ಹಿರಿಯ ವಯಸ್ಸಿನ ಮತದಾರರ ಮನೆ ಮತದಾನಕ್ಕೆ ಚಾಲನೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.17:- ಚುನಾವಣಾ ಆಯೋಗದ ನಿರ್ದೇಶನದಂತೆ ಇಂದು ತಾಲ್ಲೂಕಿನಲ್ಲಿ ಹಿರಿಯ ವಯಸ್ಸಿನ ಮತದಾರರಿಗೆ ಮನೆಮನೆ ಮತದಾನಕ್ಕೆ ಸೆಕ್ಟರ್ ಅಧಿಕಾರಿ ಕೆ.ಡಿ.ಜಗದೀಶ್ ನೇತೃತ್ವದಲ್ಲಿ ತಾಲ್ಲೂಕಿನ ಶೀಳನೆರೆ ಹೋಬಳಿಯ ಬೇಲದಕೆರೆ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ಈ ಕುರಿತು ಮಾತನಾಡಿದ ಸೆಕ್ಟರ್ ಅಧಿಕಾರಿ ಕೆ.ಡಿ.ಜಗದೀಶ್ ಚುನಾವಣಾ ಆಯೋಗದ ಸೂಚನೆಯಂತೆ ಇಂದಿನಿಂದ ಮನೆಮನೆ ಮತದಾನ ಮಾಡಿಸುವ ಉದ್ದೇಶದಿಂದ ಮತದಾನದ ಪೂರ್ಣ ತಂಡ ನಿರ್ದಿಷ್ಟಪಡಿಸಿದ ಹರಳಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಮನೆಗಳಿಗೆ ತೆರಳಿ ಮತದಾನ ಮಾಡಿಸಲಾಯಿತು. ಇಂದು 28 ಮತದಾರರಿಂದ ಮತದಾನ ಮಾಡಿಸಲಾಗಿದ್ದು ಇನ್ನೂ ಎರಡು ದಿನಗಳ ಕಾಲ ನಮ್ಮ ವ್ಯಾಪ್ತಿಯ ಮತದಾರರ ಬಳಿಗೆ ತೆರಳಿ ಮತದಾನ ಮಾಡಿಸಲಾಗುವುದು. ಮತದಾನ ಮಾಡಿಸುವಾಗ ಆಯೋಗದ ಸೂಚನೆಯನ್ನು ಚಾಚೂ ತಪ್ಪದೇ ಪಾಲಿಸಲಾಗಿದ್ದು ಚುನಾವಣಾ ಗೌಪ್ಯತೆಯನ್ನು ಕಾಪಾಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮೈಕೋ ಅಬ್ಸರ್ವರ್ ಕಾರ್ತಿಕ್, ಪಿ.ಆರ್.ಓ ಹೆಚ್.ಎಂ.ಬಸವರಾಜಪ್ಪ, ಬಿ.ಎಲ್.ಓ ಪ್ರಮೀಳ, ಸೇರಿದಂತೆ ಹಲವರಿದ್ದರು.