ಮತಕ್ಕಾಗಿ ಡಿ.ಕೆ.ಸುರೇಶ್‌ರಿಂದ ಕುಕ್ಕರ್, ಸೀರೆ
ಆನೇಕಲ್.ಏ.೧೭:ಸಂಸದ ಡಿ.ಕೆ. ಸುರೇಶ್ ರವರು ಕ್ಷೇತ್ರದಲ್ಲಿ ಅಭಿವೃದ್ದಿ ಮಾಡಿದ್ದರೆ ಮತದಾರರಿಗೆ ಕುಕ್ಕರ್, ಸೀರೆಗಳನ್ನು ಏಕೆ ವಿತರಣೆ ಮಾಡಬೇಕಿತ್ತು ಎಂದು ಜೆಡಿಎಸ್ ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್ ಆರೋಪ ವ್ಯಕ್ತ ಪಡಿಸಿದರು.
ಅವರು ಅತ್ತಿಬೆಲೆಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಡಾ ಬಿ.ಆರ್ ಅಂಬೇಡ್ಕರ್ ಅವರ ೧೩೩ ನೇ ವರ್ಷದ ಜಯಂತೋತ್ಸವ ಮತ್ತು ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎನ್.ಡಿ.ಎ. ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ರವರ ಸ್ವರ್ದೇಯಿಂದ ಡಿ.ಕೆ.ಸುರೇಶ್ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಭಯ ವುಂಟಾಗಿದೆ. ಡಿ.ಕೆ.ಸುರೇಶ್ ಸೋಲುತ್ತಾನೆ ಎಂಬುವ ಸತ್ಯ ಅವರಿಗೆ ಗೊತ್ತಾಗಿ ಮತದಾರರಿಗೆ ಆಮಿಷಗಳನ್ನು ನೀಡಿ ತಮ್ಮ ಕಡೆಗೆ ಮತ ಸೆಳೆಯುವಂತಹ ಕೆಲಸ ಮಾಡುತ್ತಿದ್ದಾರೆ ಆದರೆ ಈ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮತದಾರರು ಪ್ರಜ್ಞಾವಂತರಾಗಿದ್ದಾರೆ ಯಾರೇ ಏನೇ ಆಮಿಷಗಳನ್ನು ಒಡ್ಡಿದರು ಸಹ ಈ ಬಾರಿ ಡಾ|| ಸಿಎನ್ ಮಂಜುನಾಥ್ ರವರನ್ನು ಬೆಂಬಲಿಸುತ್ತಾರೆ ಡಾ. ಸಿಎನ್ ಮಂಜುನಾಥ್ ಗೆದ್ದೇ ಗೆಲ್ಲುತ್ತಾರೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಪ್ರಧಾನ ನರೇಂದ್ರ ಮೋದಿರವರ ಮಾಡಿರುವ ಸಾಧನೆಗಳು ಮತ್ತು ದೇವೇಗೌಡರ ಮತ್ತು ಕುಮಾರಸ್ವಾಮಿರವರು ಮಾಡಿರುವ ಜನಪರ ಕಾರ್ಯಕ್ಕೆ ಮೆಚ್ಚಿ ರಾಜ್ಯದ ಜನತೆ ಈ ಬಾರಿ ಎನ್.ಡಿ.ಎ ಅಭ್ಯರ್ಥಿಗಳಿಗೆ ಮತಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ೨೮ ಸ್ಥಾನಕ್ಕೆ ೨೮ ಸ್ಥಾನಗಳು ಎನ್.ಡಿ.ಎ. ಅಭ್ಯರ್ಥಿಗಳು ಗೆಲುವು ಸಾದಿಸಲಿದ್ದಾರೆ ಎಂದರು.
ಸಿದ್ದರಾಮಯ್ಯರವರ ನೇತೃತ್ವ ಸರ್ಕಾರ ನೀಡುವ ಗ್ಯಾರಂಟಿಗಳು ಈಗಾಗಲೇ ಟುಸ್ ಆಗಿದ್ದು ರಾಜ್ಯ ಜನತೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಲೋಕಸಭೆ ಚುನಾವಣೆ ಪಲಿತಾಂಶ ಬಂದು ಆರು ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಥನವಾಗುತ್ತದೆ ಮತ್ತೊಮ್ಮೆ ರಾಜ್ಯದಲ್ಲಿ ಎನ್.ಡಿ.ಎ. ಸರ್ಕಾರ ಅದಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ನೂರಾರು ಯುವಕರು ಜೆಡಿಎಸ್ ಪಕ್ಷದ ಸಿದ್ದಾಂತವನ್ನು ಮೆಚ್ಚಿ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಜೆಡಿಎಸ್ ಪಕ್ಷದ ಎಸ್ಸಿ,ಎಸ್ಪಿ ಘಟಕದ ರಾಜ್ಯ ಪ್ರದಾನ ಕಾರ್ಯದರ್ಶಿ ಪಟಾಪಟ್ ರವಿ, ತಾಲ್ಲೂಕು ಅಧ್ಯಕ್ಷ ದೇವೇಗೌಡರು, ಕಾರ್ಯಾಧ್ಯಕ್ಷ ಕೆ.ಪಿ.ಎನ್. ರೆಡ್ಡಿ, ಪ್ರಜ್ವಲ್ ರೇವಣ್ಣ ಬ್ರಿಗೇಡ್ ನ ರಾಜ್ಯಾಧ್ಯಕ್ಷ ಬಿದರಗುಪ್ಪೆ ನರೇಂದ್ರ ಬಾಬು, ಜೆಡಿಎಸ್ ಪಕ್ಷದ ಮುಖಂಡರಾದ ಅತ್ತಿಬೆಲೆ ಸೂರಿ ಬಿ.ಕೆ.ಬಷೀರ್, ಗೋವಿಂದರೆಡ್ಡಿ, ನಂಜಾರೆಡ್ಡಿ, ಸೋಲೂರು ಮಂಜು, ಅಮ್ ಜತ್, ಸ್ಯಾಂಡಿ. ಜೈಬೀಮ್ ಸೂರಿ, ಗಜೇಂದ್ರ, ಎಬಿಎಂ ಮಂಜುನಾಥ್, ಮದುಗೌಡ, ಪ್ರಭಾವತಿ, ರತ್ನಮ್ಮ, ಕನ್ನಡ ಸೋಮು, ಚೆಕ್ ಪೋಸ್ಟ್ ಮಂಜು, ಬಸವರಾಜು, ಅಜಿತ್ ಬಾಗವಹಿಸಿದ್ದರು.