾಡಿದರು.
ಡೀನ್ ವಿದ್ಯಾರ್ಥಿಗಳ ಕಲ್ಯಾಣಾಧಿಕಾರಿ ಡಾ. ಬಸವರಾಜ್ ಕುಬಕಡ್ಡಿ ಅವರು ಸ್ವಾಗತಿಸಿ, ವಂದಿಸಿದರು. ಈ ಸಂದರ್ಭದಲ್ಲಿ ವಿಜ್ಞಾನೇಶ್ವರ ಪ್ರತಿμÁ್ಠನದ ಕಾರ್ಯದರ್ಶಿ ಮಹದೇವಯ್ಯ ಕರದಳ್ಳಿ, ಡೀನ್‍ರು, ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.