ವಿಕಲಾಂಗ ೮೫ ವರ್ಷ ವಯೋವೃದ್ದರಿಗೆ ಮನೆ ಮತದಾನ
ಶಿಡ್ಲಘಟ್ಟ,ಏ,೧೭:೮೫ ವರ್ಷ ಮೇಲ್ಪಟ್ಟ ವಯೋಮಾನದ ಹಾಗೂ ವಿಕಲಾಂಗ ಚೇತನರಿಗೆ ತಾಲೂಕಿನಾದ್ಯಾಂತ ಮನೆ ಮನೆಗೆ ತೆರಳಿ ಮತದಾನ ಕಾರ್ಯವು ನಡೆಸಲಾಗುತ್ತಿದೆ ಎಂದು ೧೭ನೇ ಸೆಕ್ಟರ್ ಅಧಿಕಾರಿ ಎಚ್ ಸಿ ಮುನಿರಾಜು ತಿಳಿಸಿದರು.
ಕೋಲಾರ ಲೋಕಸಭಾ ಚುನಾವಣೆ ಏಪ್ರಿಲ್ ೨೬ ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು ಅಷ್ಟರಲ್ಲಿ ಮತಗಟ್ಟೆ ಗಳಿಗೆ ಬರಲು ಆಗದೆ ಇರುವ ಮತದಾರರ ಮನೆಯ ಹತ್ತಿರ ಹೋಗಿ ಅವರ ಮತದಾನದ ಹಕ್ಕನ್ನು ಚಲಾವಣೆ ಮಾಡಿಸಲಾಗುತ್ತಿದೆ, ಭಾರತದ ಪ್ರತಿಯೊಬ್ಬ ಮತದಾರರು ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಭಾರತದ ಚುನಾವಣಾ ಆಯೋಗವು ಈ ವಿಶೇಷವಾದ ಸೌಲಭ್ಯವನ್ನು ಒದಗಿಸಿಕೊಟ್ಟಿರುವುದರಿಂದ ಈಗಾಗಲೆ ಗ್ರಾಮಗಳಲ್ಲಿರುವ ವೃದ್ದರನ್ನು ಹಾಗೂ ಅಂಗವಿಕಲರನ್ನು ಈಗಾಗಲೇ ಬಿ.ಎಲ್.ಓ ಗಳು ಪಟ್ಟಿ ಮಾಡಲಾಗಿದ್ದು ಅದರ ಅನ್ವಯ ಇಂದಿನಿಂದ ಮತದಾನ ಮಾಡಿಸಲಾಗುತ್ತಿದೆ ಎಂದರು.
೧೭ನೇ ಸೆಕ್ಟರ್ ನಲ್ಲಿ ಬರುವ ಬೆಳ್ಳೂಟಿ, ಭಕ್ತರಹಳ್ಳಿ, ಕಾಕ ಚೊಕ್ಕಂಡಹಳ್ಳಿ, ನಾಗಮಂಗಲ, ನಡಪಿನಾಯಕನಹಳ್ಳಿ, ತೊಟ್ಲಗಾನಹಳ್ಳಿ, ತಾದೂರು, ಬಸವಪಟ್ಟಣ ಈ ಮತಗಟ್ಟೆಗಳಲ್ಲಿ ಇರುವ ಮತದಾರರ ಪಟ್ಟಿಯಂತೆ ೧೩ ಜನ ೮೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ೧೪ ಜನ ವಿಕಲಾಂಗ ಚೇತನರಿಗೆ ಒಟ್ಟು ೨೭ ಜನರ ಮನೆ ಮತದಾನ ಮಾಡಿಸಲಾಯಿತು ಎಂದರು.
೧೭ನೇ ಸೆಕ್ಟರ್ ತಂಡದಲ್ಲಿ ಸೆಕ್ಟರ್ ಅಧಿಕಾರಿಯದ ಎಚ್ ಸಿ ಮುನಿರಾಜು ಮೈಕ್ರೋ ಅಬ್ಸರ್ವರ್, ಎ.ವಿ ವೆಂಕಟರಾವ್, ಮತದಾನದ ಸಿಬ್ಬಂದಿ ಬಿ.ಎಸ್. ರಾಘವೇಂದ್ರ , ರವಿಕುಮಾರ್ ಎಸ್, ಪೋಲಿಸ್ ಸಿಬ್ಬಂದಿ ಪ್ರವೀಣ್ ,ವಿಡಿಯೋ ಗ್ರಾಫರ್ ಎಸ್ ರಾಮಾಂಜಿ ,ಕಂದಾಯ ಇಲಾಖೆಯ ಪ್ರಶಾಂತ್ ,ಕಾರ್ತಿಕ್, ಸಿದ್ದಪ್ಪ, ಮೋಹನ್ ,ವರಲಕ್ಷ್ಮಿ ,ಬಸವರಾಜು ,ಹಾಗೂ ಸಂಬಂಧಪಟ್ಟ ಮತಗಟ್ಟೆಗಳ ಬಿ ಎಲ್ ಓ ರವರು ಭಾಗವಹಿಸಿದ್ದರು.