ಕಾರ್ಮಿಕರಿಗೆ ಕಾಯ್ದೆಗಳು, ಕಾನೂನುಗಳು ತುಂಬಾ ಅವಶ್ಯಕ:ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ
ಕಲಬುರಗಿ:ಸೆ.20: ಕಾರ್ಮಿಕರಿಗೆ ಕಾಯ್ದೆಗಳು ಕಾನೂನುಗಳು ತುಂಬಾ ಅವಶ್ಯಕವಾಗಿದೆ. ಭಾರತ ದೇಶವು 2047 ರಲ್ಲಿ 500 ಲಕ್ಷ ಕೋಟಿ ಅರ್ಥಿಕ ಶಕ್ತಿಯಾಗುತ್ತದೆ ಎಂದು ಒಂದು ವರದಿ ಹೇಳಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಶ್ರೀನಿವಾಸ ನವಲೆ ಅವರು ಹೇಳಿದರು.
ಶುಕ್ರವಾರದಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಕಾರ್ಮಿಕ ಇಲಾಖೆ ಕಲಬುರಗಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳು ಹಾಗೂ ಯೋಜನೆಗಳು ಮತ್ತು ಬಡತನ ನಿರ್ಮೂಲನೆ ಪರಿಣಾಮಕಾರಿ ಅನುಷ್ಠಾನದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಫಾಟಿಸಿ ಮಾತನಾಡಿದರು.
ಭಾರತ ಅಭಿವೃದ್ದಿಯಾಗಬೇಕಾದರೆ.ಇಂತಹ ಒಂದು ಕೈಗಾರಿಕೆ ಕಾನೂನುಗಳು ಕಾಯ್ದೆಗಳು ಅವಶ್ಯಕವಾಗಿದೆ.ಕೈಗಾರಿಕೆ ಕಾನೂನುಗಳನ್ನು ಮಾಡಿ ಅದು ಅನುಷ್ಠಾನಕ್ಕೆ ತರದೆ ಅದು ಕೇವಲ ಕಾಗದದಲ್ಲಿ ಇದ್ದಾರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಹೊಸ ಹೊಸ ಕಾನೂನುಗಳು ಯೋಜನೆಗಳು ತಿಳಿದುಕೊಂಡರೆ ದೇಶದ ನಿರ್ಮಾಣ ಕಾರ್ಯದಲ್ಲಿ ನಾವು ನಮ್ಮ ಕೊಡುಗೆಯನ್ನ ನೀಡಬಹುದಾಗಿದೆ. ಬದಲಾದ ಕಾಲದಲ್ಲಿ ಹೊಸ ಹೊಸ ಕಾನೂನು ಕಾಯ್ದೆಗಳು ಬಂದಿವೆ ಅವನ್ನ ತಿಳಿದುಕೊಳ್ಳದೆ ಇದ್ದಾರೆ ನಾವು ಹಿಂದೆ ಉಳಿಯುತ್ತವೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದರು.,
ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ ಹಾಗಾಗಿ ಪೋಷಕರಿಗೆ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವಂತೆ ಅವರಿಗೆ ಮನವರಿಕೆ ಮಾಡಬೇಕು ಅಂದ್ದಾಗ ಮಾತ್ರ ಬಾಲಕಾರ್ಮಿಕತೆ ತಡೆಯಲು ಸಾಧ್ಯವಾಗುತ್ತದೆ. ಬಾಲ ಕಾರ್ಮಿಕರಾಗಲು ಮುಖ್ಯ ಕಾರಣ ಬಡತನವಾಗಿದೆ ಬಡತನವನ್ನು ನಿರ್ಮೂಲನೆ ಮಾಡುವಂತಹ ನಿಟ್ಟನಲ್ಲಿ ನಾವು ಯೋಜನೆಗಳು ಕಾರ್ಯಗಳನ್ನು ಮಾಡಬೇಕಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕಲಬುರಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಮೊಹೊಮ್ಮದ್ ಬಷೀರ್ ಅನ್ಸಾರಿ ಮಾತನಾಡಿ, ಈ ಹಿಂದೆ ಇದ್ದಂತಹ ಕಾನೂನುಗಳನ್ನೆ ನವೀಕರಣ ಮಾಡುಲಾಗುತ್ತಿದೆ. ಕಾರ್ಮಿಕ ವರ್ಗದವರು ಯಾವುದೇ ಸೌಲಭ್ಯವನ್ನು ಪಡೆಯುವುದಕ್ಕಾಗಿ ಅವರಿಗೆ ಕಾನೂನು ಮಾಹಿತಿ ಪಡೆಯಬೇಕಾದದ್ದು ಅವಶ್ಯಕವಾಗಿದೆ.ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಎನ್ ಸಿ ಎಲ್ ಅಧ್ಯಕ್ಷ ಶಂಕರ ಕಟ್ಟಿಸಂಗಾವಿ ಮಾತನಾಡಿ ಹಲವು ಕಾರ್ಮಿಕ ವರ್ಗದ ಧ್ವನಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಮಾಹಿತಿ ಕೊರತೆಯಿಂದ ಹಲವು ಕಾರ್ಮಿಕ ವರ್ಗದವರು ಸೌಲಭ್ಯ ವಂಚಿತರಾಗುತ್ತಾರೆ ಇವತ್ತಿನ ಕಾರ್ಯಕ್ರಮವು ಮಾಹಿತಿ ನೀಡುವಂತಹ ಒಂದು ಮಹಾಶಕ್ತಿಯಾಗಿದೆ.ಕಾರ್ಮಿಕರಿಗೆ ಎಲ್ಲಾ ಸೌಲಭ್ಯವನ್ನು ಪಡೆಯಲು ಕಾರ್ಮಿಕ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ನಾವೆಲ್ಲರು ಒಗ್ಗಟಿನಿಂದ ಕೆಲಸ ಮಾಡಿದಲ್ಲಿ ಇದು ಸಾಧ್ಯವಾಗುತ್ತದೆ.
ಕಲಬುರಗಿ ವಿಭಾಗ ಸಹಾಯಕ ಕಾರ್ಮಿಕ ಆಯುಕ್ತ ಮೊಹೊಮ್ಮದ್ ಬಷೀರ್ ಅನ್ಸಾರಿ ಅಧ್ಯಕ್ಷತೆ ವಹಿಸಿದ್ದರು.
ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್ ಮಾತನಾಡಿದರು.
ಕಲಬುರಗಿ ಉಪವಿಭಾಗದ ಕಲಬುರಗಿ ಕಾರ್ಮಿಕ ಅಧಿಕಾರಿ ಶರಣಪ್ಪ ಆರ್ ಹಳಿಮನಿ ಸ್ವಾಗತಿಸಿದರು.
ಕಾರ್ಮಿಕ ಅಧಿಕಾರಿ ಶರಣಪ್ಪ ಆರ್. ಹಳಿಮನಿ, ಸ್ವಾಗತಿಸಿದರು. ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಇನ್‍ಬ್ರಿವ ಯುನಿಟ್ ಎಚ್.ಆರ್. ಅಜಯ ಚವ್ಹಾಣ, ಕಲಬುರಗಿ ಕಲ್ಯಾಣ ಕರ್ನಾಟಕ ಚೆಂಬರ್ ಆಫ್ ಕಾಮರ್ಸ್ ಮಂಜುನಾಥ ಜೇವರ್ಗಿ, ಸ್ವರ್ಣಕಾರ ಸಂಘದ ಅಧ್ಯಕ್ಷರಾದ ಅರವಿಂದ ಪೊದ್ದಾರೆ, ಸೇರಿದಂತೆ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.