ಮನೆ ಬೀಗ ಮುರಿದು ಚಿನ್ನ, ಬೆಳ್ಳಿ ಆಭರಣ ಕಳವು
ಕಲಬುರಗಿ,ಸೆ.20-ಮನೆ ಬೀಗ ಮುರಿದು 90,400 ರೂ.ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ನಗರದ ಎಸ್.ಎಂ.ಕೃಷ್ಣ ಕಾಲೋನಿಯಲ್ಲಿ ನಡೆದಿದೆ.
ಗುರುನಾಥ ಮರೆಪ್ಪ ನಾಟೇಕರ್ ಎಂಬುವರ ಮನೆ ಬೀಗ ಮುರಿದು ಕಳ್ಳರು, ಅಲಮಾರದಲ್ಲಿಟ್ಟಿದ್ದ 20 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಬೋರಮಳ, 20 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಜೀರಾಮಣಿ, 40 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ನೆಕ್ಲೆಸ್, 8 ಸಾವಿರ ರೂ.ಮೌಲ್ಯದ 2 ಗ್ರಾಂ.ಬಂಗಾರದ ಕಿವಿಯೋಲೆ, 2,400 ರೂ.ಮೌಲ್ಯದ 40 ಗ್ರಾಂ.ಬೆಳ್ಳಿಯ ಕಾಲಗಡಗ ಸೇರಿ 22 ಗ್ರಾಂ.ಬಂಗಾರದ ಆಭರಣ ಮತ್ತು 40 ಗ್ರಾಂ.ಬೆಳ್ಳಿಯ ಆಭರಣ ಸೇರಿ 90,400 ರೂ.ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣ ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಸಂಬಂಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.